AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಹಿರಂಗ ಪ್ರಚಾರಕ್ಕೆ ಇಂದು ತೆರೆ: ಮಿನಿಕುರುಕ್ಷೇತ್ರ ಗೆಲ್ಲೋಕೆ ಕೊನೆ ದಾಳ..!

ಗಲ್ಲಿ ಗಲ್ಲಿ.. ಕೇರಿ ಕೇರಿಯಲ್ಲೂ ಮತಶಿಕಾರಿ.. ರಣಬೇಟೆಗಾರರು ಕಾಲರ್ ಮೇಲೆತ್ತಿ. ತೋಳೆರಿಸಿ ಹಲ್​ಚಲ್​ ಸೃಷ್ಟಿಸ್ತಿರೋದೆ. ವಿರೋಧಿಗಳ ವಿರುದ್ಧ ತೊಡೆ ತಟ್ತಿರೋದೆ. ಮಾತಿನ ಮಹಾಯುದ್ಧ ಗೆಲ್ಬೇಕು ಅನ್ನೋ ಹಠ. ಅನರ್ಹರಿಗೆ ಮಣ್ಣು ಮುಕ್ಕಿಸ್ಬೇಕು ಅನ್ನೋ ರಣತಂತ್ರ. ಉಪಸಮರದಲ್ಲಿಂದು ಬಹಿರಂಗ ಪ್ರಚಾರಕ್ಕೆ ತೆರೆ..! ರಣಕಣದಲ್ಲಿಂದು ಬಹಿರಂಗ ಪ್ರಚಾರಕ್ಕೆ ತೆರೆ ಬೀಳ್ತಿರೋದ್ರಿಂದ ಘಟಾನುಘಟಿಗಳು ಇರೋ ಬರೋ ಪಟ್ಟು ಗಳನ್ನೆಲ್ಲಾ ಪ್ರಯೋಗಿಸೋಕೆ ಸಜ್ಜಾಗಿದ್ದಾರೆ. ಅಖಾಡದಲ್ಲಿ ಕೊನೆ ಕ್ಷಣದ ಕಸರತ್ತು ನಡೆಸಲಿರೋ ಕೇಸರಿ ಕಲಿಗಳು ಪ್ರತೀ ಕ್ಷೇತ್ರದಲ್ಲೂ ಅಬ್ಬರದ ಪ್ರಚಾರ ನಡೆಸಲಿದ್ದಾರೆ. ಇಂದು ಕೂಡ […]

ಬಹಿರಂಗ ಪ್ರಚಾರಕ್ಕೆ ಇಂದು ತೆರೆ:  ಮಿನಿಕುರುಕ್ಷೇತ್ರ ಗೆಲ್ಲೋಕೆ ಕೊನೆ ದಾಳ..!
ಸಾಧು ಶ್ರೀನಾಥ್​
|

Updated on:Dec 03, 2019 | 10:38 AM

Share

ಗಲ್ಲಿ ಗಲ್ಲಿ.. ಕೇರಿ ಕೇರಿಯಲ್ಲೂ ಮತಶಿಕಾರಿ.. ರಣಬೇಟೆಗಾರರು ಕಾಲರ್ ಮೇಲೆತ್ತಿ. ತೋಳೆರಿಸಿ ಹಲ್​ಚಲ್​ ಸೃಷ್ಟಿಸ್ತಿರೋದೆ. ವಿರೋಧಿಗಳ ವಿರುದ್ಧ ತೊಡೆ ತಟ್ತಿರೋದೆ. ಮಾತಿನ ಮಹಾಯುದ್ಧ ಗೆಲ್ಬೇಕು ಅನ್ನೋ ಹಠ. ಅನರ್ಹರಿಗೆ ಮಣ್ಣು ಮುಕ್ಕಿಸ್ಬೇಕು ಅನ್ನೋ ರಣತಂತ್ರ.

