ಅಶ್ವಿನಿ ಆ ರೀತಿ ಆರೋಪ ಮಾಡಿದ್ರೇ ಆ ದೇವರು ಅವಳನ್ನ ಕ್ಷಮಿಸಲಿ -ಪತ್ನಿ ಆರೋಪಕ್ಕೆ ಪ್ರೇಮಕವಿ ಉತ್ತರ
ಬೆಳಗಾವಿ: ಕೆ.ಕಲ್ಯಾಣ ತಮ್ಮ ಪತ್ನಿ ಅಶ್ವಿನಿ ಮೇಲೆ ದೌರ್ಜನ್ಯ ಎಸಗಿದ್ದಾರೆ ಅನ್ನೋ ಆರೋಪದ ವಿಚಾರವಾಗಿ ಚಿತ್ರಸಾಹಿತಿ ಪ್ರತಿಕ್ರಿಯಿಸಿದ್ದಾರೆ. ಆಕೆ ಏನೇ ಆರೋಪ ಮಾಡಲಿ ಅದು ಅವಳ ಅನಿಸಿಕೆ. ಕೋರ್ಟ್ನಲ್ಲಿ ಸತ್ಯಾಸತ್ಯತೆ ಬಗ್ಗೆ ಗೊತ್ತಾಗಲಿದೆ. ಕೋರ್ಟ್ನಲ್ಲಿ ಸಾಕ್ಷಿ ಸಮೇತ ನಿರ್ಧಾರವಾದರೇ ಮಾತ್ರ ಅವಳ ಆರೋಪ ನಿಜವಾಗುವುದು ಎಂದು ಹೇಳಿದ್ದಾರೆ. ಸಾಕ್ಷ್ಯಾಧಾರ ಇಲ್ಲದೆ ಅವರು ಬಾಯಿಗೆ ಬಂದಂತೆ ಆರೋಪ ಮಾಡಿದ್ದಾರೆ. ಆ ರೀತಿ ಆರೋಪ ಅವಳು ಮಾಡಿದ್ರೇ ಆ ದೇವರು ಅವಳನ್ನ ಕ್ಷಮಿಸಲಿ. ಈ ವಿಚಾರ ಈಗ ಕಾನೂನು ವ್ಯಾಪ್ತಿಗೆ […]

ಬೆಳಗಾವಿ: ಕೆ.ಕಲ್ಯಾಣ ತಮ್ಮ ಪತ್ನಿ ಅಶ್ವಿನಿ ಮೇಲೆ ದೌರ್ಜನ್ಯ ಎಸಗಿದ್ದಾರೆ ಅನ್ನೋ ಆರೋಪದ ವಿಚಾರವಾಗಿ ಚಿತ್ರಸಾಹಿತಿ ಪ್ರತಿಕ್ರಿಯಿಸಿದ್ದಾರೆ. ಆಕೆ ಏನೇ ಆರೋಪ ಮಾಡಲಿ ಅದು ಅವಳ ಅನಿಸಿಕೆ. ಕೋರ್ಟ್ನಲ್ಲಿ ಸತ್ಯಾಸತ್ಯತೆ ಬಗ್ಗೆ ಗೊತ್ತಾಗಲಿದೆ. ಕೋರ್ಟ್ನಲ್ಲಿ ಸಾಕ್ಷಿ ಸಮೇತ ನಿರ್ಧಾರವಾದರೇ ಮಾತ್ರ ಅವಳ ಆರೋಪ ನಿಜವಾಗುವುದು ಎಂದು ಹೇಳಿದ್ದಾರೆ.
ಸಾಕ್ಷ್ಯಾಧಾರ ಇಲ್ಲದೆ ಅವರು ಬಾಯಿಗೆ ಬಂದಂತೆ ಆರೋಪ ಮಾಡಿದ್ದಾರೆ. ಆ ರೀತಿ ಆರೋಪ ಅವಳು ಮಾಡಿದ್ರೇ ಆ ದೇವರು ಅವಳನ್ನ ಕ್ಷಮಿಸಲಿ. ಈ ವಿಚಾರ ಈಗ ಕಾನೂನು ವ್ಯಾಪ್ತಿಗೆ ಒಳಪಡುತ್ತದೆ. ನ್ಯಾಯಾಲಯದಲ್ಲಿ ಪ್ರಕರಣ ಇರುವುದರಿಂದ ದಯವಿಟ್ಟು ಸುದ್ದಿ ಬಿತ್ತರಿಸಬೇಡಿ. ಯಾವುದೇ ಊಹಾಪೋಹಗಳು ಹರಿದಾಡುವುದು ಬೇಡ ಎಂದು ಕಲ್ಯಾಣ್ ಹೇಳಿದ್ದಾರೆ. ಕಲ್ಯಾಣ್ ದೈಹಿಕ ಹಿಂಸೆ ನೀಡ್ತಿದ್ದಾರೆ, ನನಗೆ ವಿಚ್ಛೇದನ ಬೇಕು: ಕೋರ್ಟ್ ಮೊರೆಹೋದ ಪ್ರೇಮಕವಿ ಪತ್ನಿ
ನಾನು ಸಂಸ್ಕಾರ, ಭಗವಂತ ಮತ್ತು ಪ್ರಾಮಾಣಿಕ ನಿಷ್ಠೆಯನ್ನು ನಂಬಿ ಬದುಕುತ್ತಿದ್ದೇನೆ. ನನ್ನ ಪಾರದರ್ಶಕ ವ್ಯಕ್ತಿತ್ವ ಬದುಕು ನನ್ನನ್ನ ಬಲ್ಲವರಿಗೆ ಗೊತ್ತು. ನಿಮ್ಮೆಲ್ಲರ ಪ್ರೀತಿ ಆಶೀರ್ವಾದ ಇರಲಿ, ಸತ್ಯ ಉಳಿಯಲಿ. ತಪ್ಪು ಯಾರೇ ಮಾಡಿದ್ರೂ ಕಾನೂನಿನ ಚೌಕಟ್ಟಿನಲ್ಲಿ ಅವರಿಗೆ ಶಿಕ್ಷೆಯಾಗಲಿ ಎಂದು ಕಲ್ಯಾಣ್ ಹೇಳಿದ್ದಾರೆ. ಜೊತೆಗೆ, ಅಶ್ವಿನಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ನಾನು ಸಿದ್ಧನಿದ್ದೇನೆ ಎಂದು ಬೆಳಗಾವಿಯಲ್ಲಿ ಕೆ.ಕಲ್ಯಾಣ ಹೇಳಿದ್ದಾರೆ.
ಪ್ರೇಮಕವಿ K ಕಲ್ಯಾಣ್ ದಾಂಪತ್ಯದಲ್ಲಿ ಬಿರುಕು, ಪೊಲೀಸ್ ಠಾಣೆ ಮೆಟ್ಟಿಲೇರಿದ ದಂಪತಿ ಆಸ್ತಿಗೋಸ್ಕರ K ಕಲ್ಯಾಣ್ ನನ್ನನ್ನು ಮದುವೆ ಆಗಿದ್ದಾರೆ -ಪ್ರೇಮಕವಿ ವಿರುದ್ಧ ಪತ್ನಿ ಪ್ರತಿದೂರು
Published On - 7:29 pm, Sat, 3 October 20



