‘ಜಮೀರ್ ಸಮರ್ಥನೆ: ಸಿದ್ದರಾಮಯ್ಯರಿಂದ ಯುವಜನತೆಗೆ ಏನು ಸಂದೇಶ ಕೊಟ್ಟಂತಾಗಿದೆ?’
ಧಾರವಾಡ: ಕೊರೊನಾ ನಂತರ ಅತಿ ಹೆಚ್ಚು ಸುದ್ದಿ ಮಾಡುತ್ತಿರುವ ಹಾಗೂ ರೋಚಕ ತಿರುವುಗಳನ್ನು ಪಡೆಯುತ್ತಿರುವ ಡ್ರಗ್ಸ್ ಪ್ರಕರಣ ನಾನಾ ಅಯಾಮಗಳನ್ನು ಪಡೆಯುತ್ತಿದೆ. ಸಿಸಿಬಿ ಅಧಿಕಾರಿಗಳು ನಶೆಯ ಜಾಲವನ್ನು ಭೇದಿಸುದ್ದಾರೆ. ಇದು ಒಂದು ಕಡೆಯಾದ್ರೆ ಮತ್ತೊಂದು ಕಡೆ ಡ್ರಗ್ಸ್‌ಗೆ ಅಡಿಕ್ಟ್ ಆದವರಲ್ಲಿ ಹೆಚ್ಚಾಗಿ ಯುವಕರೇ ಇದ್ದಾರೆ ಎಂದು ಧಾರವಾಡದಲ್ಲಿ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಆತಂಕ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿ-ಧಾರವಾಡದಲ್ಲೂ ಕೆಲವು ಯುವಕರು ಡ್ರಗ್ಸ್‌ಗೆ ಅಡಿಕ್ಟ್ ಆಗಿದ್ದಾರೆ. ಈ ಹಿಂದಿನ ಸರ್ಕಾರಕ್ಕೂ ಹಲವು ಬಾರಿ ಮನವಿ ಮಾಡಿದ್ದೆ. ಈಗ ಸಿಎಂ […]
ಧಾರವಾಡ: ಕೊರೊನಾ ನಂತರ ಅತಿ ಹೆಚ್ಚು ಸುದ್ದಿ ಮಾಡುತ್ತಿರುವ ಹಾಗೂ ರೋಚಕ ತಿರುವುಗಳನ್ನು ಪಡೆಯುತ್ತಿರುವ ಡ್ರಗ್ಸ್ ಪ್ರಕರಣ ನಾನಾ ಅಯಾಮಗಳನ್ನು ಪಡೆಯುತ್ತಿದೆ. ಸಿಸಿಬಿ ಅಧಿಕಾರಿಗಳು ನಶೆಯ ಜಾಲವನ್ನು ಭೇದಿಸುದ್ದಾರೆ. ಇದು ಒಂದು ಕಡೆಯಾದ್ರೆ ಮತ್ತೊಂದು ಕಡೆ ಡ್ರಗ್ಸ್‌ಗೆ ಅಡಿಕ್ಟ್ ಆದವರಲ್ಲಿ ಹೆಚ್ಚಾಗಿ ಯುವಕರೇ ಇದ್ದಾರೆ ಎಂದು ಧಾರವಾಡದಲ್ಲಿ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಆತಂಕ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡದಲ್ಲೂ ಕೆಲವು ಯುವಕರು ಡ್ರಗ್ಸ್‌ಗೆ ಅಡಿಕ್ಟ್ ಆಗಿದ್ದಾರೆ. ಈ ಹಿಂದಿನ ಸರ್ಕಾರಕ್ಕೂ ಹಲವು ಬಾರಿ ಮನವಿ ಮಾಡಿದ್ದೆ. ಈಗ ಸಿಎಂ ಬಿಎಸ್‌ವೈ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಜಮೀರ್ ಅಹ್ಮದ್ ರಕ್ಷಿಸಲು ಸಿದ್ದರಾಮಯ್ಯ ಹೊರಟಿದ್ದಾರೆ. ಶಾಸಕ ಜಮೀರ್ ಕ್ಯಾಸಿನೋಗೆ ಹೋದ್ರೆ ತಪ್ಪೇನು ಅಂತಾರೆ. ಇದರಿಂದ ಯುವಜನಾಂಗಕ್ಕೆ ಏನು ಸಂದೇಶ ಕೊಟ್ಟಂತಾಗಿದೆ. ನಿಮ್ಮ ವ್ಯಕ್ತಿತ್ವವನ್ನ ನೀವೇ ಹಾಳು ಮಾಡಿಕೊಳ್ಳುತ್ತಿದ್ದೀರಿ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾಡಿದ್ರು.
ಡ್ರಗ್ಸ್ ದಂಧೆಯಲ್ಲಿ ಯಾರೇ ಇದ್ದರೂ ಹೊರಗೆ ಬರುತ್ತಾರೆ. ಬಿಜೆಪಿಯವರು ಈ ದಂಧೆಯಲ್ಲಿದ್ದರೂ ಮಾಹಿತಿಯನ್ನ ನೀಡಿ. ನಾವೇ ವಿಚಾರಣೆ ಮಾಡಿಸುತ್ತೇವೆ ಎಂದು ಹೇಳಿದ್ರು.
Published On - 3:33 pm, Mon, 14 September 20