AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ನಾಯಕನ ಸಾರಥ್ಯದಲ್ಲಿ ಕೆಕೆಆರ್ ಪ್ರದರ್ಶನ ಇನ್ನಷ್ಟು ಉತ್ತಮಗೊಳ್ಳಬಹುದೆ?

ಇಂಡಿಯನ್ ಪ್ರಿಮೀಯರ್ ಲೀಗ್-2020 ಟೂರ್ನಿಯ 32ನೇ ಪಂದ್ಯದಲ್ಲಿ ಇಂದು ಕಳೆದ ಬಾರಿಯ ಚಾಂಪಿಯನ್ಸ್​ ಮುಂಬೈ ಇಂಡಿಯನ್ಸ್ ಮತ್ತು ಕೊಲ್ಕತಾ ನೈಟ್ ರೈಡರ್ಸ್ ನಡುವೆ ಅಬು ಧಾಬಿಯ ಶೇಖ್ ಜಾಯೆದ್ ಸ್ಟೇಡಿಯಂನಲ್ಲಿ ನಡೆಯಲಿದೆ. ಆಡಿರುವ 7 ಪಂದ್ಯಗಳಲ್ಲಿ 5 ಗೆದ್ದು 2 ಸೋತು 10 ಅಂಕ ಗಳಿಸಿರುವ ರೋಹಿತ್ ಶರ್ಮರ ಮುಂಬೈ ಪಾಯಿಂಟ್ಸ್ ಟೇಬಲ್​ನಲ್ಲಿ ಎರಡನೇ ಸ್ಥಾನದಲ್ಲಿದೆ. ಹಾಗೆಯೇ, ಕೆಕೆಆರ್ ಆಡಿರುವ 7 ಪಂದ್ಯಗಳಲ್ಲಿ 4 ಗೆದ್ದು 2 ಸೋತು 8 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಕೊಲ್ಕತಾ ಇಂದು […]

ಹೊಸ ನಾಯಕನ ಸಾರಥ್ಯದಲ್ಲಿ ಕೆಕೆಆರ್ ಪ್ರದರ್ಶನ ಇನ್ನಷ್ಟು ಉತ್ತಮಗೊಳ್ಳಬಹುದೆ?
ಅರುಣ್​ ಕುಮಾರ್​ ಬೆಳ್ಳಿ
| Edited By: |

Updated on:Oct 16, 2020 | 4:41 PM

Share

ಇಂಡಿಯನ್ ಪ್ರಿಮೀಯರ್ ಲೀಗ್-2020 ಟೂರ್ನಿಯ 32ನೇ ಪಂದ್ಯದಲ್ಲಿ ಇಂದು ಕಳೆದ ಬಾರಿಯ ಚಾಂಪಿಯನ್ಸ್​ ಮುಂಬೈ ಇಂಡಿಯನ್ಸ್ ಮತ್ತು ಕೊಲ್ಕತಾ ನೈಟ್ ರೈಡರ್ಸ್ ನಡುವೆ ಅಬು ಧಾಬಿಯ ಶೇಖ್ ಜಾಯೆದ್ ಸ್ಟೇಡಿಯಂನಲ್ಲಿ ನಡೆಯಲಿದೆ. ಆಡಿರುವ 7 ಪಂದ್ಯಗಳಲ್ಲಿ 5 ಗೆದ್ದು 2 ಸೋತು 10 ಅಂಕ ಗಳಿಸಿರುವ ರೋಹಿತ್ ಶರ್ಮರ ಮುಂಬೈ ಪಾಯಿಂಟ್ಸ್ ಟೇಬಲ್​ನಲ್ಲಿ ಎರಡನೇ ಸ್ಥಾನದಲ್ಲಿದೆ. ಹಾಗೆಯೇ, ಕೆಕೆಆರ್ ಆಡಿರುವ 7 ಪಂದ್ಯಗಳಲ್ಲಿ 4 ಗೆದ್ದು 2 ಸೋತು 8 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.

ಕೊಲ್ಕತಾ ಇಂದು ಹೊಸ ನಾಯಕನೊಂದಿಗೆ ಕಣಕ್ಕಿಳಿಯಲಿದೆ. ಇದುವರೆಗೆ ತಂಡವನ್ನು ಮುನ್ನಡೆಸುತ್ತಿದ್ದ ದಿನೇಶ್ ಕಾರ್ತೀಕ್ ನಾಯಕತ್ವದ ಹೊಣೆಯನ್ನು ಓವರ್​ಸೀಸ್ ಆಟಗಾರ ಮತ್ತು 2019ರ ವಿಶ್ವಕಪ್ ಅನ್ನು ಇಂಗ್ಲೆಂಡ್​ಗೆ ಗೆದ್ದುಕೊಟ್ಟ ಅಯಾನ್ ಮೊರ್ಗನ್ ಅವರಿಗೆ ವಹಿಸಿಕೊಟ್ಟಿದ್ದಾರೆ. ಬ್ಯಾಟಿಂಗ್ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಲು ನಾಯಕತ್ವ ತ್ಯಜಿಸಿರುವುದಾಗಿ ಕಾರ್ತೀಕ್ ಹೇಳಿದ್ದಾರೆ.