ಉಪಸಮರದಲ್ಲಿಂದು ಬಹಿರಂಗ ಪ್ರಚಾರಕ್ಕೆ ತೆರೆ..! ರಣಕಣದಲ್ಲಿಂದು ಬಹಿರಂಗ ಪ್ರಚಾರಕ್ಕೆ ತೆರೆ ಬೀಳ್ತಿರೋದ್ರಿಂದ ಘಟಾನುಘಟಿಗಳು ಇರೋ ಬರೋ ಪಟ್ಟು ಗಳನ್ನೆಲ್ಲಾ ಪ್ರಯೋಗಿಸೋಕೆ ಸಜ್ಜಾಗಿದ್ದಾರೆ. ಅಖಾಡದಲ್ಲಿ ಕೊನೆ ಕ್ಷಣದ ಕಸರತ್ತು ನಡೆಸಲಿರೋ ಕೇಸರಿ ಕಲಿಗಳು ಪ್ರತೀ ಕ್ಷೇತ್ರದಲ್ಲೂ ಅಬ್ಬರದ ಪ್ರಚಾರ ನಡೆಸಲಿದ್ದಾರೆ. ಇಂದು ಕೂಡ ಸಿಎಂ ಬಿಎಸ್​​ವೈ ಅಬ್ಬರಿಸಲಿದ್ದು, ಅಥಣಿ ಅಖಾಡದಲ್ಲಿಂದು ಮಹೇಶ್ ಕುಮಟಳ್ಳಿ ಪರ ಡಿಸಿಎಂ ಲಕ್ಷ್ಮಣ ಸವದಿ, ಸಚಿವ ಕೆ.ಎಸ್. ಈಶ್ವರಪ್ಪ ಸೇರಿ ಹಲವು ನಾಯಕರು ಘರ್ಜಿಸಲಿದ್ದಾರೆ.

ಮತಬೇಟೆಗೆ ಕೇಸರಿ ಕಲಿಗಳ ರಣತಂತ್ರ..! ಇನ್ನು, ಕೊತ ಕೊತ ಕುದ್ದು ಹೋಗ್ತಿರೋ ಕಾಗವಾಡ ಕೋಟೆಗೆ ನುಗ್ಗಲಿರೋ ಜಗದೀಶ್ ಶೆಟ್ಟರ್ ಜಗದೀಶ್ ಶೆಟ್ಟರ್ ಗೀಳಿಡೋಕೆ ಸಜ್ಜಾಗಿದ್ರೆ, ಹಿರೇಕೆರೂರು ಕಣದಲ್ಲಿ ಗೃಹಸಚಿವ ಬಸವರಾಜ ಬೊಮ್ಮಾಯಿ ಹಲ್​​ಚಲ್​ ಸೃಷ್ಟಿಸಲಿದ್ದಾರೆ. ಹೊಸಕೋಟೆಯಲ್ಲಿ ಕಮಲ ಕಲಿಗಳು ಅಬ್ಬರಿಸಿ, ವಿಜಯನಗರದಲ್ಲಿ ವಿಜಯ ಪತಾಕೆ ಹಾರಿಸೋಕೆ ಡಿಸಿಎಂ ಗೋವಿಂದ ಕಾರಜೋಳ, ಸಚಿವ ಶ್ರೀರಾಮುಲು ಕಸರತ್ತು ನಡೆಸಲಿದ್ದಾರೆ. ಇತ್ತ ಹುಣಸೂರು ಹಾಗೂ ಚಿಕ್ಕಬಳ್ಳಾಪುರದಲ್ಲಿ ಕೇಸರಿ ಲೀಡರ್ ನಳಿನ್ ಕುಮಾರ್ ಕಟೀಲು ಮತಕಹಳೆ ಮೊಳಗಿಸಲಿದ್ದಾರೆ.

ಮಿನಿ ಅಖಾಡದಲ್ಲಿ ಕಾಂಗ್ರೆಸ್ ಲೀಡರ್ಸ್ ಮಾಸ್ ಕ್ಯಾಂಪೇನ್..! ಇನ್ನು, ಹೈವೋಲ್ಟೇಜ್ ರಣಕಣಗಳಲ್ಲಿ ಕೊನೆ ದಿನ ಕಾಂಗ್ರೆಸ್ ಕಲಿಗಳು ಗೀಳಿಡೋಕೆ ಮಾಸ್ಟರ್ ಪ್ಲ್ಯಾನ್ ಮಾಡ್ಕೊಂಡಿದ್ದಾರೆ. ಕುಲುಮೆಗೆ ಹಾಕಿರೋ ಕಬ್ಬಿಣದಂತಾಗಿರೋ ಹುಣಸೂರಿಗೆ ಟಗರು ಇವತ್ತು ಎಂಟ್ರಿ ಕೊಡಲಿದೆ.

