ಕಾರು ಅಪಘಾತದಲ್ಲಿ KAS ಅಧಿಕಾರಿ ಪ್ರಾಣಾಪಾಯದಿಂದ ಪಾರು, ಎಲ್ಲಿ?

ಬೆಂಗಳೂರು: ಕೆಎಎಸ್ ಮಹಿಳಾ ಅಧಿಕಾರಿಯೊಬ್ಬರು ಸಂಚರಿಸುತ್ತಿದ್ದ ಕಾರು ಅಪಘಾತಕ್ಕೆ ಈಡಾಗಿರುವ ಘಟನೆ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಅದೃಷ್ಟವಶಾತ್‌ ಕಾರಿನಲ್ಲಿದ್ದ ಅಧಿಕಾರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. KIADB ಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ KAS ಅಧಿಕಾರಿ ಅನುರಾಧಾ ನಿನ್ನೆ ಮಧ್ಯಾಹ್ನ ಕೆ.ಆರ್.ಪುರಂ ಕಡೆಗೆ ತೆರಳುತ್ತಿದ್ದರು. ಈ ವೇಳೆ ತಮ್ಮ ಖಾಸಗಿ ಕಾರು ನಿಯಂತ್ರಣ ತಪ್ಪಿ ಟಿನ್‌ ಫ್ಯಾಕ್ಟರಿ ಬಳಿ ನಡೆಯುತ್ತಿರುವ ಮೆಟ್ರೋ ಕಾಮಗಾರಿಯ ಬ್ಯಾರಿಕೇಡ್‌ಗೆ ಗುದ್ದಿದೆ. ಕಾರು ಗುದ್ದಿದ ರಭಸಕ್ಕೆ ಇಡೀ ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದೆ. ಆದರೆ, […]

ಕಾರು ಅಪಘಾತದಲ್ಲಿ KAS ಅಧಿಕಾರಿ ಪ್ರಾಣಾಪಾಯದಿಂದ ಪಾರು, ಎಲ್ಲಿ?
Edited By:

Updated on: Jul 28, 2020 | 12:51 AM

ಬೆಂಗಳೂರು: ಕೆಎಎಸ್ ಮಹಿಳಾ ಅಧಿಕಾರಿಯೊಬ್ಬರು ಸಂಚರಿಸುತ್ತಿದ್ದ ಕಾರು ಅಪಘಾತಕ್ಕೆ ಈಡಾಗಿರುವ ಘಟನೆ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಅದೃಷ್ಟವಶಾತ್‌ ಕಾರಿನಲ್ಲಿದ್ದ ಅಧಿಕಾರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

KIADB ಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ KAS ಅಧಿಕಾರಿ ಅನುರಾಧಾ ನಿನ್ನೆ ಮಧ್ಯಾಹ್ನ ಕೆ.ಆರ್.ಪುರಂ ಕಡೆಗೆ ತೆರಳುತ್ತಿದ್ದರು. ಈ ವೇಳೆ ತಮ್ಮ ಖಾಸಗಿ ಕಾರು ನಿಯಂತ್ರಣ ತಪ್ಪಿ ಟಿನ್‌ ಫ್ಯಾಕ್ಟರಿ ಬಳಿ ನಡೆಯುತ್ತಿರುವ ಮೆಟ್ರೋ ಕಾಮಗಾರಿಯ ಬ್ಯಾರಿಕೇಡ್‌ಗೆ ಗುದ್ದಿದೆ. ಕಾರು ಗುದ್ದಿದ ರಭಸಕ್ಕೆ ಇಡೀ ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದೆ.

ಆದರೆ, ಅದೃಷ್ಟವಶಾತ್‌ ಕಾರಿನಲ್ಲಿದ್ದ ಅಧಿಕಾರಿ ಅನುರಾಧಾಗೆ ಸಣ್ಣಪುಟ್ಟ ಗಾಯಗಳಾಗಿದೆ. ಕೂಡಲೇ, ಗಾಯಾಳು ಮಹಿಳಾ ಅಧಿಕಾರಿಯನ್ನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

Published On - 5:00 pm, Mon, 27 July 20