[yop_poll id=”14″]

ಮುಂಬೈ ಟೀಮಿಗೆ ಯಾವುದೇ ಸಮಸ್ಯೆ ಇದ್ದಂತಿಲ್ಲ. ಬ್ಯಾಟಿಂಗ್ ಮತ್ತು ಬೌಲಿಂಗ್ ಯುನಿಟ್​ಗಳು ಒಂದನ್ನೊಂದು ಅದ್ಭುತವಾಗಿ ಕಾಂಪ್ಲಿಮೆಂಟ್ ಮಾಡುತ್ತಿವೆ. ಟಾಪ್ ಆರ್ಡರ್​ನಲ್ಲಿ ರೋಹಿತ್ ಸೇರಿದಂತೆ, ಕ್ವಿಂಟನ್ ಡಿ ಕಾಕ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಷನ್ ರನ್ ಗಳಿಸುತ್ತಿದ್ದಾರೆ. ಆಲ್​ರೌಂಡರ್​ಗಳ ಪೈಕಿ, ಹಾರ್ದಿಕ್ ಪಾಂಡ್ಯ ಅವರನ್ನು ಹೊರತುಪಡಿಸಿ ಕೈರನ್ ಪೊಲ್ಲಾರ್ಡ್ ಮತ್ತು ಕೃಣಾಲ್ ಪಾಂಡೆ ಉತ್ತಮ ಸ್ಪರ್ಶದಲ್ಲಿದ್ದಾರೆ.

ಹಾಗೆ ನೋಡಿದರೆ, ಬೌಲರ್​ಗಳೇ ಮುಂಬೈಗೆ ಪಂದ್ಯಗಳನ್ನು ಗೆದ್ದು ಕೊಡುತ್ತಿದ್ದಾರೆ. ವೇಗದ ಬೌಲರ್​ಗಳಾದ ಟ್ರೆಂಟ್ ಬೌಲ್ಟ್ ಮತ್ತು ಜಸ್ಪ್ರೀತ್ ಬುಮ್ರಾ ತಮ್ಮ ನಡುವೆ 20 ವಿಕೆಟ್​ಗಳನ್ನು ಕಬಳಿಸಿದ್ದಾರೆ. ಮತ್ತೊಬ್ಬ ವೇಗಿ, ಜೇಮ್ಸ್ ಪ್ಯಾಟಿನ್ಸ್​ನ್ ಸಹ ಉಪಯುಕ್ತ ಬ್ರೇಕ್​ಥ್ರೂಗಳನ್ನು ಒದಗಿಸುತ್ತಿದ್ದಾರೆ. ಸ್ಪಿನ್ನರ್​ಗಳಾದ ರಾಹುಲ್ ಚಹರ್ ಮತ್ತು ಕೃಣಾಲ್ ಎದುರಾಳಿ ಬ್ಯಾಟ್ಸ್​ಮನ್​ಗಳನ್ನು ನಿಯಂತ್ರಿಸುವಲ್ಲಿ ಸಫಲರಾಗುತ್ತಿದ್ದಾರೆ ಮತ್ತು ವಿಕೆಟ್​ಗಳನ್ನೂ ಪಡೆಯುತ್ತಿದ್ದಾರೆ.

ಈ ಆವೃತಿಯಲ್ಲಿ ಕೆಕೆಆರ್ ವಿರುದ್ಧ ಆಡಿರುವ ಮೊದಲ ಪಂದ್ಯವನ್ನು ಗೆದ್ದಿರುವ ಮುಂಬೈ ಅದೇ ಆತ್ಮವಿಶ್ವಾಸದೊಂದಿಗೆ ಇವತ್ತು ಮೈದಾನಕ್ಕಿಳಿಯಲಿದೆ. ಅಲ್ಲದೆ, ಹೆಡ್ ಟು ಹೆಡ್ ಪರ್ಫಾಮನ್ಸ್​ಗಳನ್ನು ಗಮನಿಸಿದರೂ, ಅಂಬಾನಿಗಳ ತಂಡ ಆಡಿರುವ 25ಲ್ಲಿ 20 ಗೆದ್ದು ಶಾರುಖ್ ಖಾನ್ ಟೀಮಿನಿಂದ ಗಾವುದ ಅಂತರವನ್ನು ಕಾಯ್ದುಕೊಂಡಿದೆ.

