KSP PSI Recruitment 2021: ಬೆಂಗಳೂರಿಗೆ ಬೇಕಾಗಿದ್ದಾರೆ 545 ಪೊಲೀಸ್​ ಸಬ್​ ಇನ್​​ಸ್ಪೆಕ್ಟರ್​ಗಳು; ತಕ್ಷಣ ಅರ್ಜಿ ಹಾಕಿ

psicivilnhk20.ksp-online.in ವೆಬ್​ಸೈಟ್​ಗೆ ಭೇಟಿ ನೀಡಿ ನೀವು ಅರ್ಜಿ ಸಲ್ಲಿಕೆ ಮಾಡಬಹುದು. ಅರ್ಹ ಅಭ್ಯರ್ಥಿಗಳು ಇದರಲ್ಲಿ ಆನ್​ಲೈನ್​ ಮೂಲಕ ಮಾತ್ರ ಅರ್ಜಿ ಸಲ್ಲಿಕೆ ಮಾಡಬಹುದು..

KSP PSI Recruitment 2021: ಬೆಂಗಳೂರಿಗೆ ಬೇಕಾಗಿದ್ದಾರೆ 545 ಪೊಲೀಸ್​ ಸಬ್​ ಇನ್​​ಸ್ಪೆಕ್ಟರ್​ಗಳು; ತಕ್ಷಣ ಅರ್ಜಿ ಹಾಕಿ
ಸಾಂದರ್ಭಿಕ ಚಿತ್ರ
Updated By: ಸಾಧು ಶ್ರೀನಾಥ್​

Updated on: Feb 06, 2021 | 6:05 PM

ಕರ್ನಾಟಕ ರಾಜ್ಯ ಪೊಲೀಸ್​ ಇಲಾಖೆ ಅಡಿಯಲ್ಲಿ ಖಾಲಿ ಇರುವ 545 ಪೊಲೀಸ್​ ಸಬ್​ ಇನ್​ಸ್ಪೆಕ್ಟರ್​ ಸಿವಿಲ್​ ಹುದ್ದೆಗೆ ಕರ್ನಾಟಕ ರಾಜ್ಯ ಪೊಲೀಸ್​ (KSP) ಅರ್ಜಿ ಆಹ್ವಾನ ಮಾಡಿದೆ. ಈಗಾಗಲೇ ಅರ್ಜಿ ಆಹ್ವಾನ ಪ್ರಕ್ರಿಯೆ ಆರಂಭವಾಗಿದ್ದು, ಫೆಬ್ರವರಿ 24 ಕೊನೆಯ ದಿನಾಂಕವಾಗಿದೆ.

ಸರ್ಕಾರ ಸೂಚಿಸಿದ ನಿಯಮದಂತೆ ಖಾಲಿ ಇರುವ 545 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗುತ್ತಿದೆ. psicivilnhk20.ksp-online.in ವೆಬ್​ಸೈಟ್​ಗೆ ಭೇಟಿ ನೀಡಿ ನೀವು ಅರ್ಜಿ ಸಲ್ಲಿಕೆ ಮಾಡಬಹುದು. ಅರ್ಹ ಅಭ್ಯರ್ಥಿಗಳು ಇದರಲ್ಲಿ ಆನ್​ಲೈನ್​ ಮೂಲಕ ಮಾತ್ರ ಅರ್ಜಿ ಸಲ್ಲಿಕೆ ಮಾಡಬಹುದು..

ಅರ್ಜಿ ಸಲ್ಲಿಸುವ ಬಗ್ಗೆ ಇಲ್ಲಿದೆ ವಿವರ…
ನೋಟಿಫಿಕೇಷನ್​ ದಿನಾಂಕ: ಜನವರಿ 23, 2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಫೆಬ್ರವರಿ 22, 2021
ನಗರ: ಬೆಂಗಳೂರು
ಆರ್ಗನೈಸೇಷನ್​: ಕರ್ನಾಟಕ ಪೊಲೀಸ್
ಶಿಕ್ಷಣ ಅರ್ಹತೆ: ಪದವೀಧರರಾಗಿರಬೇಕು
ಪಿಎಸ್​ಐ (ಸಿವಿಲ್)​ (ಉಳಿದ ಪ್ರದೇಶ): 438 ಹುದ್ದೆ
ಪಿಎಸ್​ಐ (ಸಿವಿಲ್): (ಕಲ್ಯಾಣ ಕರ್ನಾಟಕ ಪ್ರದೇಶ) 107 ಹುದ್ದೆ
ವಯಸ್ಸಿನ ಮಿತಿ:
GM: 21-30 Years
SC, ST, CAT-01, 2A, 2B, 3A & 3B: 21-32 Years
ಸೇವೆಯಲ್ಲಿರುವ ಅಭ್ಯರ್ಥಿಗೆ 35 ವರ್ಷ

ಅರ್ಜಿ ಶುಲ್ಕ:

GM ಮತ್ತು OBC: 500 ರೂಪಾಯಿ, ಇತರರಿಗೆ 250 ರೂಪಾಯಿ.

ಮೈಸೂರಲ್ಲೊಬ್ಬ ಮಾದರಿ ರೈತ.. ಸರ್ಕಾರಿ ಉದ್ಯೋಗ ಬಿಟ್ಟು ಕೃಷಿಯಲ್ಲೇ ಸಾಧನೆಗೈದ ಅನ್ನದಾತ