ಬಯಲು ಸೀಮೆಯಲ್ಲಿ ಮೀನಿನ ಕೃಷಿಯ ಮಾಯೆ..!
ಕೋಲಾರ: ಅದು ಹನಿ ಹನಿ ನೀರಿಗೂ ಪರದಾಡುವ ಬರದನಾಡು. ಪರಿಸ್ಥಿತಿ ಹೀಗಿರುವಾಗ ನೀರಲ್ಲೇ ಬದುಕುವ ಮೀನುಗಳ ಸಾಕಾಣಿಕೆ ನಡೆಸಿ ಅದರಿಂದ ಆದಾಯ ಗಳಿಸುತ್ತೇವೆ ಅಂದ್ರೆ ಎಂಥವರಿಗೂ ಆಶ್ಚರ್ಯ ಆಗೇ ಆಗುತ್ತೆ. ಅಷ್ಟಕ್ಕೂ ಅಲ್ಲಿ ಮೀನು ಮಾಡಿದ ಮಾಯೆಯಾದ್ರು ಏನು ಈಸ್ಟೋರಿ ಓದಿ. ನೆನೆಗುದಿಗೆ ಬಿದ್ದಿದ್ದ ಮೀನು ಸಂತಾನೋತ್ಪತ್ತಿ ಕೇಂದ್ರಕ್ಕೆ ಮರು ಜೀವ ಹೌದು ಕೋಲಾರದ ಮಿನಿ ಕೆ.ಆರ್.ಎಸ್ ಎಂದು ಕರೆಯಲಾಗುವ ಮಾರ್ಕಂಡೇಯ ಅಣೆಕಟ್ಟಿನ ಬಳಿ ಮೀನು ಸಂತಾನೋತ್ಪತ್ತಿ ಕೇಂದ್ರವನ್ನ ನಿರ್ಮಾಣ ಮಾಡಿ ಸುಮಾರು 50 ವರ್ಷಗಳೇ ಕಳೆದಿವೆ. […]

ಕೋಲಾರ: ಅದು ಹನಿ ಹನಿ ನೀರಿಗೂ ಪರದಾಡುವ ಬರದನಾಡು. ಪರಿಸ್ಥಿತಿ ಹೀಗಿರುವಾಗ ನೀರಲ್ಲೇ ಬದುಕುವ ಮೀನುಗಳ ಸಾಕಾಣಿಕೆ ನಡೆಸಿ ಅದರಿಂದ ಆದಾಯ ಗಳಿಸುತ್ತೇವೆ ಅಂದ್ರೆ ಎಂಥವರಿಗೂ ಆಶ್ಚರ್ಯ ಆಗೇ ಆಗುತ್ತೆ. ಅಷ್ಟಕ್ಕೂ ಅಲ್ಲಿ ಮೀನು ಮಾಡಿದ ಮಾಯೆಯಾದ್ರು ಏನು ಈಸ್ಟೋರಿ ಓದಿ.
ನೆನೆಗುದಿಗೆ ಬಿದ್ದಿದ್ದ ಮೀನು ಸಂತಾನೋತ್ಪತ್ತಿ ಕೇಂದ್ರಕ್ಕೆ ಮರು ಜೀವ ಹೌದು ಕೋಲಾರದ ಮಿನಿ ಕೆ.ಆರ್.ಎಸ್ ಎಂದು ಕರೆಯಲಾಗುವ ಮಾರ್ಕಂಡೇಯ ಅಣೆಕಟ್ಟಿನ ಬಳಿ ಮೀನು ಸಂತಾನೋತ್ಪತ್ತಿ ಕೇಂದ್ರವನ್ನ ನಿರ್ಮಾಣ ಮಾಡಿ ಸುಮಾರು 50 ವರ್ಷಗಳೇ ಕಳೆದಿವೆ. ಆರಂಭದಲ್ಲಿ ಇಲ್ಲಿ ಉತ್ತಮ ಮೀನಿನ ತಳಿಗಳನ್ನ ಮಾತ್ರ ಸಾಕಾಣಿಕೆ ಮಾಡಲಾಗುತ್ತಿತ್ತು. ಆದ್ರೆ ಕಳೆದ ಕೆಲವು ವರ್ಷಗಳಿಂದ ಇಲ್ಲಿ ನೀರಿನ ಸಮಸ್ಯೆ ವ್ಯಾಪಕವಾದ ಹಿನ್ನೆಲೆಯಲ್ಲಿ ಮೀನಿನ ಸಂತಾನೋತ್ಪತ್ತಿ ಯೋಜನೆಯನ್ನ ಸ್ಥಗಿತಗೊಳಿಸಲಾಗಿತ್ತು.