ಅತ್ತ, ಕೆಕೆಆರ್ ಟೀಮಿನ ಮ್ಯಾನೇಜ್ಮೇಂಟ್ ನಾಯಕತ್ವದಿಂದ ಕೆಳಗಿಳಿದಿರುವ ಕಾರ್ತೀಕ್ ಆವರ ನಿರ್ಧಾರವನ್ನು ಸ್ವಾಗತಿಸುತ್ತಾ ಶ್ಲಾಘಿಸಿದೆ. ಪ್ರಾಯಶಃ ಇಂದು ಕಾರ್ತೀಕ್ ಓಪನರ್ ಆಗಿ ಆಡುವ ಸಾಧ್ಯತೆಯಿದೆ. ಆರಂಭ ಆಟಗಾರನಾಗಿ ಆಡುತ್ತಿರುವ ಶುಬ್​ಮನ್ ಗಿಲ್ ಹೆಚ್ಚು ಕಡಿಮೆ ಎಲ್ಲ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನಗಳನ್ನು ನೀಡಿದ್ದಾರೆ. ಸುನಿಲ್ ನರೈನ್​ರನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿಸಲು ನಿರ್ಧರಿಸಿರುವುದು ಉತ್ತಮ ನಡೆ. ಅವರ ಸ್ಥಾನದಲ್ಲಿ ಆಡಿದ ರಾಹುಲ್ ತ್ರಿಪಾಠಿ ಸಿಎಸ್​ಕೆ ವಿರುದ್ಧ ಸ್ಫೋಟಕ 81 ರನ್ ಬಾರಿಸಿದರು.

ಇಂದಿನಿಂದ ಮೊರ್ಗನ್ ಕೆಕೆಅರ್ ಟೀಮನ್ನು ಮುನ್ನಡೆಸಲಿರುವುದಿಂದ ಗೇಮ್ ಪ್ಲ್ಯಾನ್​ಗಳು ಬದಲಾಗಬಹುದು. ಸೀಮಿತ ಓವರ್​ಗಳ ಕ್ರಿಕೆಟ್​ನಲ್ಲಿ ಮೊರ್ಗನ್ ಶ್ರೇಷ್ಠ ನಾಯಕರಲ್ಲಿ ಒಬ್ಬರೆಂದು ಪರಿಗಣಿಸಲ್ಪಡುತ್ತಾರೆ. ಜೊತೆಗೆ ಅವರು ಮಧ್ಯಮ ಕ್ರಮಾಂಕದಲ್ಲಿ ಬಿರುಸಿನ ಹೊಡೆತಗಳನ್ನು ಆಡುವ ಬ್ಯಾಟ್ಸ್​ಮನ್. ಕೆಲವು ಆಟಗಾರರು ತಮ್ಮ ಮೇಲೆ ಹೊಣೆ ಹೆಚ್ಚಾದಾಗ ಅತ್ಯುತ್ತಮ ಪ್ರದರ್ಶನಗಳನ್ನು ನೀಡಲಾರಂಭಿಸುತ್ತಾರೆ, ಮೊರ್ಗನ್ ಈ ಗುಂಪಿಗೆ ಸೇರಿದ ಆಟಗಾರ.

ಐಪಿಎಲ್ 13 ನೇ ಆವೃತಿ ಮೊದಲ ಸುತ್ತು ಮುಗಿದರೂ, ಕೆಕೆಆರ್​ನ ವಿಸ್ಫೋಟಕ ಬ್ಯಾಟ್ಸ್​ಮನ್ ಆಂದ್ರೆ ರಸೆಲ್​ರ ಬ್ಯಾಟ್ ಮೈದಾನದಲ್ಲಿ ಝಳಪಳಿಸುತ್ತಿಲ್ಲ. ಅವರಿಂದ ಸಿಕ್ಸರ್​ಗಳ ಸುರಿಮಳೆಯಾಗುವುದನ್ನು ಟೀಮು ನಿರೀಕ್ಷಿಸುತ್ತಿದೆ. ಉಳಿದಂತೆ, ನಿತಿಷ್ ರಾಣಾ ಉತ್ತಮ ಫಾರ್ಮ್​ನಲ್ಲಿದ್ದಾರೆ.

ಕೆಕೆಆರ್​ನ ಯುವ ಬೌಲರ್​ಗಳಾದ ಪ್ರಸಿಧ್ ಕೃಷ್ಣ, ಶಿವಮ್ ಮಾವಿ ಮತ್ತು ಕಮ್ಲೇಶ್ ನಾಗರಕೋಟಿ ತಮ್ಮ ಮೇಲಿಟ್ಟಿದ್ದ ಭರವಸೆಯನ್ನು ಉಳಿಸಿಕೊಂಡಿದ್ದಾರೆ. ಮಾವಿ, ಕೊಂಚ ಆಫ್ ಕಲರ್ ಎನಿಸುತ್ತಿದ್ದರೂ ಅಪಾರ ಪ್ರತಿಭಾವಂತ. ಕುಲ್ದೀಪ್ ಯಾದವ್ ಮತ್ತು ನರೈನ್ ಅವರಲ್ಲಿ ಕೆಕೆಆರ್ ಇಬ್ಬರು ವಿಶ್ವದರ್ಜೆಯ ಸ್ಪಿನ್ನರ್​ಗಳನ್ನು ಹೊಂದಿದೆ. 

ಒಟ್ಟಿನಲ್ಲಿ, ಹೊಸ ನಾಯಕನ ಸಾರಥ್ಯದಲ್ಲಿ ಕೆಕೆಆರ್ ಪ್ರದರ್ಶನ ಉತ್ತಮಗೊಳ್ಳಬಹುದೆ ಎನ್ನುವುದನ್ನು ಕಾದು ನೋಡಬೇಕು.

Published On - 4:32 pm, Fri, 16 October 20

ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!