
ತುಮಕೂರು: CCB ವಿಚಾರಣೆ ಬಳಿಕ ಇಂದು ಸಿದ್ಧಗಂಗಾ ಮಠಕ್ಕೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಭೇಟಿಕೊಟ್ಟಿದ್ದಾರೆ.
ಜಿಲ್ಲೆಯಲ್ಲಿರುವ ಸಿದ್ಧಗಂಗಾ ಮಠಕ್ಕೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಜೊತೆ ನಟ ಸುದೀಪ್ ಸಹ ಭೇಟಿಕೊಟ್ಟಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ. ಪೇಟ ತೋಡಿಸಿ ಹಾರ ಹಾಕಿ ಶ್ರೀಗಳ ಭಾವಚಿತ್ರಕ್ಕೆ ಗೌರವ ನೀಡಿದ ಇಂದ್ರಜೀತ್ ಲಂಕೇಶ್ರಿಗೂ ಕೂಡ ಸನ್ಮಾನ ಮಾಡಲಾಯಿತು.
ದರ್ಶನದ ಬಳಿಕ ಮಾತನಾಡಿದ ಸುದೀಪ್ ತುಂಬಾ ದಿನಗಳ ಬಳಿಕ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದೆ. ಸಿದ್ಧಗಂಗಾ ಮಠಕ್ಕೆ 4 ತಿಂಗಳಿಂದ ಭೇಟಿ ನೀಡಲು ಆಗಿರಲಿಲ್ಲ. ಜೊತೆಗೆ, ಸಿದ್ಧಗಂಗಾ ಮಠಕ್ಕೆ ದೇಣಿಗೆ ನೀಡಬೇಕಿತ್ತು. ಹಾಗಾಗಿ ಇಂದು ಭೇಟಿಕೊಟ್ಟೆ ಎಂದು ಸುದೀಪ್ ತಿಳಿಸಿದ್ದಾರೆ. ನಾಳೆ ನನ್ನ ಹುಟ್ಟುಹಬ್ಬ ಇದೆ. ಆದರೆ, ಆ ಸಂಬಂಧವಾಗಿ ಇಂದು ದರ್ಶನ ಪಡೆದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ‘ನಮಗೆ ರೈಸ್, ದಾಲ್ ಗೊತ್ತು: ಆದರೆ ಅದರ ಬಗ್ಗೆ ಗೊತ್ತಿಲ್ಲ’

Published On - 1:09 pm, Tue, 1 September 20