ರಾಜ್ಯದಲ್ಲಿ 1 ಲಕ್ಷದ ಗಡಿಯತ್ತ ದಾಪುಗಾಲು ಹಾಕುತ್ತಿರುವ ಕೊರೊನಾ ಮಾರಿ.. ಮುಂದೇನು?
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಒಂದು ಲಕ್ಷ ತಲುಪಿದ್ದು, ಕೇವಲ ಒಂದು ತಿಂಗಳಲ್ಲಿ ಕೊರೊನಾ ವೈರಸ್ ರಾಜ್ಯದ ಚಿತ್ರಣವನ್ನೇ ಬದಲಿಸಿಬಿಟ್ಟಿದೆ. ಆರಂಭದಲ್ಲಿ ಕರ್ನಾಟಕದಲ್ಲಿ ಕೇವಲ 16,514 ಇದ್ದ ಕೊರೊನಾ ಸೋಂಕಿತರ ಸಂಖ್ಯೆ, 26 ದಿನಗಳಲ್ಲಿ ಬರೋಬರಿ 80,899 ಕೇಸ್ ಗಳು ಪತ್ತೆಯಾಗಿದೆ. ಇಲ್ಲಿಯವರೆಗೆ ರಾಜ್ಯದಲ್ಲಿ 96,141 ಜನ ಸೋಂಕು ತಗುಲಿಸಿಕೊಂಡಿದ್ದು, ಇಂದು 1 ಲಕ್ಷ ಗಡಿ ದಾಟುವ ಎಲ್ಲಾ ಸೂಚನೆಗಳಿವೆ. ಸದ್ಯ ರಾಜ್ಯದಲ್ಲಿ 58,417 ಕೊರೊನಾ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದರ ಪೈಕಿ 33,450 […]

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಒಂದು ಲಕ್ಷ ತಲುಪಿದ್ದು, ಕೇವಲ ಒಂದು ತಿಂಗಳಲ್ಲಿ ಕೊರೊನಾ ವೈರಸ್ ರಾಜ್ಯದ ಚಿತ್ರಣವನ್ನೇ ಬದಲಿಸಿಬಿಟ್ಟಿದೆ.
ಆರಂಭದಲ್ಲಿ ಕರ್ನಾಟಕದಲ್ಲಿ ಕೇವಲ 16,514 ಇದ್ದ ಕೊರೊನಾ ಸೋಂಕಿತರ ಸಂಖ್ಯೆ, 26 ದಿನಗಳಲ್ಲಿ ಬರೋಬರಿ 80,899 ಕೇಸ್ ಗಳು ಪತ್ತೆಯಾಗಿದೆ. ಇಲ್ಲಿಯವರೆಗೆ ರಾಜ್ಯದಲ್ಲಿ 96,141 ಜನ ಸೋಂಕು ತಗುಲಿಸಿಕೊಂಡಿದ್ದು, ಇಂದು 1 ಲಕ್ಷ ಗಡಿ ದಾಟುವ ಎಲ್ಲಾ ಸೂಚನೆಗಳಿವೆ.
ಸದ್ಯ ರಾಜ್ಯದಲ್ಲಿ 58,417 ಕೊರೊನಾ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದರ ಪೈಕಿ 33,450 ಜನ ಬೆಂಗಳೂರಿನವರೇ ಸೇರಿದ್ದಾರೆ. ಇದುವರೆಗೆ ರಾಜ್ಯದಲ್ಲಿ ಒಟ್ಟು 9,000 ಮಂದಿ ಹೈರಿಸ್ಕ್ ಪೇಷಂಟ್ ಗಳಿದ್ದರೆ, 632 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 150 ದಿನಗಳಲ್ಲಿ ಬರೋಬ್ಬರಿ 1,878 ಮಂದಿ ಕೊರೊನಾ ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ.
ಇನ್ನು ಬೆಂಗಳೂರಿನ ಕೊರೊನಾ ಸೋಂಕಿತರ ಚಿತ್ರಣ ನೋಡಬೇಕೆಂದರೆ 150 ದಿನಗಳಲ್ಲಿ 45 ಸಾವಿರ ಜನ ಕೊರೊನಾಗೆ ತುತ್ತಾಗಿದ್ದಾರೆ. 150 ದಿನಗಳಲ್ಲಿ 891 ಮಂದಿ ನಗರದಲ್ಲಿ ಅಸುನೀಗಿದ್ದಾರೆ.