ಬರದ ನಾಡಲ್ಲಿ ಮೀನಿನ ಕೃಷಿಯ ಮಾಯೆ ಕಳೆದ ಎರಡು ವರ್ಷಗಳಿಂದ ಇಲ್ಲಿ ಅಪರೂಪದ ತಳಿಗಳಾದ ಕಾಟ್ಲಾ, ರೋಹೂ ಮತ್ತು ಸಿಸಿ ಜಾತಿಯ ಮೀನುಗಳ ಕೃಷಿ ನಡೆಯುತ್ತಿದೆ. ಈ ಮೂಲಕ ಜಿಲ್ಲೆಯು ರಾಜ್ಯದಲ್ಲೇ ಎರಡನೇ ಸ್ಥಾನ ಪಡೆದಿದೆ. ಈ ವರ್ಷ ನೀರಿಲ್ಲದಿದ್ರು ಇಲ್ಲಿ ಅತಿ ಹೆಚ್ಚು ಅಂದ್ರೆ 30 ಲಕ್ಷಕ್ಕೂ ಅಧಿಕ ಕಾಟ್ಲಾ ತಳಿಯ ಮೀನಿನ ಸಂತಾನೋತ್ಪತ್ತಿ ಮಾಡಿ ಸಾಧನೆ ಮಾಡಿದೆ. ಕಬಿನಿ, ತುಂಗಭದ್ರಾ ಹಾಗೂ ನೇತ್ರಾವತಿ ನದಿ ಪ್ರದೇಶಗಳಲ್ಲಿ ಹೆಚ್ಚಾಗಿ ಬೆಳೆಯುವ ಈ ಮೀನನ್ನು ಮೊದಲ ಬಾರಿಗೆ ಬೂದಿಕೋಟೆಯ ಮೀನು ಸಂತಾನೋತ್ಪತ್ತಿ ಕೇಂದ್ರದಲ್ಲಿ ಬೆಳೆಸುವಲ್ಲಿ ಯಶಸ್ವಿಯಾಗಿದ್ದಾರೆ.

ನಿರೀಕ್ಷಿತ ಮಳೆಯಾಗದಿದ್ರೂ ಮೀನು ಉತ್ಪಾದನೆಗೆ ಸಹಕಾರಿ ಕಳೆದ ವರ್ಷ ಜಿಲ್ಲೆಯಲ್ಲಿ ಉತ್ತಮ ವರ್ಷಧಾರೆಯಾದ ಪರಿಣಾಮ ಮೀನು ಸಂತಾನೋತ್ಪತ್ತಿಗೆ ಸಹಕಾರಿಯಾಗಿದೆ. ಪರಿಣಾಮವಾಗಿ ಜಿಲ್ಲೆಯ ಕೆರೆಗಳಲ್ಲಿ ನೀರಿಲ್ಲದಿದ್ರು ಇಲ್ಲಿ ಬೆಳೆಸಿದ ಮೀನಿನ ಮರಿಗಳನ್ನು ಜಿಲ್ಲೆಯಷ್ಟೇ ಅಲ್ಲದೆ ತುಮಕೂರು, ಚಿಕ್ಕಬಳ್ಳಾಪುರ ಮತ್ತು ರಾಮನಗರ ಸೇರಿದಂತೆ ಇತರೆ ಜಿಲ್ಲೆಗಳ ರೈತರಿಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.

ಈ ಮೂಲಕ ಹೆಚ್ಚು ಆದಾಯ ತಂದು ಕೊಡುವ ಹಾಗೂ ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಕಾಟ್ಲಾ ಹಾಗೂ ರೋಹೂ ಮೀನಿನ ಸಂತಾನೋತ್ಪತ್ತಿಯಿಂದ ಬಯಲು ಸೀಮೆಯ ಜನ ಕೂಡ ಎಂಥ ಸವಾಲಿಗೂ ಸಿದ್ಧ ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ.
ಒಟ್ಟಾರೆ, ಉತ್ತಮ ಮಳೆಯಾಗುವ ಪ್ರದೇಶದಲ್ಲಷ್ಟೇ ಸಾಕಲಾಗುತ್ತಿದ ಕಾಟ್ಲಾ ಮತ್ತು ರೋಹೂ ಮೀನನ್ನು ಬಯಲು ಸೀಮೆಯಲ್ಲೂ ಉತ್ಪಾದನೆ ಮಾಡಲು ಮುಂದಾದ ಸಾಧನೆ ನಿಜಕ್ಕೂ ಪ್ರಶಂಸನೀಯ. ರಾಜೇಂದ್ರಸಿಂಹ
Published On - 7:03 pm, Mon, 27 July 20




