AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರಲ್ಲೊಬ್ಬ ಮಾದರಿ ರೈತ.. ಸರ್ಕಾರಿ ಉದ್ಯೋಗ ಬಿಟ್ಟು ಕೃಷಿಯಲ್ಲೇ ಸಾಧನೆಗೈದ ಅನ್ನದಾತ

Man Quits Govt Job To Do Farming ಅವರು ವಿದೇಶದಲ್ಲಿ ವ್ಯಾಸಗ ಮಾಡಿ ಬಂದಿದ್ದಾರೆ. ಅಷ್ಟೆ ಯಾಕೇ ಪಕ್ಕದ‌ ಆಂಧ್ರ ಸರ್ಕಾರದಲ್ಲೂ ಉನ್ನತ ಹುದ್ದೆಯಲ್ಲಿ ಕೆಲಸ ಮಾಡಿದ್ದವರು.‌ ಆದ್ರೆ ಯಾಕೋ ಹುದ್ದೆ ಇಷ್ಟವಾಗದೆ, ಕೃಷಿ ಮಾಡಬೇಕೆಂಬ ಉದ್ದೇಶದಿಂದ ಮೈಸೂರಿಗೆ ಬಂದು ನೆಲೆಸಿ ಈಗ ಮಾದರಿ ರೈತರಾಗಿದ್ದಾರೆ.

ಮೈಸೂರಲ್ಲೊಬ್ಬ ಮಾದರಿ ರೈತ.. ಸರ್ಕಾರಿ ಉದ್ಯೋಗ ಬಿಟ್ಟು ಕೃಷಿಯಲ್ಲೇ ಸಾಧನೆಗೈದ ಅನ್ನದಾತ
ಆಯೇಷಾ ಬಾನು
|

Updated on:Feb 04, 2021 | 8:46 AM

Share

ಮೈಸೂರು: ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿ‌ನ ಪಡುವಲಕೋಟೆ ಕಾವಲ್ ಗ್ರಾಮದಲ್ಲಿ ರಾಮಕೃಷ್ಣ ಎಂಬ ತೋಟದ ಮಾಲೀಕ ಕೃಷಿ ಮಾಡಿ ಮಾದರಿ ರೈತರಾಗಿದ್ದಾರೆ. ಮೂಲತಃ ಆಂಧ್ರದವರಾದ ರಾಮಕೃಷ್ಣಗೆ ಕೃಷಿಯಲ್ಲಿ ತುಂಬಾ ಆಸಕ್ತಿ.

ಬಿಎಸ್ಸಿ ಅಗ್ರಿಕಲ್ಚರ್ ಮಾಡಿದ್ದ ಇವರು ಆಸ್ಟ್ರೇಲಿಯಾದ ಸಿಡ್ನಿ ಯೂನಿರ್ವಸಿಟಿ ಆಫ್ ವೆಸ್ಟ್ರನ್​ನಲ್ಲಿ 2 ವರ್ಷ ಮಾಸ್ಟರ್ ಆಫ್ ಹಾರ್ಟಿಕಲ್ಚರ್ ಪೂರೈಸಿದ್ದಾರೆ. ಬಳಿಕ ವಿದೇಶದ ಕೆಲಸ ಬಿಟ್ಟು ದೇಶದಲ್ಲಿ ಸೇವೆಯನ್ನ ಸಲ್ಲಿಸಿದ್ದರು. ಆಂಧ್ರಪ್ರದೇಶದಲ್ಲಿ ತೋಟಗಾರಿಕೆ ಇಲಾಖೆಯಲ್ಲಿ ಉಪನಿರ್ದೇಶಕರಾಗಿ‌‌ ಕೆಲಸ‌ ನಿರ್ವಹಿಸಿದ್ದಾರೆ. ಆದ್ರೆ ಒಂದೇ ವರ್ಷಕ್ಕೆ ಕೆಲಸ ಬಿಟ್ಟು ಮತ್ತೆ ಬಂದಿದ್ದು ಕೃಷಿ ಕಡೆಗೆ. ಎಲ್ಲೆಡೆ ಸುತ್ತಾಡಿ ಕಳೆದ 15 ವರ್ಷಗಳಿಂದ ಇವರು ಮೈಸೂರಿಗೆ ಬಂದು ನೆಲೆಸಿದ್ದಾರೆ. ಸುಮಾರು 40 ಎಕರೆ ಜಾಗದಲ್ಲಿ ಕೃಷಿ ಆರಂಭಿಸಿ ಮಾದರಿ ರೈತರಾಗಿದ್ದಾರೆ. ತೈವಾನ್ ಪಿಂಕ್ ಸೀಬೆ, ಪರ್ಷಿಯನ್ ಲೈಮ್ ಹೆಸರಿನ ಬೀಜ ರಹಿತ ನಿಂಬೆ ಮತ್ತು ಆಸ್ಟ್ರೇಲಿಯನ್ ಗೋಲ್ಡನ್ ಸೀತಾಫಲ ಬೆಳೆಯುತ್ತಿದ್ದಾರೆ. 15 ಎಕರೆ ಪ್ರದೇಶದಲ್ಲಿ ತೈವಾನ್ ಸೀಬೆ, ಉಳಿದ 25 ಎಕ್ಕೆರೆಯಲ್ಲಿ ಸೀತಾಫಲ, ನಿಂಬೆ ಬೆಳೆಯನ್ನು ಬೆಳೆಯುತ್ತಿದ್ದಾರೆ. ರಾಮಕೃಷ್ಣ ಪ್ರಕಾರ 5 ಎಕರೆಯಲ್ಲಿ ಕೃಷಿ ಮಾಡಿದ್ರೆ ವರ್ಷಕ್ಕೆ 15 ಲಕ್ಷದವರೆಗೂ ಆದಾಯ ಗಳಿಸುವುದು ಸಾಧ್ಯವಿದೆಯಂತೆ.

ಒಂದು ಸರ್ಕಾರಿ ಕೆಲಸ ಸಿಕ್ಕರೆ ಸಾಕು ಎನ್ನುವವರ ನಡುವೆ ಇದ್ದ ಸರ್ಕಾರಿ‌ ಕೆಲಸ ಬಿಟ್ಟು ಕೃಷಿ ಮಾಡುತ್ತಿರುವ ಇವರ ಕಾರ್ಯ ನಿಜಕ್ಕೂ ಶ್ಲಾಘನೀಯ.

ಒಂದೇ ಕಾಲಿದ್ರೂ ಭೂತಾಯಿ ಸೇವೆ ನಿಂತಿಲ್ಲ, ಉಡುಪಿಯಲ್ಲೊಬ್ಬ ಮಾದರಿ ರೈತ

Published On - 7:05 am, Thu, 4 February 21

ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್