
ಬೆಂಗಳೂರು: ಕನ್ನಡಕ್ಕಾಗಿ ಱಪರ್ ಚಂದನ್ ಶೆಟ್ಟಿ ಹೊಸ ಹೋರಾಟಕ್ಕೆ ಮುಂದಾಗಿದ್ದು, ಕನ್ನಡ ಕಡ್ಡಾಯ ನೀತಿ ಜಾರಿ ಆಗಬೇಕು ಎಂಬುದರ ಕುರಿತಾಗಿ ಅಭಿಯಾನ ಕೈಗೆತ್ತಿಕೊಂಡಿದ್ದಾರೆ. ಪಬ್ಗಳಲ್ಲಿ ಕನ್ನಡ ಹಾಡು ಹಾಕುವುದಿಲ್ಲವೆಂದು ಖಾಸಗಿ ಪಬ್ಗಳು ಕಿರಿಕ್ ಮಾಡಿದ್ದ ವಿಷಯಕ್ಕೆ ಸಂಬಂಧಿಸಿ ಚಂದನ್ ಧ್ವನಿ ಎತ್ತಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಕೂಡಾ ಹಂಚಿಕೊಂಡಿದ್ದಾರೆ ಚಂದನ್.
ಪಬ್, ಮಾಲ್, ಜಿಮ್ಗಳಲ್ಲಿನ ಕನ್ನಡ ವಿರೋಧಿ ನೀತಿಯನ್ನು ಖಂಡಿಸಿ, ಕನ್ನಡ ಬೇಕು ಅನ್ನೋ ಕನ್ನಡಿಗರ ಮೇಲೆ ನಡೆಯುತ್ತಿರೋ ದೌರ್ಜನ್ಯವನ್ನ ಪೋಸ್ಟ್ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಕನ್ನಡ ಕಡ್ಡಾಯ ನೀತಿ ಜಾರಿ ಆಗಬೇಕು ಎಂದು ಧ್ವನಿ ಎತ್ತಿದ್ದಾರೆ.
ಕನ್ನಡ ಹಾಡುಗಳನ್ನು ಹಾಕದ ಸಿಲಿಕಾನ್ ಸಿಟಿಯ ಪಬ್ಗಳ ವಿರುದ್ಧ ಱಪರ್ ಚಂದನ್ ನಾಲ್ಕು ದಿನದ ಹಿಂದೆಯಷ್ಟೆ ಮಾತನಾಡಿದ್ದರು. ಪಬ್ನಲ್ಲಿ ಕನ್ನಡ ಹಾಡುಗಳನ್ನ ಹಾಕೋದಿಲ್ಲ ಎಂಬ ಕಾರಣಕ್ಕೆ ಚಂದನ್ ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದರು. ಅಂದ ಹಾಗೆ, ನಗರದ ಮಾರತ್ಹಳ್ಳಿಯಲ್ಲಿರುವ ಬ್ಲ್ಯಾಕ್ ಪರ್ಲ್ ಪಬ್ನಲ್ಲಿ ನಿನ್ನೆ ಕೆಲ ಕನ್ನಡಿಗರು ಕನ್ನಡ ಹಾಡುಗಳನ್ನು ಹಾಕಲು ಮನವಿ ಮಾಡಿದ್ದಕ್ಕೆ ಸಿಬ್ಬಂದಿ ನಿರಾಕರಿಸಿದ್ದರಂತೆ. ಇದರ ಬಗ್ಗೆ ಅರಿತ ಚಂದನ್ ಶೆಟ್ಟಿ ಇದೀಗ ಹೋರಾಟಕ್ಕೆ ಮುಂದಾಗಿದ್ದಾರೆ. ಹಾಗಾಗಿ, ಚಂದನ್ ಶೆಟ್ಟಿ ನಾಳೆ ಪಬ್ ವಿರುದ್ಧ ಹೋರಾಟಕ್ಕಿಳಿಯೋ ಸಾಧ್ಯತೆಯಿದೆ ಎಂಬೆಲ್ಲಾ ಊಹಾಪೋಹಗಳು ಹರಿದಾಡುತ್ತಿದ್ದವು.
ಇದನ್ನೂ ಓದಿ: Chandan Shetty | ಕನ್ನಡ ಹಾಡು ಹಾಕಲ್ಲ ಎಂದಿದ್ದಕ್ಕೆ ಆಕ್ರೋಶ: ಪಬ್ಗಳ ವಿರುದ್ಧ ಮತ್ತೆ ಸಿಡಿದೆದ್ದ ಚಂದನ್ ಶೆಟ್ಟಿ!