ಕಾಂಗ್ರೆಸ್ನಲ್ಲಿ ಮುಂದುವರಿದ ಡಿನ್ನರ್ ಮೀಟಿಂಗ್: ಅನಾರೋಗ್ಯದ ನಡುವೆಯೂ ಸಿಎಂ ಭಾಗಿ
ಕರ್ನಾಟಕ ಕಾಂಗ್ರೆಸ್ನಲ್ಲಿನ ಬಣ ರಾಜಕೀಯ ಬ್ರೇಕ್ ಫಾಸ್ಟ್ನಿಂದ ಡಿನ್ನರ್ ವರೆಗೂ ಬಂದು ನಿಂತಿದೆ. ಹೌದು.. ಸಿಎಂ ಕುರ್ಚಿಗಾಗಿ ಸಿಎಂ -ಡಿಸಿಎಂ ನಡುವೆ ಮುಸುಕಿನ ಗುದ್ದಾಟ ನಡೆದಿದ್ದು, ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಬಣದ ಡಿನ್ನರ್ ಪಾಲಿಟಿಕ್ಸ್ ಮುಂದುವರೆದಿದೆ. ಬೆಳಗಾವಿ ಅಧಿವೇಶದ ಸಂದರ್ಭದಲ್ಲೂ ಸಹ ಜಿದ್ದಿಗೆ ಬಿದ್ದವರಂತೆ ಉಭಯ ನಾಯಕರ ಬಣದಿಂದ ಒಬ್ಬರಾದ ಮೇಲೆ ಒಬ್ಬರಿಂದ ಡಿನ್ನರ್ ಮೀಟಿಂಗ್ ಆಯೋಜನೆಗೊಳ್ಳುತ್ತಿವೆ. ಇದಕ್ಕೆ ಪೂರಕವೆಂಬಂತೆ ಇಂದು (ಡಿಸೆಂಬರ್ 18) ಸಚಿವ ಸತೀಶ್ ಜಾರಕಿಹೊಳಿ ತಮ್ಮ ಬೆಳಗಾವಿ ನಿವಾಸದಲ್ಲಿ ಸಿಎಂ ಸೇರಿದಂತೆ ಇತರೆ ತಮ್ಮ ಬಣದ ನಾಯಕರಿಗೆ ಔತಣಕೂಟ ಏರ್ಪಡಿಸಲಾಗಿದೆ.
ಬೆಳಗಾವಿ, (ಡಿಸೆಂಬರ್ 18): ಕರ್ನಾಟಕ ಕಾಂಗ್ರೆಸ್ನಲ್ಲಿನ (Karnataka Congress) ಬಣ ರಾಜಕೀಯ ಬ್ರೇಕ್ ಫಾಸ್ಟ್ನಿಂದ ಡಿನ್ನರ್ ವರೆಗೂ (dinner meeting) ಬಂದು ನಿಂತಿದೆ. ಹೌದು.. ಸಿಎಂ ಕುರ್ಚಿಗಾಗಿ ಸಿಎಂ -ಡಿಸಿಎಂ ನಡುವೆ ಮುಸುಕಿನ ಗುದ್ದಾಟ ನಡೆದಿದ್ದು, ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ (Siddaramaiah) ಬಣದ ಡಿನ್ನರ್ ಪಾಲಿಟಿಕ್ಸ್ ಮುಂದುವರೆದಿದೆ. ಬೆಳಗಾವಿ ಅಧಿವೇಶದ ಸಂದರ್ಭದಲ್ಲೂ ಸಹ ಜಿದ್ದಿಗೆ ಬಿದ್ದವರಂತೆ ಉಭಯ ನಾಯಕರ ಬಣದಿಂದ ಒಬ್ಬರಾದ ಮೇಲೆ ಒಬ್ಬರಿಂದ ಡಿನ್ನರ್ ಮೀಟಿಂಗ್ ಆಯೋಜನೆಗೊಳ್ಳುತ್ತಿವೆ. ಇದಕ್ಕೆ ಪೂರಕವೆಂಬಂತೆ ಇಂದು (ಡಿಸೆಂಬರ್ 18) ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ತಮ್ಮ ಬೆಳಗಾವಿ ನಿವಾಸದಲ್ಲಿ ಸಿಎಂ ಸೇರಿದಂತೆ ಇತರೆ ತಮ್ಮ ಬಣದ ನಾಯಕರಿಗೆ ಔತಣಕೂಟ ಏರ್ಪಡಿಸಲಾಗಿದ್ದು, ಬೆಳಗಾವಿಯ ಕುವೆಂಪು ನಗರದಲ್ಲಿರುವ ಸತೀಶ್ ನಿವಾಸಕ್ಕೆ ಸಿಎಂ ಸಿದ್ದರಾಮಯ್ಯ ಜತೆಗೆ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ, ಜಮೀರ್ ಅಹ್ಮದ್ ಖಾನ್, ಎಂ.ಸಿ.ಸುಧಾಕರ್ ಆಗಮಿಸಿ ಡಿನ್ನರ್ನಲ್ಲಿ ಭಾಗಿಯಾಗಿದ್ದಾರೆ. ಇನ್ನು ಡಿನ್ನರ್ಗೆ ಬಗೆ ಬಗೆಯ ಖಾದ್ಯಗಳನ್ನು ತಯಾರಿಸಲಾಗಿದೆ. ಅದರಲ್ಲೂ ಉತ್ತರ ಕರ್ನಾಟಕದ ಶೈಲಿ ಊಟ ಸಹ ಒಳಗೊಂಡಿದೆ.
ಅನಾರೋಗ್ಯದ ನಡುವೆ ಸಿಎಂ, ಆಪ್ತನ ಔತಣಕೂಟಕ್ಕೆ ಆಗಮಿಸಿದ್ದಾರೆ. ಆದ್ರೆ, ಸಿದ್ದರಾಮಯ್ಯನವರಿಗೆ ಹೊಟ್ಟೆ ಸರಿ ಇಲ್ಲದಿದ್ದರಿಂದ ಅವರು ನಾನ್ ವೆಜ್ ಊಟ ಮಾಡುತ್ತಾರೋ ಇಲ್ವೋ ಗೊತ್ತಿಲ್ಲ. ಸದ್ಯಕ್ಕಂತೂ ಈ ಡಿನ್ನರ್ ಮೀಟಿಂಗ್ನಲ್ಲಿ ಭಾಗಿಯಾಗಿದ್ದು, ಆಪ್ತ ಸಚಿವರಿಗೆ ಕಂಪನಿ ಕೊಡುತ್ತಿದ್ದಾರೆ.

