Reliance Jio Phone Offer: ಮತ್ತೊಂದು ಕ್ರಾಂತಿಗೆ ಸಿದ್ಧವಾಯ್ತು ಜಿಯೋ, ಕೇವಲ ರೂ. 1,999ಕ್ಕೆ ಎರಡು ವರ್ಷಗಳ ತನಕ ಅನಿಯಮಿತ ಸೌಲಭ್ಯ

Jio Unlimited Pack: ಈ ಯೋಜನೆಯಲ್ಲಿ ರೂ. 1,999ಕ್ಕೆ ಜಿಯೋ ಫೋನ್​ ಕೊಳ್ಳುವವರಿಗೆ 24 ತಿಂಗಳು ಅಂದರೆ 2 ವರ್ಷಗಳ ತನಕ ಅನಿಯಮಿತ ಸೌಲಭ್ಯ ಸಿಗಲಿದೆ. ಇದಲ್ಲದೇ ಇನ್ನೊಂದು ಯೋಜನೆಯೂ ಲಭ್ಯವಿದ್ದು ₹1,499 ಪಾವತಿಸಿದರೆ ಒಂದು ವರ್ಷದವರೆಗೆ ಅನಿಯಮಿತ ಕರೆ ಹಾಗೂ ತಿಂಗಳಿಗೆ 2ಜಿಬಿ ಡೇಟಾ ದೊರೆಯಲಿದೆ.

Reliance Jio Phone Offer: ಮತ್ತೊಂದು ಕ್ರಾಂತಿಗೆ ಸಿದ್ಧವಾಯ್ತು ಜಿಯೋ, ಕೇವಲ ರೂ. 1,999ಕ್ಕೆ ಎರಡು ವರ್ಷಗಳ ತನಕ ಅನಿಯಮಿತ ಸೌಲಭ್ಯ
ಜಿಯೋ 75 ರೂ. ಪ್ಲ್ಯಾನ್: ಈ ಪ್ಲ್ಯಾನ್​ನಲ್ಲಿ ಗ್ರಾಹಕರಿಗೆ ಅನಿಯಮಿತ ಕರೆ ಸೌಲಭ್ಯ ದೊರೆಯಲಿದೆ. ಜೊತೆಗೆ ಪ್ರತಿದಿನ 50 ಉಚಿತ SMS ಸಿಗಲಿದೆ. ಇನ್ನು ಈ ಪ್ಲ್ಯಾನ್​ನಲ್ಲಿ 200MB ಬೂಸ್ಟರ್ ಜೊತೆಗೆ 3GB ಡೇಟಾ ಸಿಗಲಿದೆ.
Follow us
| Updated By: Digi Tech Desk

Updated on:Feb 27, 2021 | 9:54 PM

ಭಾರತೀಯ ದೂರವಾಣಿ ಕ್ಷೇತ್ರದಲ್ಲಿ (Telecom Sector) ಕ್ರಾಂತಿ ಮೂಡಿಸಿದ ರಿಲಯನ್ಸ್​ ಜಿಯೋ (Reliance Jio) ಈಗಾಗಲೇ ಹಲವು ಬದಲಾವಣೆಗಳಿಗೆ ನಾಂದಿ ಹಾಡಿದೆ. ಸಾಮಾನ್ಯರ ಕೈಗೆಟುಕದಷ್ಟು ದುಬಾರಿಯಾಗಿದ್ದ ಮೊಬೈಲ್​ ಡೇಟಾ ದರವನ್ನು ಊಹೆಗೂ ನಿಲುಕದ ರೀತಿಯಲ್ಲಿ ಕಡಿಮೆ ಮಾಡಿ ಉಳಿದ ಟೆಲಿಕಾಂ ಕಂಪನಿಗಳಿಗೆ ಆಘಾತ ನೀಡಿದ ಜಿಯೋ ಈಗ ಮತ್ತೊಂದು ಹೊಸ ಯೋಜನೆ ತರಲು ಮುಂದಾಗಿದೆ. ರಿಲಯನ್ಸ್​ ಜಿಯೋ ಫೋನ್​ ಬಳಕೆದಾರರಿಗಾಗಿಯೇ ಈ ಯೋಜನೆ ಜಾರಿಯಾಗುತ್ತಿದ್ದು, ₹1,999ನೀಡಿದರೆ ಒಂದು ಜಿಯೋ ಫೋನ್​ (JioPhone) ಹಾಗೂ 2 ವರ್ಷಗಳ ಅವಧಿಗೆ ಅನಿಯಮಿತ​ ರೀಚಾರ್ಜ್ (Unlimited Recharge)​ ಸೌಲಭ್ಯವನ್ನು ಒದಗಿಸಲು ಜಿಯೋ ನಿರ್ಧರಿಸಿದೆ. ಈ ಯೋಜನೆ ಕೇವಲ ಜಿಯೋ ಫೋನ್​ ಬಳಕೆದಾರರಿಗೆ ಮಾತ್ರ ಲಭ್ಯವಿದ್ದು, ಇದರ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯಲು ನಿರ್ಧರಸಿದೆ.

