‘ಬೆಂಗಳೂರಿನಲ್ಲಿ 3 ಸಾವಿರ ಸೋಂಕಿತರು ಪರಾರಿ ಆಗಿರುವುದು ನಿಜವೇ?’

‘ಬೆಂಗಳೂರಿನಲ್ಲಿ 3 ಸಾವಿರ ಸೋಂಕಿತರು ಪರಾರಿ ಆಗಿರುವುದು ನಿಜವೇ?’
ಬಿಬಿಎಂಪಿ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಸೋಂಕು ಎಲ್ಲೆಡೆ ಹರಡುತ್ತಿದೆ. ರಾಜಧಾನಿಯಲ್ಲೇ ಅತಿ ಹೆಚ್ಚು ಜನ ಸೋಂಕಿಗೆ ಒಳಗಾಗುತ್ತಿದ್ದಾರೆ. ಇದರ ಜೊತೆಗೆ ಅನೇಕ ಸೋಂಕಿತರು ಆಸ್ಪತ್ರೆಗಳಿಂದ ಪರಾರಿಯಾಗುತ್ತಿದ್ದಾರೆ. ನಗರದಲ್ಲಿ 3 ಸಾವಿರ ಕೊರೊನಾ ಸೋಂಕಿತರು ನಾಪತ್ತೆಯಾಗಿದ್ದಾರೆ ಎಂಬ ಸುದ್ದಿ ಹರಿದಾಡಿದೆ. ಹಾಗಿದ್ರೆ ಪಾಸಿಟಿವ್ ಬಂದವರು ಪತ್ತೆಯಾಗದಿರುವುದು ನಿಜವೇ? ಎಂದು ಮಾಧ್ಯಮಗಳ ವರದಿ ಆಧರಿಸಿ ಹೈಕೋರ್ಟ್ ಬಿಬಿಎಂಪಿಗೆ ಪ್ರಶ್ನಿಸಿದೆ. ಸುದ್ದಿ‌‌ ನಿಜವಾದರೆ ಮತ್ತಷ್ಟು ಜನರಿಗೆ ಕೊರೊನಾ ಹರಡಬಹುದು. 3,000 ಸೋಂಕಿತರು ಮತ್ತಷ್ಟು ಜನರಿಗೆ ಕೊರೊನಾ ಸೋಂಕು ಹರಡಿಸಬಹುದು. ಹೀಗಾಗಿ ಬೆಂಗಳೂರಿಗರಲ್ಲಿ […]

Ayesha Banu

| Edited By:

Jul 28, 2020 | 12:39 AM

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಸೋಂಕು ಎಲ್ಲೆಡೆ ಹರಡುತ್ತಿದೆ. ರಾಜಧಾನಿಯಲ್ಲೇ ಅತಿ ಹೆಚ್ಚು ಜನ ಸೋಂಕಿಗೆ ಒಳಗಾಗುತ್ತಿದ್ದಾರೆ. ಇದರ ಜೊತೆಗೆ ಅನೇಕ ಸೋಂಕಿತರು ಆಸ್ಪತ್ರೆಗಳಿಂದ ಪರಾರಿಯಾಗುತ್ತಿದ್ದಾರೆ.

ನಗರದಲ್ಲಿ 3 ಸಾವಿರ ಕೊರೊನಾ ಸೋಂಕಿತರು ನಾಪತ್ತೆಯಾಗಿದ್ದಾರೆ ಎಂಬ ಸುದ್ದಿ ಹರಿದಾಡಿದೆ. ಹಾಗಿದ್ರೆ ಪಾಸಿಟಿವ್ ಬಂದವರು ಪತ್ತೆಯಾಗದಿರುವುದು ನಿಜವೇ? ಎಂದು ಮಾಧ್ಯಮಗಳ ವರದಿ ಆಧರಿಸಿ ಹೈಕೋರ್ಟ್ ಬಿಬಿಎಂಪಿಗೆ ಪ್ರಶ್ನಿಸಿದೆ.

ಸುದ್ದಿ‌‌ ನಿಜವಾದರೆ ಮತ್ತಷ್ಟು ಜನರಿಗೆ ಕೊರೊನಾ ಹರಡಬಹುದು. 3,000 ಸೋಂಕಿತರು ಮತ್ತಷ್ಟು ಜನರಿಗೆ ಕೊರೊನಾ ಸೋಂಕು ಹರಡಿಸಬಹುದು. ಹೀಗಾಗಿ ಬೆಂಗಳೂರಿಗರಲ್ಲಿ ಆತಂಕ ಹೆಚ್ಚಾಗಿದೆ. ನಾಪತ್ತೆಯಾದ ಸೋಂಕಿತರ ಬಗ್ಗೆ ಪ್ರತಿಕ್ರಿಯಿಸಲು ಬಿಬಿಎಂಪಿಗೆ ಹೈಕೋರ್ಟ್ ಸೂಚಿಸಿದೆ.

Follow us on

Related Stories

Most Read Stories

Click on your DTH Provider to Add TV9 Kannada