ಬೆಂಗಳೂರಿನಲ್ಲಿ ಇದುವರೆಗೆ 11,405 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಸದ್ಯ 33,156 ಸಕ್ರೀಯ ಕೊರೊನಾ ಸೋಂಕಿನ ಪ್ರಕರಣಗಳಿವೆ. ಇನ್ನ 353 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 33,156 ಸಕ್ರಿಯ ಪ್ರಕರಣಗಳಲ್ಲಿ 152 ಮಂದಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ,170 ಮಂದಿ ಸರ್ಕಾರಿ ಮೆಡಿಕಲ್ ಕಾಲೇಜುಗಳಲ್ಲಿ, 828 ಮಂದಿ ಖಾಸಗಿ ಆಸ್ಪತ್ರೆಗಳಲ್ಲಿ, 1,412 ಮಂದಿ ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ, 2,529 ಮಂದಿ ಬಿಬಿಎಂಪಿ ಕೊರೊನಾ ಆರೈಕೆ ಕೇಂದ್ರದಲ್ಲಿ, ಹಾಗೂ 492 ಮಂದಿ ಖಾಸಗಿ ಆರೈಕೆ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 10 ಸಾವಿರಕ್ಕೂ ಅಧಿಕ ಮಂದಿ ಹೋಂ ಐಸೋಲೇಷನ್ ನಲ್ಲಿದ್ದರೆ, ಇನ್ನು 3,388 ಮಂದಿ ಸೋಂಕಿತರು ಸುಳಿವಿಲ್ಲದೇ ಪರಾರಿಯಾಗಿದ್ದಾರೆ.
ರಾಜ್ಯದಲ್ಲಿ ಅನ್‌ಲಾಕ್ ಬಳಿಕ ಕೊರೊನಾ ಪ್ರಕರಣ ಹೆಚ್ಚಾಗಿದ್ದು, ಜುಲೈ ತಿಂಗಳಿನಲ್ಲಿ ಸಾಯುವವರ ಸಂಖ್ಯೆಯು ಹೆಚ್ಚಾಗಿದೆ. ಜುಲೈ 1 ರಷ್ಟರಲ್ಲಿ 253 ರೋಗಿಗಳು ಸಾವನ್ನಪ್ಪಿದ್ದರು, ಆದರೆ ಇಂದಿಗೆ 1,878 ರೋಗಿಗಳು ಕೊರೊನಾಗೆ ಬಲಿಯಾಗಿದ್ದಾರೆ.
ಹಾಗಿದ್ರೆ ಇಡೀ ಜುಲೈ ತಿಂಗಳಲ್ಲಿ ಕರ್ನಾಟಕದ ಕೇಸ್‌ಗಳ ಅಂಕಿ ಅಂಶ ನೋಡೋದಾದ್ರೆ..
ಜುಲೈ 1 -1272 ಕೇಸ್ ಜುಲೈ 2 -1502 ಕೇಸ್ ಜುಲೈ 3 -1694 ಕೇಸ್ ಜುಲೈ 4 -1839 ಕೇಸ್ ಜುಲೈ 5 -1925 ಕೇಸ್ ಜುಲೈ 6 -1843 ಕೇಸ್ ಜುಲೈ 7 -1498 ಕೇಸ್ ಜುಲೈ 8 -2063 ಕೇಸ್ ಜುಲೈ 9 -2228 ಕೇಸ್ ಜುಲೈ 10 -2313 ಕೇಸ್ ಜುಲೈ 11 -2798 ಕೇಸ್ ಜುಲೈ 12 -2627 ಕೇಸ್ ಜುಲೈ 13 -2738 ಕೇಸ್ ಜುಲೈ 14 -2496 ಕೇಸ್ ಜುಲೈ 15 -3176 ಕೇಸ್ ಜುಲೈ 16 -4169 ಕೇಸ್ ಜುಲೈ 17 -3793 ಕೇಸ್ ಜುಲೈ 18 -4537 ಕೇಸ್ ಜುಲೈ 19 -4120 ಕೇಸ್ ಜುಲೈ 20 -3648 ಕೇಸ್ ಜುಲೈ 21 -3649 ಕೇಸ್ ಜುಲೈ 22 -4764 ಕೇಸ್ ಜುಲೈ 23 -5030 ಕೇಸ್ ಜುಲೈ 24 -5007 ಕೇಸ್ ಜುಲೈ 25 -5072 ಕೇಸ್ ಜುಲೈ 26 -5199 ಕೇಸ್
ಇನ್ನು ಆಗಸ್ಟ್ ತಿಂಗಳಲ್ಲಿ ಕೂಡಾ ಕೇಸ್‌ಗಳ ಸಂಖ್ಯೆ ಹೆಚ್ಚಲಿದೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ. ಹೀಗಾಗಿ ಕೊರೊನಾ ನಿಯಂತ್ರಣ ಮಾಡುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ.
Published On - 4:43 pm, Mon, 27 July 20