ಈ ಯೋಜನೆಯಲ್ಲಿ ಜಿಯೋ ಫೋನ್​ ಕೊಳ್ಳುವವರಿಗೆ 24 ತಿಂಗಳು ಅಂದರೆ 2 ವರ್ಷಗಳ ತನಕ ಅನಿಯಮಿತ ಕರೆ ಹಾಗೂ ತಿಂಗಳಿಗೆ 2ಜಿಬಿ ಡೇಟಾ ಸಿಗಲಿದೆ. ಇದಲ್ಲದೇ ಇನ್ನೊಂದು ಯೋಜನೆಯೂ ಲಭ್ಯವಿದ್ದು ₹1,499 ಪಾವತಿಸಿದರೆ ಒಂದು ವರ್ಷದವರೆಗೆ ಅನಿಯಮಿತ ಕರೆ ಹಾಗೂ ತಿಂಗಳಿಗೆ 2ಜಿಬಿ ಡೇಟಾ ದೊರೆಯಲಿದೆ. ಇನ್ನು ಈಗಾಗಲೇ ಜಿಯೋ ಫೋನ್​ ಬಳಸುತ್ತಿರುವವರಿಗಾಗಿ ₹749ರ ಯೋಜನೆ ಜಾರಿಗೊಳಿಸಿದ್ದು, ಇದರಡಿಯಲ್ಲಿ ಒಂದು ವರ್ಷದವರೆಗೆ ಅನಿಯಮಿತ ಕರೆ ಹಾಗೂ ತಿಂಗಳಿಗೆ 2ಜಿಬಿ ಡೇಟಾ ದೊರೆಯಲಿದೆ.

ಸದರಿ ಯೋಜನೆಗಳ ಮಾಹಿತಿ ನೀಡಿರುವ ರಿಲಯನ್ಸ್ ಜಿಯೋ ಸಂಸ್ಥೆ, ನಾವು ನಮ್ಮ ಪ್ರತಿಸ್ಪರ್ಧಿಗಳಿಗಿಂತ ಅತ್ಯಂತ ಕಡಿಮೆ ದರದಲ್ಲಿ ಸೇವೆ ಒದಗಿಸುತ್ತಿದ್ದೇವೆ. ಇದೇ ಸೌಲಭ್ಯಗಳನ್ನು ಪಡೆಯಲು ಬೇರೆ ನೆಟ್ವರ್ಕ್​ಗಳ ಗ್ರಾಹಕರು ಎರಡೂವರೆ ಪಟ್ಟು ಜಾಸ್ತಿ ಮೊತ್ತ ತೆರುತ್ತಿದ್ದಾರೆ. ದೇಶದಲ್ಲಿ ಇನ್ನೂ 3 ಕೋಟಿಯಷ್ಟು ಜನ 2ಜಿ ಬಳಸುತ್ತಿದ್ದು, 2ಜಿ ಮುಕ್ತ ಭಾರತದ ಕನಸಿನೊಂದಿಗೆ ನಾವು ಈ ಯೋಜನೆಗಳನ್ನು ಬಿಡುಗಡೆ ಮಾಡುತ್ತಿದ್ದೇವೆ ಎಂದು ತಿಳಿಸಿದೆ.