ಹಳ್ಳಿ ಹಕ್ಕಿಗೆ ಶಾಕ್ ಕೊಡೋಕೆ ಕಾಂಗ್ರೆಸ್ ಅಭ್ಯರ್ಥಿ ಹೆಚ್​​​.ಪಿ.ಮಂಜುನಾಥ್ ಪರ ಮುಂಜಾನೆ 8 ಗಂಟೆಯಿಂದಲೇ ಸಿದ್ದರಾಮಯ್ಯ ಅಬ್ಬರಿಸೋಕೆ ರೆಡಿಯಾಗಿದ್ದಾರೆ. ಬರೋಬ್ಬರಿ 12 ಗ್ರಾಮಗಳಲ್ಲಿ ಗೀಳಿಡೋಕೆ ಸಜ್ಜಾಗಿರೋ ಸಿದ್ದು, ಮೋದೂರು, ಸೀರೆನಹಳ್ಳಿ, ಮೈಲಂಬೂರು, ಬಿಳಿಗೆರೆ, ಮಾರಗೌಡನಹಳ್ಳಿ, ಕಳ್ಳಿಕೊಪ್ಪಲು, ಜಾಬಗೆರೆ, ಶಂಕರೇಗೌಡನ ಕೊಪ್ಪಲು ಸೇರಿ ಹಲವೆಡೆ ಮತಶಿಕಾರಿ ನಡೆಸಲಿದ್ದಾರೆ. ಅಲ್ದೇ, ಕಾಂಗ್ರೆಸ್ ಲೀಡರ್ ಮಲ್ಲಿಕಾರ್ಜುನ ಖರ್ಗೆ ಕೂಡ ಇಂದು ಹುಣಸೂರಲ್ಲಿ ಮತಕಹಳೆ ಮೊಳಗಿಸಲಿದ್ದಾರೆ.

ಮಿನಿಯುದ್ಧವನ್ನ ಗೆಲ್ಬೇಕೆನ್ನೋ ಪಣ ತೊಟ್ಟಿರೋ ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಕೊನೆ ದಿನ ಮತದಾರರ ಮನ ಗೆಲ್ಲೋಕೆ ಅಬ್ಬರದ ಪ್ರಚಾರ ನಡೆಸಲಿದ್ದಾರೆ. ಅಲ್ಲದೇ, ದಿನೇಶ್ ಗುಂಡೂರಾವ್, ಲಕ್ಷ್ಮೀ ಹೆಬ್ಬಾಳ್ಕರ್ ಸೇರಿ ಹಲವು ಕೈ ಲೀಡರ್ಸ್ ಕೂಡ ಬೇರೆ ಬೇರೆ ಅಖಾಡದಲ್ಲಿ ಅಬ್ಬರಿಸಲಿದ್ದಾರೆ.

ಮಿನಿಕುರುಕ್ಷೇತ್ರ ಗೆಲ್ಲೋಕೆ ದಳಪತಿಗಳ ಕೊನೆ ದಾಳ..! ಇತ್ತ ಮೈತ್ರಿ ಪತನಕ್ಕೆ ಕಾರಣರಾಗಿರೋ ಅನರ್ಹರಿಗೆ ಪಾಠ ಕಲಿಸೋಕೆ ದಳಪತಿಗಳು ದಾಳ ಹಾಕ್ತಿದ್ದಾರೆ. ಯುದ್ಧಭೂಮಿಯಲ್ಲಿಂದು ಕೊನೇ ಕ್ಷಣದ ಕಸರತ್ತು ನಡೆಸಲಿರೋ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮಹಾಲಕ್ಷ್ಮೀ ಲೇಔಟ್​​ನಲ್ಲಿ ಒಕ್ಕಲಿಗರ ಮತ ಸೆಳೆಯೋಕೆ ತಂತ್ರ ಹೂಡಿದ್ದಾರೆ. ತೆನೆ ಅಭ್ಯರ್ಥಿ ಗಿರೀಶ್ ನಾಶಿ ಪರ ಅಬ್ಬರದ ಪ್ರಚಾರ ನಡೆಸಲಿರೋ ಹೆಚ್​​ಡಿಕೆ, 7 ವಾರ್ಡ್​​ಗಳಲ್ಲಿ ಕಹಳೆ ಮೊಳಗಿಸಿ ಮತ ಕಬಳಿಸೋಕೆ ಪ್ಲ್ಯಾನ್ ಮಾಡಿದ್ದಾರೆ.

