ಜನಸಾಮಾನ್ಯರಿಗೆ ಹಬ್ಬ ಹರಿದಿನಗಳನ್ನು ತಿಳಿಸುವ ಕ್ಯಾಲೆಂಡರ್ ಎಷ್ಟು ಮುಖ್ಯವೋ, ಬ್ಯಾಂಕ್ ರಜೆಗಳ ಪಟ್ಟಿಯೂ ಅಷ್ಟೇ ಮುಖ್ಯ. ವ್ಯವಹಾರ ಕಾರಣಗಳಿಗಾಗಿ ತುರ್ತು ಸಂದರ್ಭದಲ್ಲಿ ಬ್ಯಾಂಕ್ಗೆ ತೆರಳಿದಾಗ ಅಪ್ಪಿತಪ್ಪಿ ಅಂದು ಬ್ಯಾಂಕ್ಗೆ ರಜೆಯಿದ್ದರೆ ಭಾರೀ ಕಷ್ಟವಾಗಿಬಿಡುತ್ತದೆ. ಹಾಗಾಗಿ, ಹೆಚ್ಚಿನವರು ಹೊಸ ತಿಂಗಳು ಹತ್ತಿರವಾಗುತ್ತಿದ್ದಂತೆಯೇ ಯಾವ್ಯಾವ ದಿನ ಬ್ಯಾಂಕ್ಗಳಿಗೆ ರಜೆ ಎಂದು ತಿಳಿದುಕೊಳ್ಳಲು ಇಷ್ಟಪಡುತ್ತಾರೆ. ಸದ್ಯ ಫೆಬ್ರವರಿ ಮುಗಿದು ಮಾರ್ಚ್ ತಿಂಗಳು ಶುರುವಾಗುತ್ತಿದೆ. ಈ ಬಾರಿ ಮಾರ್ಚ್ನಲ್ಲಿ ಒಟ್ಟು 7 ರಜೆಗಳಿದ್ದು ಅದು ಯಾವ ಯಾವ ದಿನಾಂಕದಂದು ಎಂಬ ಪಟ್ಟಿ ಇಲ್ಲಿದೆ.
ಮಾರ್ಚ್ನಲ್ಲಿ ಶಿವರಾತ್ರಿ ಹೊರತುಪಡಿಸಿದರೆ ಬೇರೆ ಯಾವುದೇ ದೊಡ್ಡ ಹಬ್ಬ ಅಥವಾ ಸರ್ಕಾರಿ ದಿನಾಚರಣೆಗಳಿಲ್ಲ. ಸಾಧಾರಣವಾಗಿ ಮಾರ್ಚ್ ತಿಂಗಳಲ್ಲಿ ಎಲ್ಲಾ ವಹಿವಾಟುದಾರರಿಗೂ ತುಸು ಹೆಚ್ಚೇ ಒತ್ತಡವಿದ್ದು, ಬ್ಯಾಂಕ್ಗೆ ಯಾವ ಸಂದರ್ಭದಲ್ಲಿ ಹೋಗಬೇಕಾಗಿ ಬರಬಹುದು ಎಂದು ಹೇಳಲಾಗುವುದಿಲ್ಲ.
2021ರ ಮಾರ್ಚ್ ತಿಂಗಳ ರಜಾ ವಿವರ:
ಹೀಗೆ ಒಟ್ಟು 7 ದಿನಗಳು ರಜೆ ಇದ್ದು, ಮಾರ್ಚ್ 12ರ ಶುಕ್ರವಾರ ಒಂದು ರಜೆ ಹಾಕಿಕೊಂಡರೆ ಬ್ಯಾಂಕ್ ಉದ್ಯೋಗಿಗಳಿಗೆ ಸತತ ನಾಲ್ಕು ದಿನಗಳ ರಜೆ ಸಿಗಲಿದೆ. ಈ ಕಾರಣಗಳಿಂದ ಬ್ಯಾಂಕ್ನಲ್ಲಿ ಮುಖ್ಯ ಕೆಲಸವೇನಾದರೂ ಇದ್ದರೆ ಮೊದಲೇ ಯೋಚಿಸಿ ತುಸು ಮುಂಚಿತವಾಗಿ ಮುಗಿಸಿಕೊಳ್ಳುವುದೇ ಒಳಿತು.
ಇದನ್ನೂ ಓದಿ:
ಮತ್ತೊಂದು ಕ್ರಾಂತಿಗೆ ಸಿದ್ಧವಾಯ್ತು ಜಿಯೋ, ಕೇವಲ ₹1,999ಕ್ಕೆ ಎರಡು ವರ್ಷಗಳ ತನಕ ಅನಿಯಮಿತ ಸೌಲಭ್ಯ
ಸೋಷಿಯಲ್ ಮೀಡಿಯಾ, ಒಟಿಟಿ, ಡಿಜಿಟಲ್ ಕಂಟೆಂಟ್ ನಿಯಂತ್ರಣಕ್ಕೆ ಕೇಂದ್ರದಿಂದ ಹೊಸ ನಿಯಮ: ನೀವು ತಿಳಿಯಬೇಕಾದ 10 ಅಂಶಗಳು
Published On - 2:42 pm, Sat, 27 February 21