ಮೂರೇ ದಿನಕ್ಕೆ ಮೊದಲ ಟೆಸ್ಟ್ ಮುಕ್ತಾಯ: ಎರಡು ದಿನ ಮುಂಚೆಯೇ ಭಾರತಕ್ಕೆ ಮರಳಲಿದ್ದಾರಾ ವಿರಾಟ್ ಕೊಹ್ಲಿ?
21ಕ್ಕೆ ಟೆಸ್ಟ್ ಮ್ಯಾಚ್ ಮುಗಿದಿದ್ದರೆ ವಿರಾಟ್ 22ಕ್ಕೆ ಫ್ಲೈಟ್ ಏರಿ 23ರಂದು ಭಾರತಕ್ಕೆ ಆಗಮಿಸುತ್ತಿದ್ದರು. ಆದರೆ, ಈಗ ಎರಡು ದಿನ ಮೊದಲೇ ಮ್ಯಾಚ್ ಮುಗಿದಿದ್ದು, ವಿರಾಟ್ ಪಾಲಿಗೆ ಇದು ವರದಾನವಾಗಿದೆ.
ಆಸ್ಟ್ರೇಲಿಯಾ ವಿರುದ್ಧದ ಪಿಂಕ್ ಬಾಲ್ ಟೆಸ್ಟ್ನಲ್ಲಿ ನಾಯಕ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಹೀನಾಯ ಸೋಲು ಕಂಡಿದೆ. ಈ ಬೆನ್ನಲ್ಲೇ ವಿರಾಟ್ ಕೊಹ್ಲಿ ಭಾರತಕ್ಕೆ ಮರಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಮೂಲಗಳ ಪ್ರಕಾರ ಅವರು ಇಂದು ಅಥವಾ ನಾಳೆ ಭಾರತಕ್ಕೆ ಹಿಂದಿರುಗುವ ಸಾಧ್ಯತೆ ಇದೆ.
ಮೊದಲ ಟೆಸ್ಟ್ ಪಂದ್ಯ ಡಿಸೆಂಬರ್ 21ಕ್ಕೆ ಪೂರ್ಣಗೊಳ್ಳಬೇಕಿತ್ತು. ಆದರೆ, ಟೀಂ ಇಂಡಿಯಾ ಬ್ಯಾಟ್ಸ್ಮನ್ಗಳ ಕಳಪೆ ಪ್ರದರ್ಶನದಿಂದಾಗಿ ಕೇವಲ ಮೂರೇ ದಿನಕ್ಕೆ ಅದು ಅಂತ್ಯ ಕಂಡಿತು. 21ಕ್ಕೆ ಟೆಸ್ಟ್ ಮ್ಯಾಚ್ ಮುಗಿದಿದ್ದರೆ ವಿರಾಟ್ 22ಕ್ಕೆ ವಿಮಾನ ಏರಿ 23ರಂದು ಭಾರತಕ್ಕೆ ಆಗಮಿಸುತ್ತಿದ್ದರು. ಆದರೆ, ಈಗ ಎರಡು ದಿನ ಮೊದಲೇ ಮ್ಯಾಚ್ ಮುಗಿದಿದ್ದು, ವಿರಾಟ್ ಪಾಲಿಗೆ ಇದು ವರದಾನವಾಗಿದೆ.
ನಾನು ಆ ಕ್ಷಣ ಮಿಸ್ ಮಾಡಿಕೊಳ್ಳಲ್ಲ ಅಂದಿದ್ರು ಕೊಹ್ಲಿ ಟೀಂ ಇಂಡಿಯಾದ ಪ್ರಮುಖ ಬ್ಯಾಟ್ಸ್ಮನ್ ಅನಿಸಿಕೊಂಡಿರುವ ರೋಹಿತ್ ಶರ್ಮಾ ಅವರ ಕ್ವಾರಂಟೈನ್ ಅವಧಿ ಮುಗಿಯೋಕೆ ಇನ್ನೂ ಒಂದು ವಾರ ಬಾಕಿ ಇದೆ. ಹೀಗಾಗಿ, ಅವರು ಎರಡನೇ ಟೆಸ್ಟ್ಗೆ ಅಲಭ್ಯರಾಗಿದ್ದಾರೆ. ಮೂರನೇ ಟೆಸ್ಟ್ ಮ್ಯಾಚ್ನಲ್ಲಿ ಅವರು ಟೀಂ ಇಂಡಿಯಾ ಸೇರಿಕೊಳ್ಳುವ ಸಾಧ್ಯತೆ ಇದೆ.
ಇಂಥ ಸಮಯದಲ್ಲಿ ನೀವು ಭಾರತಕ್ಕೆ ಹೋಗುವ ನಿರ್ಧಾರ ಮಾಡಿದ್ದೀರಲ್ಲ? ಎನ್ನುವ ಪ್ರಶ್ನೆ ವಿರಾಟ್ ಕೊಹ್ಲಿಗೆ ಎದುರಾಗಿತ್ತು. ಇದಕ್ಕೆ ಉತ್ತರಿಸಿದ್ದ ಕೊಹ್ಲಿ, ಏನೆ ಆದರೂ ನಾನು ಆ ವಿಶೇಷ ಕ್ಷಣವನ್ನು ಮಿಸ್ ಮಾಡಿಕೊಳ್ಳುವುದಿಲ್ಲ. ನಾನು ಭಾರತಕ್ಕೆ ತೆರಳುವ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದರು. ಈ ಮೂಲಕ ತಮಗೆ ಮಗು ಜನಿಸೋ ಸಮಯದಲ್ಲಿ ಪತ್ನಿ ಅನುಷ್ಕಾ ಶರ್ಮಾ ಜೊತೆ ಇರಲೇಬೇಕು ಎನ್ನುವ ಬಯಕೆ ವ್ಯಕ್ತಪಡಿಸಿದ್ದರು.
