ಕರುನಾಡಲ್ಲಿ 1 ಲಕ್ಷದ ಗಡಿ ದಾಟಿಯೇ ಬಿಟ್ಟಿತು ಸೋಂಕಿತರ ಸಂಖ್ಯೆ

ಕರುನಾಡಲ್ಲಿ 1 ಲಕ್ಷದ ಗಡಿ ದಾಟಿಯೇ ಬಿಟ್ಟಿತು ಸೋಂಕಿತರ ಸಂಖ್ಯೆ

ಬೆಂಗಳೂರು: ಕರ್ನಾಟಕದಲ್ಲಿ ವೇಗವಾಗಿ ಹಬ್ಬುತ್ತಿರುವ ಕೊರೊನಾ ಇಂದು ಮತ್ತೊಂದು ಮೈಲಿಗಲ್ಲು ಹಿಂದಿಕ್ಕಿದೆ. ಸೋಂಕಿತರ ಸಂಖ್ಯೆ 1 ಲಕ್ಷದ ಗಡಿ ದಾಟಿದ್ದು ರಾಜ್ಯದಲ್ಲಿ ಒಟ್ಟು ಸೋಂಕಿನ ಪ್ರಕರಣಗಳು 1,01,465ಕ್ಕೆ ಏರಿದೆ. ರಾಜ್ಯದಲ್ಲಿಂದು ಹೊಸದಾಗಿ 5,324 ಜನರಿಗೆ ಕೊರೊನಾ ದೃಢವಾಗಿದೆ. ಇದರಲ್ಲಿ ಅತಿ ಹೆಚ್ಚು ಅಂದ್ರೆ 1,953 ಕೇಸ್​ಗಳು ಕೇವಲ ರಾಜಧಾನಿ ಬೆಂಗಳೂರಿನಲ್ಲಿ ವರದಿಯಾಗಿದೆ. ಜೊತೆಗೆ, ಇಂದು ಒಂದೇ ದಿನ ಸೋಂಕಿನಿಂದ 75 ಜನರು ಸಾವನ್ನಪ್ಪಿದ್ದಾರೆ. ಅದರಲ್ಲಿ ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿಗೆ 26 ಜನರು ಬಲಿಯಾಗಿದ್ದಾರೆ. ರಾಜ್ಯದಲ್ಲಿ ಇದುವರೆಗೆ […]

KUSHAL V

| Edited By:

Jul 28, 2020 | 1:04 AM

ಬೆಂಗಳೂರು: ಕರ್ನಾಟಕದಲ್ಲಿ ವೇಗವಾಗಿ ಹಬ್ಬುತ್ತಿರುವ ಕೊರೊನಾ ಇಂದು ಮತ್ತೊಂದು ಮೈಲಿಗಲ್ಲು ಹಿಂದಿಕ್ಕಿದೆ. ಸೋಂಕಿತರ ಸಂಖ್ಯೆ 1 ಲಕ್ಷದ ಗಡಿ ದಾಟಿದ್ದು ರಾಜ್ಯದಲ್ಲಿ ಒಟ್ಟು ಸೋಂಕಿನ ಪ್ರಕರಣಗಳು 1,01,465ಕ್ಕೆ ಏರಿದೆ.

ರಾಜ್ಯದಲ್ಲಿಂದು ಹೊಸದಾಗಿ 5,324 ಜನರಿಗೆ ಕೊರೊನಾ ದೃಢವಾಗಿದೆ. ಇದರಲ್ಲಿ ಅತಿ ಹೆಚ್ಚು ಅಂದ್ರೆ 1,953 ಕೇಸ್​ಗಳು ಕೇವಲ ರಾಜಧಾನಿ ಬೆಂಗಳೂರಿನಲ್ಲಿ ವರದಿಯಾಗಿದೆ.

ಜೊತೆಗೆ, ಇಂದು ಒಂದೇ ದಿನ ಸೋಂಕಿನಿಂದ 75 ಜನರು ಸಾವನ್ನಪ್ಪಿದ್ದಾರೆ. ಅದರಲ್ಲಿ ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿಗೆ 26 ಜನರು ಬಲಿಯಾಗಿದ್ದಾರೆ. ರಾಜ್ಯದಲ್ಲಿ ಇದುವರೆಗೆ ಕೊರೊನಾದಿಂದ 1,953 ಜನರು ಕೊನೆಯುಸಿರೆಳೆದಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಇನ್ನು ಇತರೆ ಜಿಲ್ಲೆಗಳನ್ನು ನೋಡೋದಾದರೆ

ಜಿಲ್ಲೆ ಇಂದಿನ ಸೋಂಕಿತರ ಸಂಖ್ಯೆ
ಬಳ್ಳಾರಿ 840
ಕಲಬುರಗಿ 631
ಮೈಸೂರು 296
ಉಡುಪಿ 225
ಧಾರವಾಡ 193
ಬೆಳಗಾವಿ 155
ಕೋಲಾರ 142
ಬೆಂಗಳೂರು ಗ್ರಾಮಾಂತರ 138
ರಾಯಚೂರು 120
ದಕ್ಷಿಣ ಕನ್ನಡ 119
ವಿಜಯಪುರ 110
ದಾವಣಗೆರೆ 110
ತುಮಕೂರು 89
ಶಿವಮೊಗ್ಗ 76
ಹಾಸನ 66
ಯಾದಗಿರಿ 64
ಗದಗ 63
ರಾಮನಗರ 62
ಮಂಡ್ಯ 56
ಚಿತ್ರದುರ್ಗ 51
ಬೀದರ್ 42
ಚಿಕ್ಕಬಳ್ಳಾಪುರ 40
ಉತ್ತರ ಕನ್ನಡ 32
ಕೊಪ್ಪಳ 28
ಹಾವೇರಿ 27
ಬಾಗಲಕೋಟೆ 27
ಚಿಕ್ಕಮಗಳೂರು 26
ಚಾಮರಾಜನಗರ 16
ಕೊಡಗು 10

Follow us on

Related Stories

Most Read Stories

Click on your DTH Provider to Add TV9 Kannada