ರಾಜಧಾನಿಯಲ್ಲಿ ಕಡೇ ದಿನ ರಂಗೇರಲಿದೆ ರಣಕಣ..! ರಾಜ್ಯದ ಹಲವೆಡೆ ಬೈಎಲೆಕ್ಷನ್ ಅಖಾಡದಲ್ಲಿ ಸೇನಾನಿಗಳ ಪರ ಘಟಾನುಘಟಿಗಳು ಅಬ್ಬರಿಸಿದ್ರೆ, ರಾಜಧಾನಿಯಲ್ಲಿrಓ ಮಿನಿ ಅಖಾಡವನ್ನ ಪ್ರತಿಷ್ಠೆಯಾಗಿ ಪರಿಣಿಸಿದ್ದಾರೆ. ಬೆಂಗಳೂರಿನ ಕ್ಷೇತ್ರವದಲ್ಲಿ ಗೆಲುವಿನ ಕೇಕೆ ಹಾಕೋಕೆ ಕಮಲ ಕಲಿಗಳು ತಂತ್ರ ಹೂಡಿದ್ದಾರೆ. ಯಶವಂತಪುರ, ಶಿವಾಜಿನಗರ, ಹೊಸಕೋಟೆ, ಕೆ.ಆರ್.ಪೇಟೆ, ಮಹಾಲಕ್ಷ್ಮೀ ಲೇಔಟ್, ಕೆ.ಆರ್.ಪುರಂ ಕಣದಲ್ಲಿ ಬೈಕ್ ಱಲಿ ನಡೆಸೋಕೆ ಸಜ್ಜಾಗಿದ್ದಾರೆ. ಈ ಮೂಲಕ ಬಿಜೆಪಿ ಕಾರ್ಯಕರ್ತರು ಎಲ್ಲಾ ಕ್ಷೇತ್ರದಲ್ಲೂ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.

ಮಿನಿಕದನದಲ್ಲಿಂದು ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದ್ದು, ಮನೆ ಮನೆ ಪ್ರಚಾರಕ್ಕೆ ಮಾತ್ರ ಅವಕಾವಿದೆ. ಹೀಗಾಗಿ ರಣಕಣದಲ್ಲಿ ಕೊನೇ ದಿನ ಘಟಾನುಘಟಿಗಳ ಹುಮ್ಮಸ್ಸು ಮತ್ತಷ್ಟು ಹೆಚ್ಚಾಗಿದೆ. ಅಖಾಡದಲ್ಲಿ ಭರ್ಜರಿ ರೋಡ್​ ಶೋ ಮೂಲ ಪವರ್ ಶೋ ಮಾಡೋಕೆ ಸಜ್ಜಾಗಿದ್ದಾರೆ. ಬಳಿಕ ಮತಜೋಳಿಗೆ ಹಿಡಿದು ಮನೆ ಮನೆಗೆ ತೆರಳಿ ಮತಭೀಕ್ಷೆ ಕೇಳೋಕೆ ರೆಡಿಯಾಗಿದ್ದಾರೆ. ಅದೇನೆ ಇರ್ಲಿ ಮಿನಿಕುರುಕ್ಷೇತ್ರದಲ್ಲಿ ಕೊನೇ ದಿನ ಪ್ರಚಾರದ ಆರ್ಭಟ ಮತ್ತಷ್ಟು ಅಬ್ಬರ ಪಡೆಯೋದಂತು ನಿಜ.

Published On - 9:28 am, Tue, 3 December 19

ಮುಂದುವರಿದ ಡಿನ್ನರ್ ಮೀಟಿಂಗ್: ಆರೋಗ್ಯ ಸರಿ ಇಲ್ಲದಿದ್ದರೂ ಸಿಎಂ ಭಾಗಿ
ಮುಂದುವರಿದ ಡಿನ್ನರ್ ಮೀಟಿಂಗ್: ಆರೋಗ್ಯ ಸರಿ ಇಲ್ಲದಿದ್ದರೂ ಸಿಎಂ ಭಾಗಿ
ಡಿಕೆಶಿ​ ಪಿಎಸ್ ಕಾರು ಅಪಘಾತ: ಬೈಕ್​ ಸವಾರ ಸಾವು, ಕಾರು ಪಲ್ಟಿ
ಡಿಕೆಶಿ​ ಪಿಎಸ್ ಕಾರು ಅಪಘಾತ: ಬೈಕ್​ ಸವಾರ ಸಾವು, ಕಾರು ಪಲ್ಟಿ
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