ಈ ಬಗ್ಗೆ ಮಾತನಾಡಿರುವ ರಿಲಯನ್ಸ್​ ಜಿಯೋ ಸಂಸ್ಥೆಯ ನಿರ್ದೇಶಕ ಆಕಾಶ್​ ಅಂಬಾನಿ, ತಂತ್ರಜ್ಞಾನ ಮುಂದುವರಿದು 5ಜಿ ಯುಗದತ್ತ ಹೊರಳುತ್ತಿರುವಾಗಲೂ ನಮ್ಮ ದೇಶದ ಅನೇಕರು ಇನ್ನೂ 2ಜಿ ಜಾಲದಲ್ಲೇ ಸಿಲುಕಿಕೊಂಡಿದ್ಧಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಜಿಯೋ ದೊಡ್ಡ ಕ್ರಾಂತಿಯನ್ನೇ ಮಾಡಿ ಬಹುಪಾಲು ಜನರು ಇಂಟರ್ನೆಟ್​ ಯುಗಕ್ಕೆ ಕಾಲಿಡುವಂತೆ ಮಾಡಿದೆ. ಅಷ್ಟಾದರೂ ಇನ್ನೂ ಸುಮಾರು 3 ಕೋಟಿ ಗ್ರಾಹಕರು 2ಜಿಯಲ್ಲೇ ಇದ್ದಾರೆ. ಹೀಗಾಗಿ ಈ ಡಿಜಿಟಲ್​ ಡಿವೈಡ್​ ಹೋಗಲಾಡಿಸಲು ಜಿಯೋ ಸಂಸ್ಥೆ ಈಗ ಮತ್ತೊಂದು ಮಹತ್ತರ ಬದಲಾವಣೆಗೆ ಸಾಕ್ಷಿಯಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಜಿಯೋಫೋನ್ ಆಫರ್​ 2021ರಲ್ಲಿ ಕೇವಲ ₹1999ಕ್ಕೆ 24 ತಿಂಗಳುಗಳ ಅನಿಯಮಿತ ಸೇವೆ ಸಿಗಲಿದೆ. ಆದರೆ, ಇದೇ ಮಾದರಿಯ ಯೋಜನೆಗಳಿಗೆ ಬೇರೆ ನೆಟ್‌ವರ್ಕ್‌ಗಳ ಗ್ರಾಹಕರು ಸರಾಸರಿ ₹5000 ಪಾವತಿಸುತ್ತಿದ್ದಾರೆ. ಆದ್ದರಿಂದ ಜಿಯೋ ಬಿಡುಗಡೆ ಮಾಡುತ್ತಿರುವ ಹೊಸ ಯೋಜನೆಯಿಂದಾಗಿ ಗ್ರಾಹಕರ ಮೇಲೆ ಬೀಳುತ್ತಿರುವ ಅಧಿಕ ಹೊರೆಗೆ ಕಡಿವಾಣ ಬೀಳಲಿದೆ ಎಂದು ತಿಳಿಸಿದ್ದಾರೆ. ಈ ಕೊಡುಗೆಯು ಮಾರ್ಚ್ 1 ರಿಂದ ರಿಲಯನ್ಸ್ ರಿಟೇಲ್ ಮತ್ತು ಜಿಯೋ ರಿಟೇಲರ್​ಗಳಲ್ಲಿ ಲಭ್ಯವಿರಲಿದೆ.

ಇದನ್ನೂ ಓದಿ: ದುಡ್ಡು ಕೊಟ್ಟು ಫಾಲೋ ಮಾಡಿ.. ಸೂಪರ್​ ಫಾಲೋಸ್​​ ಎಂಬ ಹೊಸ ಸೌಲಭ್ಯ ಪರಿಚಯಿಸಿದ ಟ್ವಿಟರ್​

ಇನ್ಮುಂದೆ ಡಾರ್ಕ್​ ಮೋಡ್​​ನಲ್ಲೂ ಲಭ್ಯ ಗೂಗಲ್​ ಮ್ಯಾಪ್​; ಆ್ಯಂಡ್ರಾಯ್ಡ್​ ಮೊಬೈಲ್​​ನಲ್ಲಿ ಸಿಂಪಲ್​ ಆಗಿ ಸೆಟ್ಟಿಂಗ್ಸ್​​ ಬದಲಿಸಿಕೊಂಡರೆ ಆಯಿತು..

Published On - 12:35 pm, Sat, 27 February 21