
ಬೆಂಗಳೂರು: ಬೆಂಗಳೂರಿನಲ್ಲಿ ಕೊರೊನಾ ದಿಂದ ದಿನೇ ದಿನೇ ಸಾವಿನ ಸಂಖ್ಯೆ ಹೆಚ್ಚುತಿದೆ. ಇದೇ ರೀತಿ ಮಲ್ಲೇಶ್ವರಮ್‌ನಲ್ಲಿರುವ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಹೀಗಾಗಿ ಅಲ್ಲಿರುವ ಮಹಿಳಾ ವಾರ್ಡನಲ್ಲಿ ಕೆಲ ರೋಗಿಗಳು ಜರ್ಜರಿತರಾಗಿದ್ದಾರೆ. ಹೀಗಾಗಿ ಅವರನ್ನು ಕೌನ್ಸಿಲಿಂಗ್ ಮಾಡುತ್ತಿರುವ ಸಿಬ್ಬಂದಿ ಹಾಡು ನೃತ್ಯಗಳ ಮೂಲಕ ಅವರಲ್ಲಿ ಮನೋಲ್ಲಾಸ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಹೌದು ಕೊರೋನಾ ಸೋಂಕಿತರು ಸೋಂಕಿನ ತೀವ್ರತೆಗಿಂತ ಹೆಚ್ಚಾಗಿ, ಸೋಂಕು ಬಂತು ಎಂಬ ಮಾನಸಿಕ ಭಯದಿಂದಲೇ ತೀವ್ರವಾಗಿ ಕುಸಿಯುತ್ತಿದ್ದಾರೆ. ಈ ಕಾರಣಕ್ಕೆ ಕೆಸಿ ಜನರಲ್ ಆಸ್ಪತ್ರೆಯ ನರ್ಸ್‌ಗಳು, ವಾರ್ಡ್ ಇನ್ ಚಾರ್ಜ್‌ಗಳು ರೋಗಿಗಳಲ್ಲಿ ಮಾನಸಿಕ ಉಲ್ಲಾಸ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ.