India vs Australia Test Series: ವರುಣನಿಂದ 2ನೇ ದಿನದಾಟ ಸ್ಥಗಿತ
ಭಾರತ- ಆಸ್ಟ್ರೇಲಿಯಾ ನಡುವಿನ ಅಂತಿಮ ಟೆಸ್ಟ್ ಮಳೆಯಿಂದ ಕೆಲಕಾಲ ಸ್ಥಗಿತಗೊಂಡಿದೆ. ಮಳೆಗೂ ಮುನ್ನ ಆಸ್ಟ್ರೇಲಿಯಾ ನೀಡಿರುವ 369 ರನ್ಗಳನ್ನು ಬೆನ್ನತ್ತಿರುವ ಟೀಂ ಇಂಡಿಯಾ ಪ್ರಮುಖ 2 ವಿಕೆಟ್ ಕಳೆದುಕೊಂಡು 62 ರನ್ ಗಳಿಸಿದೆ.
ಬ್ರಿಸ್ಬೇನ್: ಭಾರತ- ಆಸ್ಟ್ರೇಲಿಯಾ ನಡುವಿನ ಅಂತಿಮ ಟೆಸ್ಟ್ ಮಳೆಯಿಂದ ಕೆಲಕಾಲ ಸ್ಥಗಿತಗೊಂಡಿದೆ. ಮಳೆಗೂ ಮುನ್ನ ಆಸ್ಟ್ರೇಲಿಯಾ ನೀಡಿರುವ 369 ರನ್ಗಳನ್ನು ಬೆನ್ನತ್ತಿರುವ ಟೀಂ ಇಂಡಿಯಾ ಪ್ರಮುಖ 2 ವಿಕೆಟ್ ಕಳೆದುಕೊಂಡು 62 ರನ್ ಗಳಿಸಿದೆ.
2ನೇ ದಿನದಾಟದಲ್ಲಿ ಆಸ್ಟ್ರೇಲಿಯಾ ತಂಡ ತನ್ನ ಬತ್ತಳಿಕೆಯಲ್ಲಿದೆ 5 ವಿಕೆಟ್ಗಳನ್ನ ಕಳೆದುಕೊಂಡು ಟೀಂ ಇಂಡಿಯಾಕ್ಕೆ 369 ರನ್ಗಳ ಸವಾಲು ನೀಡಿದೆ. ಸವಾಲಿನ ಮೊತ್ತವನ್ನು ಬೆನ್ನತ್ತಿರುವ ಟೀಂ ಇಂಡಿಯಾಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮ ಹಾಗೂ ಶುಭ್ಮನ್ ಗಿಲ್ ಔಟಾಗಿ ಪೆವಿಲಿಯನ್ ಸೇರಿದ್ದಾರೆ.
ಇನ್ನಿಂಗ್ಸ್ ಆರಂಭದಲ್ಲೇ ಟೀಂ ಇಂಡಿಯಾದ ಆಟಗಾರ ಶುಭ್ಮನ್ ಗಿಲ್ 7 ರನ್ಗಳಿಸಿದ್ದಾಗ ಪ್ಯಾಟ್ ಕಮಿನ್ಸ್ಗೆ ವಿಕೆಟ್ ಒಪ್ಪಿಸಿದರು. ಆರಂಭದಿಂದಲ್ಲೂ ಆರ್ಭಟಿಸುತ್ತಿದ್ದ ರೋಹಿತ್ ಶರ್ಮ ಅಬ್ಬರಿಸುವ ಮುನ್ಸೂಚನೆ ನೀಡಿದ್ದರು. ಆದರೆ 47 ರನ್ ಗಳಿಸಿದ್ದ ರೋಹಿತ್ ನಾಥನ್ ಲಿಯನ್ ಬಲೆಗೆ ಬಿದ್ದರು. ಹೀಗಾಗಿ ಟೀಂ ಇಂಡಿಯಾ ಪ್ರಮುಖ 2 ವಿಕೆಟ್ ಕಳೆದುಕೊಂಡಿದೆ. ಸಾಲದೆಂಬಂತೆ ಟೀಂ ಇಂಡಿಯಾದ ಆಟಕ್ಕೆ ವರುಣ ಸಹ ಅಡ್ಡಿ ಪಡಿಸುತ್ತಿದ್ದು ಚಹಾ ವಿರಾಮದ ನಂತರ ಆಟಗಾರರು ಮೈದಾನಕ್ಕಿಳಿಯಲು ಮಳೆ ಅಡ್ಡಿಪಡಿಸಿದೆ.