ICC ಟೆಸ್ಟ್ ರ್ಯಾಂಕಿಂಗ್: ಅಗ್ರ ಹತ್ತರಲ್ಲಿ ಸ್ಥಾನ ಪಡೆದ ಟೀಂ ಇಂಡಿಯಾದ 3 ಬ್ಯಾಟ್ಸ್ಮನ್ಗಳು.. ನಂ. 1 ಯಾರು ಗೊತ್ತಾ?
ವಿರಾಟ್ ಕೊಹ್ಲಿ 862 ಅಂಕಗಳೊಂದಿಗೆ 4ನೇ ಸ್ಥಾನ ಪಡೆದಿದ್ದರೆ, ಚೇತೇಶ್ವರ್ ಪೂಜಾರ 760 ಅಂಕಗಳೊಂದಿಗೆ ಆರನೇ ಸ್ಥಾನ ಪಡೆದುಕೊಂಡಿದ್ದಾರೆ.
ದುಬೈ: ಐಸಿಸಿ ಟೆಸ್ಟ್ ರ್ಯಾಂಕಿಂಗ್ ಬಿಡುಗಡೆ ಮಾಡಿದ್ದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಾಲ್ಕನೇ ಸ್ಥಾನದಲ್ಲಿದ್ದರೆ, ಚೇತೇಶ್ವರ ಪೂಜಾರ ಆರನೇ ಸ್ಥಾನ ಪಡೆದುಕೊಂಡಿದ್ದಾರೆ.
ವಿರಾಟ್ ಕೊಹ್ಲಿ 862 ಅಂಕಗಳೊಂದಿಗೆ 4ನೇ ಸ್ಥಾನ ಪಡೆದಿದ್ದರೆ, ಚೇತೇಶ್ವರ ಪೂಜಾರ 760 ಅಂಕಗಳೊಂದಿಗೆ ಆರನೇ ಸ್ಥಾನ ಪಡೆದುಕೊಂಡಿದ್ದಾರೆ. ಇವರನ್ನು ಹೊರತುಪಡಿಸಿ ಟೆಸ್ಟ್ ಉಪನಾಯಕ ಅಜಿಂಕ್ಯ ರಹಾನೆ 748 ಅಂಕದೊಂದಿಗೆ 8ನೇ ಸ್ಥಾನ ಪಡೆದು ಅಗ್ರ -10 ಆಟಗಾರರ ಪಟ್ಟಿಯಲ್ಲಿದ್ದಾರೆ.
ಈ ಮೊದಲು ಏಳನೇ ಸ್ಥಾನದಲ್ಲಿದ್ದ ಪೂಜಾರ ಆರನೇ ಸ್ಥಾನಕ್ಕೆ ಏರಿದರೆ, ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಮತ್ತು ಸ್ಟಾರ್ ಓಪನರ್ ರೋಹಿತ್ ಶರ್ಮಾ ಕ್ರಮವಾಗಿ 13 ಮತ್ತು 18 ನೇ ಸ್ಥಾನದಲ್ಲಿ ಸ್ಥಾನ ಪಡೆದಿದ್ದಾರೆ.
ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ (919 ಅಂಕ) ಬ್ಯಾಟಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ (891 ಅಂಕ) ಮತ್ತು ಮಾರ್ನಸ್ ಲಾಬುಸ್ಚಾಗ್ನೆ (878 ಅಂಕ) ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ (823 ಅಂಕ) ಐದನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಬೌಲರ್‌ಗಳಲ್ಲಿ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (760 ಅಂಕ) ಮತ್ತು ವೇಗಿ ಜಸ್ಪ್ರಿತ್ ಬುಮ್ರಾ (757 ಅಂಕ) ಕ್ರಮವಾಗಿ ತಮ್ಮ ಎಂಟನೇ ಮತ್ತು ಒಂಬತ್ತನೇ ಸ್ಥಾನಗಳನ್ನು ಉಳಿಸಿಕೊಂಡಿದ್ದಾರೆ. ಪ್ಯಾಟ್ ಕಮ್ಮಿನ್ಸ್ (908 ಅಂಕ) ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ (839 ಅಂಕ) ಮತ್ತು ನ್ಯೂಜಿಲೆಂಡ್‌ನ ನೀಲ್ ವ್ಯಾಗ್ನರ್ (835 ಅಂಕ) ನಂತರದ ಸ್ಥಾನದಲ್ಲಿದ್ದಾರೆ.
ಆಲ್ ರೌಂಡರ್ ಪಟ್ಟಿಯಲ್ಲಿ ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್ (427 ಅಂಕ) ಮೊದಲ ಸ್ಥಾನ ಪಡೆದಿದ್ದರೆ, ರವೀಂದ್ರ ಜಡೇಜಾ (419 ಅಂಕ) ಮತ್ತು ಅಶ್ವಿನ್ (281 ಅಂಕ) ಕ್ರಮವಾಗಿ ಮೂರನೇ ಮತ್ತು ಆರನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ಐಸಿಸಿ ಟೆಸ್ಟ್ ಱಂಕಿಂಗ್: ಕೊಹ್ಲಿಯನ್ನು ಹಿಂದಿಕ್ಕಿ ಎರಡನೆ ಸ್ಥಾನಕ್ಕೆ ಜಿಗಿದ ಸ್ಟೀವ್ ಸ್ಮಿತ್