ಹೌದು ಹುಲಿಯಾ! ಸೋಲಿನಲ್ಲೂ ಗೆಲುವು ಕಂಡರು ಸಿದ್ದರಾಮಯ್ಯ

ಬೆಂಗಳೂರು: ಕಾಂಗ್ರೆಸ್​ನ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೆಲುವಿನ ಕೇಕೆ ಹಾಕಿದ್ದಾರೆ. ರಾಜ್ಯದ 15 ಉಪಚುನಾವಣೆಗಳ ಫಲಿತಾಂಶಗಳು ಹೊರಬಿದ್ದಿದ್ದು, ಯಾರಿಗೆಲ್ಲಾ ಗೆಲುವು ಎಂಬುದು ಬಹುತೇಕ ನಿಚ್ಚಳವಾಗಿದೆ. ಈ ಹಂತದಲ್ಲಿ ಕಾಂಗ್ರೆಸ್​ನ ಪರ್ಫಾರ್ಮೆನ್ಸ್ ನೋಡಿದರೆ ಸಿದ್ದರಾಮಯ್ಯ ಮೇಲುಗೈ ಸಾಧಿಸಿದ್ದಾರೆ ಎಂದೇ ಹೇಳಬಹುದು. ಮುಖ್ಯವಾಗಿ ಸಿದ್ದರಾಮಯ್ಯನವರು ವೈಯಕ್ತಿಕವಾಗಿ ಹೊಸಕೋಟೆ ಮತ್ತು ಹುಣಸೂರು ಕ್ಷೇತ್ರಗಳನ್ನು ಪ್ರತಿಷ್ಠೆಯ ಕಣವಾಗಿ ಪರಿಗಣಿಸಿದ್ದರು ಅದರಂತೆ ಎರಡರಲ್ಲೂ ಅನರ್ಹ ಶಾಸಕರಿಗೆ ಭರಪೂರ್ ಮಣ್ಣುಮುಕ್ಕಿಸಿದ್ದಾರೆ. ಒಂದೆಡೆ, ಎದೆ ಬಗೆದು ತನ್ನನ್ನು ಶ್ರೀರಾಮನಂತೆ ಚಿತ್ರಿಸಿದ್ದ ಎಂಟಿಬಿ ನಾಗರಾಜ್​ಗೆ ಸೋಲಿನ ರುಚಿ […]

ಹೌದು ಹುಲಿಯಾ! ಸೋಲಿನಲ್ಲೂ ಗೆಲುವು ಕಂಡರು ಸಿದ್ದರಾಮಯ್ಯ
ಸಾಧು ಶ್ರೀನಾಥ್​

Updated on: Dec 09, 2019 | 12:16 PM

ಬೆಂಗಳೂರು: ಕಾಂಗ್ರೆಸ್​ನ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೆಲುವಿನ ಕೇಕೆ ಹಾಕಿದ್ದಾರೆ. ರಾಜ್ಯದ 15 ಉಪಚುನಾವಣೆಗಳ ಫಲಿತಾಂಶಗಳು ಹೊರಬಿದ್ದಿದ್ದು, ಯಾರಿಗೆಲ್ಲಾ ಗೆಲುವು ಎಂಬುದು ಬಹುತೇಕ ನಿಚ್ಚಳವಾಗಿದೆ. ಈ ಹಂತದಲ್ಲಿ ಕಾಂಗ್ರೆಸ್​ನ ಪರ್ಫಾರ್ಮೆನ್ಸ್ ನೋಡಿದರೆ ಸಿದ್ದರಾಮಯ್ಯ ಮೇಲುಗೈ ಸಾಧಿಸಿದ್ದಾರೆ ಎಂದೇ ಹೇಳಬಹುದು.

ಮುಖ್ಯವಾಗಿ ಸಿದ್ದರಾಮಯ್ಯನವರು ವೈಯಕ್ತಿಕವಾಗಿ ಹೊಸಕೋಟೆ ಮತ್ತು ಹುಣಸೂರು ಕ್ಷೇತ್ರಗಳನ್ನು ಪ್ರತಿಷ್ಠೆಯ ಕಣವಾಗಿ ಪರಿಗಣಿಸಿದ್ದರು ಅದರಂತೆ ಎರಡರಲ್ಲೂ ಅನರ್ಹ ಶಾಸಕರಿಗೆ ಭರಪೂರ್ ಮಣ್ಣುಮುಕ್ಕಿಸಿದ್ದಾರೆ. ಒಂದೆಡೆ, ಎದೆ ಬಗೆದು ತನ್ನನ್ನು ಶ್ರೀರಾಮನಂತೆ ಚಿತ್ರಿಸಿದ್ದ ಎಂಟಿಬಿ ನಾಗರಾಜ್​ಗೆ ಸೋಲಿನ ರುಚಿ ತೋರಿಸಿದ್ದಾರೆ. ಮತ್ತೊಂದೆಡೆ ತಮ್ಮ ಅಧಿಪತ್ಯದ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಹೆಚ್ ವಿಶ್ವನಾಥರನ್ನಷ್ಟೇ ಅಲ್ಲ, ಆಕಡೆ ತಮ್ಮ ಪುರಾತನ ಶತ್ರು ಎನ್ ಶ್ರೀನಿವಾಸ್ ಪ್ರಸಾದ್ ಬೆಂಬಲಿತ ಅಭ್ಯರ್ಥಿಯನ್ನಾಗಿಯೂ ವಿಶ್ವನಾಥರನ್ನು ಸೋಲಿಸಿದ್ದಾರೆ.

ಇನ್ನು ಇದೇ ವೇಳೆ ಚಿಕ್ಕಬಳ್ಳಾಪುರದಲ್ಲಿ ಮತ್ತೋರ್ವ ಅರ್ನಹ ಶಾಸಕ ಡಾ ಸುಧಾಕರ್​ರನ್ನು ಸೋಲಿಸಲೇಬೇಕೆಂದು ಹೋರಾಡಿದ ಡಿಕೆಶಿವಕುಮಾರ್ ಗೆಲುವು ಸಾಧಿಸದೇ ಹೋಗಿದ್ದು, ಸಿದ್ದರಾಮಯ್ಯಗೆ ವರವಾಗಿದೆ. ತನ್ಮೂಲಕ ರಾಜ್ಯ ಕಾಂಗ್ರೆಸ್ ನಲ್ಲಿ ತಮ್ಮ ವಿರುದ್ಧ ಎದ್ದಿದ್ದ ಕೂಗನ್ನು ಹೊಸಕಿಹಾಕಿದ್ದಾರೆ.

Published On - 12:11 pm, Mon, 9 December 19

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us