ಸಿಲಿಕಾನ್ ಸಿಟಿ ಬೆಂಗಳೂರಿಗೂ ಶುರುವಾಯ್ತು ಚಿರತೆ ದಾಳಿಯ ಭೀತಿ
ಗಿರಿನಗರದ ವೀರಭದ್ರ ನಗರದಲ್ಲಿ ಚಿರತೆಯ ದಾಳಿಗೆ 6 ಮೇಕೆ ಹಾಗೂ 11 ಕುರಿಗಳು ಬಲಿಯಾಗಿವೆ.

ಚಿರತೆ (ಸಂಗ್ರಹ ಚಿತ್ರ)
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿಗೂ ಶುರುವಾಗಿದೆ ಚಿರತೆ ದಾಳಿಯ ಭೀತಿ. ಗಿರಿನಗರದ ವೀರಭದ್ರ ನಗರದಲ್ಲಿ ಕುರಿ/ಮೇಕೆ ಸಾಕಾಣಿಕೆ ಶೆಡ್ ಮೇಲೆ ಚಿರತೆ ದಾಳಿ ನಡೆಸಿದೆ. ಚಿರತೆಯ ದಾಳಿಗೆ 6 ಮೇಕೆ ಹಾಗೂ 11 ಕುರಿಗಳು ಬಲಿಯಾಗಿವೆ.
ಪಟೇಲ್ ಅನಂತ್ ಸ್ವಾಮಿ ಕುರಿ ಸಾಕಾಣಿಕೆಗಾಗಿ ಶೇಡ್ ನಿರ್ಮಾಣ ಮಾಡಿದ್ದರು. ನಿನ್ನೆ ತಡರಾತ್ರಿಯಲ್ಲಿ ಚಿರತೆ ದಾಳಿ ನಡೆಸಿದೆ. ವೀರಭದ್ರ ನಗರದ ಸುತ್ತಮುತ್ತಲಿನ ಜನ ಆತಂಕಕ್ಕೊಳಗಾಗಿದ್ದಾರೆ.
ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ದಾಳಿಯ ಬಗ್ಗೆ ಪೊಲೀಸರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ: ದಾವಣಗೆರೆ: ಕುರಿದೊಡ್ಡಿಗೆ ನುಗ್ಗಿದ ಚಿರತೆ ದಾಳಿಯಿಂದ 30 ಕುರಿಗಳ ಸಾವು
Published On - 12:49 pm, Sun, 6 December 20



