AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಟುಂಬಸ್ಥರು ರಾಜೀನಾಮೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ -ಹೊಸಕೋಟೆ THO ಡಾ. ಮಂಜುನಾಥ್

ಡಾ.ಮಂಜುನಾಥ್, ಇಂದು ತಮ್ಮ ರಾಜೀನಾಮೆ ಪತ್ರ ನೀಡಲು ಡಿಸಿ ಹಾಗೂ ಸಿಇಒಗಳನ್ನು ಭೇಟಿಯಾಗಲು ಮುಂದಾದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚಪ್ಪರಕಲ್ಲು ಬಳಿಯಿರುವ ಜಿಲ್ಲಾಡಳಿತ ಭವನಕ್ಕೆ ಹಾಜರಾದರು.

ಕುಟುಂಬಸ್ಥರು ರಾಜೀನಾಮೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ -ಹೊಸಕೋಟೆ THO ಡಾ. ಮಂಜುನಾಥ್
THO ಡಾ.ಮಂಜುನಾಥ್ ಮನವೊಲಿಸುತ್ತಿರುವ ಅಧಿಕಾರಿಗಳು
KUSHAL V
| Edited By: |

Updated on: Dec 19, 2020 | 2:54 PM

Share

ಹೊಸಕೋಟೆ: ಕುಟುಂಬಸ್ಥರು ರಾಜೀನಾಮೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಹೀಗಾಗಿ ಕುಟುಂಬಸ್ಥರ ಜೊತೆ ಚರ್ಚಿಸಿ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ ಎಂದು ಕಳೆದ ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದಾರೆ ಎಂದು ಭಾವಿಸಲಾಗಿದ್ದ ಹೊಸಕೋಟೆ THO ಡಾ.ಮಂಜುನಾಥ್ ಹೇಳಿದ್ದಾರೆ.

ಒಂದು ವಾರದ ರಜೆ ಹಾಗಾಗಿ ಡಾ.ಮಂಜುನಾಥ್, ಇಂದು ತಮ್ಮ ರಾಜೀನಾಮೆ ಪತ್ರ ನೀಡಲು ಡಿಸಿ ಹಾಗೂ ಸಿಇಒಗಳನ್ನು ಭೇಟಿಯಾಗಲು ಮುಂದಾದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚಪ್ಪರಕಲ್ಲು ಬಳಿಯಿರುವ ಜಿಲ್ಲಾಡಳಿತ ಭವನಕ್ಕೆ ಹಾಜರಾದರು. ಇದೇ ವೇಳೆ, ಮಂಜುನಾಥ್​ ರಾಜೀನಾಮೆ ನೀಡದಂತೆ ಅಧಿಕಾರಿಗಳ ಮನವಿ ಮಾಡಿಕೊಂಡರು. ಮಂಜುನಾಥ್​ ಮನವೊಲಿಕೆಗೆ ಮುಂದಾದರು.

ಅಂತೆಯೇ, THO ಮಂಜುನಾಥ್ ಮನವೊಲಿಸಿದ ಡಿಸಿ ರವೀಂದ್ರ ಮತ್ತು ಸಿಇಒ ರವಿ ಆತುರದ ನಿರ್ಧಾರ ಕೈಗೊಳ್ಳದಂತೆ ಮನವೊಲಿಕೆ ಮಾಡಿದರು. ಜೊತೆಗೆ, ಮಂಜುನಾಥ್​ಗೆ ಆತಂಕದಿಂದ ಹೊರ ಬರಲು ಒಂದು ವಾರದ ರಜೆ ನೀಡಲು ಸಹ ನಿರ್ಧರಿಸಿದರು.

MTB ನಾಗರಾಜ್​ ಆಪ್ತ ಜಯರಾಜ್ ವಿರುದ್ಧ FIR ಇತ್ತ, ಮಂಜುನಾಥ್‌ಗೆ ಧಮ್ಕಿ ಹಾಕಿದ್ದ ಆರೋಪದಡಿ ಬಿಜೆಪಿ ಎಂಎಲ್‌ಸಿ MTB ನಾಗರಾಜ್ ಆಪ್ತನಾದ ಜಯರಾಜ್ ಸೇರಿದಂತೆ ಬಾಲಚಂದ್ರನ್, ಮೋಹನ್ ಎಂಬುವವರ ವಿರುದ್ಧ FIR ದಾಖಲಾಗಿದೆ. ಹೊಸಕೋಟೆ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.

ಐಪಿಸಿ ಸೆಕ್ಷನ್ 506, 341, 149, 143, 323, 147, 324, 353, 51A NDMAರಡಿ ಪ್ರಕರಣ ದಾಖಲಾಗಿದ್ದು ಕಚೇರಿಗೆ ನುಗ್ಗಿ ಧಮ್ಕಿ, ಜೀವ ಬೆದರಿಕೆ ಹಾಕಿದ ಆರೋಪವನ್ನು ಉಲ್ಲೇಖಿಸಲಾಗಿದೆ. ಜೊತೆಗೆ, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಪ್ರಕರಣವನ್ನು ಸೇರಿಸಲಾಗಿದೆ.

ಬೆಂಗಳೂರು ಗ್ರಾಮಾಂತರ SP ಚನ್ನಣ್ಣನವರ್​ಗೆ ಕರೆ ಮಾಡಿ.. THO ಮಂಜುನಾಥ್​ ಹೇಳಿದ್ದೇನು?

ಕ್ಲಿನಿಕ್​ ಮೇಲೆ ದಾಳಿ ಮಾಡಿದ್ದಕ್ಕೆ MTB ಆಪ್ತನಿಂದ ಧಮ್ಕಿ.. ಮನನೊಂದು ಹೊಸಕೋಟೆ THO ನಾಪತ್ತೆ

ವೈದ್ಯನ ಕೈಗುಣ ಚೆನ್ನಾಗಿದೆ ಅಂತಾ.. ಕ್ಲಿನಿಕ್​ ಎದುರು ಸಾಲುಗಟ್ಟಿ ನಿಲ್ತಿದ್ದ ರೋಗಿಗಳಿಗೆ ಸಿಕ್ತು ದೊಡ್ಡ ಶಾಕ್​!