ಅನುರಾಗ್ ಕಶ್ಯಪ್, ತಾಪ್ಸಿ ಪನ್ನು ಮನೆಗಳ ಐಟಿ ದಾಳಿ ವೇಳೆ ₹ 350 ಕೋಟಿ ತೆರಿಗೆ ವಂಚನೆ ಪತ್ತೆ

|

Updated on: Mar 04, 2021 | 9:00 PM

ಅನುರಾಗ್ ಕಶ್ಯಪ್ ಮತ್ತು ತಾಪ್ಸಿ ಪನ್ನು ಮನೆಗಳ ಮೇಲೆ ನಡೆದ ದಾಳಿಗಳ ಬಗ್ಗೆ ಬಾಲಿವುಡ್​ನ ಗಣ್ಯರು ಮೌನ ಮುರಿಯದಿರುವುದು ಟ್ವಿಟರ್​ನಲ್ಲಿ ಚರ್ಚೆಗೆ ಗ್ರಾಸವಾಗಿದೆ. #TaxChor #IncomeTaxRaid ಹ್ಯಾಷ್​ಟ್ಯಾಗ್​ಗಳು ಟ್ವಿಟರ್​ ಇಂಡಿಯಾದಲ್ಲಿ ಟಾಪ್ ಟ್ರೆಂಡ್ ಆಗಿವೆ.

ಅನುರಾಗ್ ಕಶ್ಯಪ್, ತಾಪ್ಸಿ ಪನ್ನು ಮನೆಗಳ ಐಟಿ ದಾಳಿ ವೇಳೆ ₹ 350 ಕೋಟಿ ತೆರಿಗೆ ವಂಚನೆ ಪತ್ತೆ
ಅನುರಾಗ್​ ಕಶ್ಯಪ್​ ಮತ್ತು ತಾಪ್ಸೀ ಪನ್ನು
Follow us on

ದೆಹಲಿ: ಬಾಲಿವುಡ್​ನ ನಟ, ನಿರ್ದೇಶಕ ಅನುರಾಗ್ ಕಶ್ಯಪ್ ಮತ್ತು ನಟಿ ತಾಪ್ಸಿ ಪನ್ನು ಅವರ ಮನೆಗಳ ಮೇಲೆ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಸುಮಾರು ₹ 350 ಕೋಟಿ ಮೊತ್ತದ ಅವ್ಯವಹಾರ ಪತ್ತೆ ಮಾಡಿದ್ದಾರೆ. ಅನುರಾಗ್ ಕಶ್ಯಪ್ ಮತ್ತು ತಾಪ್ಸಿ ಪನ್ನು ಮನೆಗಳ ಮೇಲೆ ನಡೆದ ದಾಳಿಗಳ ಬಗ್ಗೆ ಬಾಲಿವುಡ್​ನ ಗಣ್ಯರು ಮೌನ ಮುರಿಯದಿರುವುದು ಟ್ವಿಟರ್​ನಲ್ಲಿ ಚರ್ಚೆಗೆ ಗ್ರಾಸವಾಗಿದೆ. #TaxChor #IncomeTaxRaid ಹ್ಯಾಷ್​ಟ್ಯಾಗ್​ಗಳು ಟ್ವಿಟರ್​ ಇಂಡಿಯಾದಲ್ಲಿ ಟಾಪ್ ಟ್ರೆಂಡ್ ಆಗಿವೆ. ಸಾಕಷ್ಟು ಜನರು ತೆರಿಗೆ ವಂಚನೆಯನ್ನು ಟೀಕಿಸಿದ್ದಾರೆ.

ಸಿನಿಮಾಗಳ ಬಾಕ್ಸ್​ ಆಫೀಸ್​ ಸಂಗ್ರಹದ ಕೇವಲ ಶೇ 2ರಷ್ಟು ಮೊತ್ತವನ್ನು ಮಾತ್ರವೇ ಆದಾಯವಾಗಿ ಘೋಷಿಸಿದ್ದಾರೆ. ₹ 20 ಕೋಟಿ ಮೊತ್ತದಷ್ಟು ಬೋಗಸ್ ಖರ್ಚಿನ ದಾಖಲೆಗಳು ಪತ್ತೆಯಾಗಿವೆ. ಇಬ್ಬರನ್ನೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸುಮಾರು 5 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿತು.

ಫಾಂಟಾಮ್ ಫಿಲ್ಸ್ಮ್​ ಕಂಪನಿಯ ಷೇರು ವಹಿವಾಟಿನ ಮಾಹಿತಿಯನ್ನು ತಿದ್ದಿರುವ, ಮೌಲ್ಯವನ್ನು ತಪ್ಪಾಗಿ ದಾಖಲಿಸಿರುವ ದಾಖಲೆಗಳು ಪತ್ತೆಯಾಗಿವೆ. ₹ 350 ಕೋಟಿ ಮೊತ್ತದಷ್ಟು ತೆರಿಗೆ ಬಾಧ್ಯತೆ ಇವರ ಮೇಲಿದೆ. ತಪ್ಸಿ ಪನ್ನು ಅವರು ₹ 5 ಕೋಟಿಯಷ್ಟು ತೆರಿಗೆ ಬಾಧ್ಯತೆ ಹೊಂದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇನ್ನಷ್ಟು ದಾಳಿಗಳು ನಡೆಯುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಫಾಂಟಾಮ್ ಫಿಲ್ಮ್ಸ್​ನ ತೆರಿಗೆ ವಂಚನೆ ಬಗ್ಗೆ ತನಿಖೆ ನಡೆಸಲು ಮುಂಬೈ ಮತ್ತು ಪುಣೆಯ 28 ಸ್ಥಳಗಳಲ್ಲಿ ದಾಳಿ ನಡೆಸಲಾಗಿತ್ತು. ರಿಲಯನ್ಸ್​ ಎಂಟರ್​ಟೈನ್​ಮೆಂಟ್​ ಸಮೂಹದ ಸಿಇಒ ಶಿಬಶೀಷ್ ಸರ್ಕಾರ್ ಮತ್ತು KWAN, ಎಕ್ಸೀಡ್ ಟ್ಯಾಲೆಂಟ್ ಮ್ಯಾನೇಜ್​ಮೆಂಟ್​ ಕಂಪನಿಗಳ ಮೇಲೆಯೂ ದಾಳಿ ನಡೆದಿತ್ತು. ದಾಳಿಯ ವೇಳೆ ಪತ್ತೆಯಾದ 7 ಬ್ಯಾಂಕ್​ ಲಾಕರ್​ಗಳ ಬಳಕೆ ಮೇಲೆ ನಿರ್ಬಂಧ ವಿಧಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.