ಕ್ವಾರಂಟೈನ್ ಆಗ್ತಾರಾ ಕೊಹ್ಲಿ? ಪತ್ನಿ ಅನುಷ್ಕಾ ಶರ್ಮಾ ಗರ್ಭಿಣಿ. ವೈದ್ಯರು ಅವರಿಗೆ ಇದೇ ಜನವರಿಯಲ್ಲಿ ಡೇಟ್ ಕೊಟ್ಟಿದ್ದಾರೆ. ಇಂಥ ಸಂದರ್ಭದಲ್ಲಿ ಆಸ್ಟ್ರೇಲಿಯಾ ನೆಲದಿಂದ ನೇರವಾಗಿ ಆಸ್ಪತ್ರೆ/ಮನೆಗೆ ತೆರಳಿ ಅನುಷ್ಕಾ ಅವರನ್ನು ಭೇಟಿ ಆಗೋದು ಅಷ್ಟು ಉತ್ತಮವಲ್ಲ ಎನ್ನುವ ಆಲೋಚನೆ ವಿರಾಟ್ ಕೊಹ್ಲಿಯದ್ದು. ಹೀಗಾಗಿ ಭಾರತಕ್ಕೆ ಹಿಂದಿರುಗಿದ ನಂತರ ಅವರು ಒಂದು ವಾರ ಕ್ವಾರಂಟೈನ್ನಲ್ಲಿರುವ ಸಾಧ್ಯತೆ ಇದೆ. ಅಮ್ಮನಾಗಲಿರುವ ಅನುಷ್ಕಾ ಆರೋಗ್ಯ ದೃಷ್ಟಿಯಿಂದ ವಿರಾಟ್ ಈ ರೀತಿಯ ನಿರ್ಧಾರಕ್ಕೆ ಬಂದಿದ್ದಾರೆ.
ಜನವರಿಯಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ ಅನುಷ್ಕಾ ಅನುಷ್ಕಾ ಶರ್ಮಾ- ವಿರಾಟ್ ಕೊಹ್ಲಿ ಮಗುವಿನ ನಿರೀಕ್ಷೆಯಲ್ಲಿರುವ ಬಗ್ಗೆ ಈ ಮೊದಲು ಘೋಷಣೆ ಮಾಡಿದ್ದರು. ಅದೇ ರೀತಿ ಜನವರಿಯಲ್ಲಿ ಮನೆಗೆ ಹೊಸ ಸದಸ್ಯನ ಆಗಮನವಾಗಲಿದೆ ಎಂದೂ ಹೇಳಿದ್ದರು. ಹೀಗಾಗಿ, ವಿರಾಟ್ ಅನುಷ್ಕಾ ಜೊತೆ ಇದ್ದು ಅವರ ಲಾಲನೆ ಪಾಲನೆ ಮಾಡಿ, ಗಂಡನ ಕರ್ತವ್ಯ ಪೂರೈಸಲು ಕೊಹ್ಲಿ ಮುಂದಾಗಿದ್ದಾರೆ.
View this post on Instagram
ನಾಳೆ ವಿಮಾನ ಏರಲಿದ್ದಾರೆ ಕೊಹ್ಲಿ? ಆಸ್ಟ್ರೇಲಿಯಾದಲ್ಲಿ ಈಗ ರಾತ್ರಿ. ಹೀಗಾಗಿ, ಇಂದು ರಾತ್ರಿ ಅಲ್ಲಿಯೇ ವಿಶ್ರಮಿಸಿ ವಿರಾಟ್ ಕೊಹ್ಲಿ ನಾಳೆ ವಿಮಾನ ಏರುವ ಸಾಧ್ಯತೆ ಇದೆ. ಒಂದು ವಾರಗಳ ಕಾಲೆ ಕ್ವಾರಂಟೈನ್ನಲ್ಲಿ ಕಳೆದರೆ ಡಿಸೆಂಬರ್ 27ರ ಸುಮಾರಿಗೆ ಅನುಷ್ಕಾ ಜೊತೆ ವಿರಾಟ್ ಸೇರಲಿದ್ದಾರೆ. ನಂತರ ಒಂದು ತಿಂಗಳ ಕಾಲ ಅನುಷ್ಕಾ ಆರೈಕೆಯಲ್ಲಿ ಕೊಹ್ಲಿ ಕಳೆಯಲಿದ್ದಾರೆ. ಟೆಸ್ಟ್ ಪಂದ್ಯ ಬೇಗ ಪೂರ್ಣ ಗೊಂಡಿರುವುದರಿಂದ ಎರಡು ದಿನ ಮುಂಚಿತವಾಗಿಯೇ ಅವರು ಮನೆ ಸೇರುವ ಸಾಧ್ಯತೆ ಇದೆ.
ಅನುಷ್ಕಾ ಶೀರ್ಷಾಸನ ಮಾಡಿದ್ರು ಅಂತ ನೀವೂ ಮಾಡೋಕೆ ಹೋಗಿ ಅಪಾಯ ಮೈ ಮೇಲೆ ಎಳ್ಕೋಬೇಡಿ! ವೈದ್ಯರು ಏನಂತಾರೆ?
Published On - 3:12 pm, Sat, 19 December 20