ಬೆಂಗಳೂರು: ರಾಜ್ಯದ ವಿವಿಧ ನಿಗಮ ಮತ್ತು ಮಂಡಳಿಗಳಿಗೆ 24 ಶಾಸಕರನ್ನ ಅಧ್ಯಕ್ಷರಾಗಿ ನೇಮಕಾತಿ ಮಾಡಿದ ಕೆಲವೇ ಗಂಟೆಗಳಲ್ಲಿ ಸರ್ಕಾರ ತನ್ನ ಆದೇಶ ಹಿಂಪಡೆದಿದೆ.
BSY ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ 24 ಶಾಸಕರನ್ನ ನಿಗಮ ಮತ್ತು ಮಂಡಳಿಗಳ ಅಧ್ಯಕ್ಷರಾಗಿ ನೇಮಿಸಲು ಮುಂದಾಗಿತ್ತು. ಈ ಮೂಲಕ ಸಚಿವ ಸ್ಥಾನಗಳ ಆಕಾಂಕ್ಷಿಯಾಗಿದ್ದ ಶಾಸಕರನ್ನ ತೃಪ್ತಿಪಡಿಸೋಕೆ ಯತ್ನಿಸಿತ್ತು. ಆದರೆ, ತಮ್ಮ ನೇಮಕಾತಿಗೆ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಕೆಲ ಅಧ್ಯಕ್ಷರ ನೇಮಕಾತಿ ಆದೇಶವನ್ನ ಸರ್ಕಾರ ಹಿಂಪಡೆದಿದೆ.
4/24: ಯಾರಿಗೆಲ್ಲ ಅಧ್ಯಕ್ಷ ಭಾಗ್ಯ ಕ್ಯಾನ್ಸಲ್? ಈ ಕೆಳಕಂಡ ನಾಲ್ವರು ಶಾಶಕರ ನೇಮಕಾತಿಯನ್ನ ಸರ್ಕಾರ ವಾಪಸ್ ಪಡೆದಿದೆ. 1. ಬಸವರಾಜ ದಡೇಸೂಗೂರು -ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷ 2. ಲಾಲಾಜಿ ಮೆಂಡನ್- ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ 3. G.H.ತಿಪ್ಪಾರೆಡ್ಡಿ-ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮ 4. ಪರಣ್ಣ ಮುನವಳ್ಳಿ-ರಾಜ್ಯ ಹಣಕಾಸು ಸಂಸ್ಥೆ ಅಧ್ಯಕ್ಷ
ನೇಮಕಾತಿ ಆದೇಶ ಹಿಂಪಡೆಯಲು ಯಾವ ಸ್ಪಷ್ಟ ಕಾರಣಗಳು ತಿಳಿದುಬಂದಿಲ್ಲ. ಆದರೆ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಸ್ಥಾನ ವಿಚಾರವಾಗಿ ಶಾಸಕ ಲಾಲಾಜಿ ಮೆಂಡನ್ ನೇಮಕಕ್ಕೆ ವಿರೋಧ ವ್ಯಕ್ತವಾಗಿತ್ತು. ಲಾಲಾಜಿ ಮೆಂಡನ್ ನೇಮಕಕ್ಕೆ ತಜ್ಞರಿಂದ ವಿರೋಧ ವ್ಯಕ್ತವಾಗಿದ್ದು ಆಯೋಗದ ಅಧ್ಯಕ್ಷ ಸ್ಥಾನ ಸಾಂವಿಧಾನಿಕ ಸ್ಥಾನಮಾನವಿರುವಂಥದ್ದು.
ಹಾಗಾಗಿ, ಆಯೋಗದ ಅಧ್ಯಕ್ಷರಾಗಲು ಹೈಕೋರ್ಟ್ ಜಡ್ಜ್ ಆಗಿರಬೇಕು ಅಥವಾ ಹೈಕೋರ್ಟ್ ಜಡ್ಜ್ ಆಗಿ ನೇಮಕಾತಿ ಆಗುವ ಅರ್ಹತೆ ಇರಬೇಕು ಎಂದು ತಿಳಿಸಿದ್ದರು. ಹೀಗಾಗಿ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ಮೆಂಡನ್ ಸೂಕ್ತವಲ್ಲ ಎಂದು ತಜ್ಞರು ಮಾಹಿತಿ ನೀಡಿದ್ದರು.