ಜಯಲಲಿತಾ ಪುಣ್ಯತಿಥಿ: ‘ತಲೈವಿ’ ಸಿನಿಮಾದ ಫೋಟೊ ಟ್ವೀಟ್​ ಮಾಡಿದ ಕಂಗನಾ ರನೌತ್

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಜೀವನಾಧಾರಿತ ಸಿನಿಮಾ 'ತಲೈವಿ' ಮುಂದಿನ ವರ್ಷ ತೆರೆಕಾಣಲಿದೆ. ಬಾಲಿವುಡ್ ನಟಿ ಕಂಗನಾ ರನೌತ್ ಜಯಲಲಿತಾರ ಪಾತ್ರಕ್ಕೆ ಜೀವ ತುಂಬಲಿದ್ದಾರೆ.

ಜಯಲಲಿತಾ ಪುಣ್ಯತಿಥಿ: ತಲೈವಿ ಸಿನಿಮಾದ ಫೋಟೊ ಟ್ವೀಟ್​ ಮಾಡಿದ ಕಂಗನಾ ರನೌತ್
ತಲೈವಿ ಚಿತ್ರದಲ್ಲಿ ಕಂಗನಾ ರನೌತ್
Updated By: ಸಾಧು ಶ್ರೀನಾಥ್​

Updated on: Dec 05, 2020 | 4:17 PM

ಮುಂಬೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಜೀವನಾಧಾರಿತ ಸಿನಿಮಾ ‘ತಲೈವಿ’ ಮುಂದಿನ ವರ್ಷ ತೆರೆಕಾಣಲಿದೆ. ಎ.ಎಲ್ ವಿಜಯ್ ನಿರ್ದೇಶನದ ಈ ಚಿತ್ರ ಎರಡು ಭಾಗಗಳಲ್ಲಿ ತೆರೆ ಕಾಣಲಿದ್ದು ಬಾಲಿವುಡ್ ನಟಿ ಕಂಗನಾ ರನೌತ್ ಜಯಲಲಿತಾರ ಪಾತ್ರಕ್ಕೆ ಜೀವ ತುಂಬಲಿದ್ದಾರೆ.

ಇಂದು ಜಯಲಲಿತಾ ಅವರ ನಾಲ್ಕನೇ ವರ್ಷದ ಪುಣ್ಯ ತಿಥಿ. ಈ ಸಂದರ್ಭದಲ್ಲಿ ಟ್ವೀಟ್ ಮಾಡಿರುವ ಕಂಗನಾ,  ಜಯಾ ಅಮ್ಮ ಅವರ ಪುಣ್ಯ ತಿಥಿಯಾದ ಇಂದು ನಮ್ಮ ಸಿನಿಮಾ ತಲೈವಿಯ ಕೆಲವು ಫೋಟೊಗಳನ್ನು ಹಂಚಿಕೊಳ್ಳುತ್ತಿದ್ದೇನೆ. ಈ ಸಿನಿಮಾ ಪೂರ್ಣಗೊಳಿಸಲು ಸೂಪರ್ ಮಾನವನಂತೆ ಕೆಲಸ ಮಾಡಿದ ನಮ್ಮ ತಂಡದ ನಾಯಕ ವಿಜಯ್ ಸರ್ ಮತ್ತು ತಂಡಕ್ಕೆ ನನ್ನ ಧನ್ಯವಾದಗಳು. ಇನ್ನು ಒಂದೇ ವಾರ ಉಳಿದಿದೆ ಎಂದಿದ್ದಾರೆ.

2021ರಲ್ಲಿ ತೆರೆಕಾಣಲಿದೆ ತಲೈವಿ

ಶೈಲೇಶ್ ಆರ್ ಸಿಂಗ್ ಮತ್ತು ವಿಷ್ಣು ವರ್ಧನ್ ಇಂದುರಿ ಜಂಟಿಯಾಗಿ ನಿರ್ಮಿಸುತ್ತಿರುವ ‘ತಲೈವಿ’ ಸಿನಿಮಾ 2021ರಲ್ಲಿ ತೆರೆಕಾಣಲಿದೆ. 2020 ಜೂನ್26 ರಂದು ‘ತಲೈವಿ’ ಮೊದಲ ಭಾಗ ಬಿಡುಗಡೆಗೆ ಸಿನಿಮಾ ತಂಡ ನಿರ್ಧರಿಸಿತ್ತು. ಆದರೆ ಕೊರೊನಾ ಪಿಡುಗಿನಿಂದಾಗಿ ಸಿನಿಮಾ ಬಿಡುಗಡೆ ಮುಂದೂಡಲಾಗಿತ್ತು.