ಕಾಡು ಹಂದಿ ಜೊತೆ ಫೈಟ್: ಚಿರತೆ ಮರಿ ಸಾವು
ತುಮಕೂರು: ಚಿರತೆ ಮರಿಯೊಂದು ಕಾಡು ಹಂದಿ ಜೊತೆ ಫೈಟ್ ಮಾಡಿ ಮೃತಪಟ್ಟಿರುವ ಘಟನೆ ತಿಪಟೂರು ತಾಲೂಕಿನ ಶಿವರಾಮನಹಳ್ಳಿ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಮೂರು ವರ್ಷದ ಪುಟ್ಟ ಹೆಣ್ಣು ಚಿರತೆ ಸಾಹಸದಿಂದ ಕಾಡು ಹಂದಿ ಜೊತೆಗೆ ಸೆಣೆಸಾಡಿ ತನ್ನ ಶಕ್ತಿ, ಆತ್ಮಬಲ ಪ್ರದರ್ಶಿಸಿ ಮೃತಪಟ್ಟಿದೆ. ಇದೇ ವೇಳೆ, ಮತ್ತೂ ಒಂದು ಪ್ರಾಣಿಯ ಜತೆಯೂ ಮರಿ ಚಿರತೆ ಕಾದಾಡಿದೆ ಎಂದು ಅರಣ್ಯ ಇಲಾಖೆ ಅಧಿಕಾಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಸದ್ಯ ಸ್ಥಳಕ್ಕೆ ತಿಪಟೂರು ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ […]
ತುಮಕೂರು: ಚಿರತೆ ಮರಿಯೊಂದು ಕಾಡು ಹಂದಿ ಜೊತೆ ಫೈಟ್ ಮಾಡಿ ಮೃತಪಟ್ಟಿರುವ ಘಟನೆ ತಿಪಟೂರು ತಾಲೂಕಿನ ಶಿವರಾಮನಹಳ್ಳಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಮೂರು ವರ್ಷದ ಪುಟ್ಟ ಹೆಣ್ಣು ಚಿರತೆ ಸಾಹಸದಿಂದ ಕಾಡು ಹಂದಿ ಜೊತೆಗೆ ಸೆಣೆಸಾಡಿ ತನ್ನ ಶಕ್ತಿ, ಆತ್ಮಬಲ ಪ್ರದರ್ಶಿಸಿ ಮೃತಪಟ್ಟಿದೆ. ಇದೇ ವೇಳೆ, ಮತ್ತೂ ಒಂದು ಪ್ರಾಣಿಯ ಜತೆಯೂ ಮರಿ ಚಿರತೆ ಕಾದಾಡಿದೆ ಎಂದು ಅರಣ್ಯ ಇಲಾಖೆ ಅಧಿಕಾಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಸದ್ಯ ಸ್ಥಳಕ್ಕೆ ತಿಪಟೂರು ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.