ಚಿರತೆ ದಾಳಿ: ರೈತನಿಗೆ ತೀವ್ರ ಗಾಯ
ಕಳೆದ ಹದಿನೈದು ದಿನಗಳಿಂದ ಚಿರತೆಗಳು ಕಾಡಿನಿಂದ ನಾಡಿಗೆ ಬರುತ್ತಿವೆ. ಜಮೀನಿನಲ್ಲಿ ಮೇಯುತ್ತಿದ್ದ ಹಸುವಿನ ಮೇಲೆ ದಾಳಿ ಮಾಡಿದ್ದು, ತನ್ನ ಹಸುಗಳನ್ನು ರಕ್ಷಿಸಲು ಮುಂದಾದ ಗ್ರಾಮದ ರೈತರಾದ ಬಸವಣ್ಣನವರ ಮೇಲೆ ದಾಳಿ ಮಾಡಿದೆ.
ಮೈಸೂರು: ರೈತರೊಬ್ಬರ ಮೇಲೆ ಚಿರತೆ ದಾಳಿ ಮಾಡಿದ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕೋಣನೂರು ಗ್ರಾಮದಲ್ಲಿ ನಡೆದಿದೆ.
ಕಳೆದ ಹದಿನೈದು ದಿನಗಳಿಂದ ಕಾಡಿನಿಂದ ನಾಡಿಗೆ ಬರುತ್ತಿರುವ ಚಿರತೆಗಳು ಜಮೀನಿನಲ್ಲಿ ಮೇಯುತ್ತಿದ್ದ ಹಸುವಿನ ಮೇಲೆ ದಾಳಿ ಮಾಡಿದ್ದು, ತನ್ನ ಹಸುಗಳನ್ನು ರಕ್ಷಿಸಲು ಮುಂದಾದಾಗ ಗ್ರಾಮದ ರೈತರಾದ ಬಸವಣ್ಣನವರ ಮೇಲೆ ಚಿರತೆ ದಾಳಿ ಮಾಡಿದೆ. ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಆಗ್ರಹಿಸಿದ್ದು, ಗ್ರಾಮದ ಜಮೀನಿನಲ್ಲಿ ಬೋನು ಇಡುವಂತೆ ಮನವಿ ಮಾಡಿಕೊಳ್ಳಲಾಗಿದೆ.
ಮಾಗಡಿ: ಜಗುಲಿ ಮೇಲೆ ಮಲಗಿದ್ದ ವೃದ್ಧೆಯನ್ನು ಹೊತ್ತೊಯ್ದ ಚಿರತೆ!