ಮಂಡ್ಯ ಯಾಕೆ ಹಿಂಗೆ ಆಗ್ತಿದೆ? ತಾಲೂಕು ಅಧಿಕಾರಿಗೂ ಕೊರೊನಾ ಅಟ್ಯಾಕ್

|

Updated on: May 21, 2020 | 4:21 PM

ಮಂಡ್ಯ: ಸಕ್ಕರೆ ನಾಡು ಮಂಡ್ಯಕ್ಕೆ ಕೊರೊನಾ ಬೆನ್ನು ಬಿಡದ ಬೇತಾಳದಂತೆ ಕಾಡುತ್ತಿದೆ. ಇಂದು ಹೊಸದಾಗಿ 15ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ಸೋಂಕಿತರ ಸಂಖ್ಯೆ 183ಕ್ಕೆ ಏರಿಕೆಯಾಗಿದೆ. ಜೊತೆಗೆ ಕಾರ್ಯನಿರತ ಮಳವಳ್ಳಿಯ ತಾಲೂಕು ಮಟ್ಟದ ಅಧಿಕಾರಿಗೆ ಪಾಸಿಟಿವ್ ಬಂದಿದೆ. 31 ವರ್ಷದ ಇವರನ್ನು P-1471 ಎಂದು ಗುರುತಿಸಲಾಗಿದೆ. ಕೊರೊನಾ ದೃಢಪಟ್ಟ ನಂತರ ಅಧಿಕಾರಿ ವಲಯದಲ್ಲಿ ಆತಂಕ ಹೆಚ್ಚಾಗಿದೆ. ಮಳವಳ್ಳಿಯ ಸೀಲ್​ಡೌನ್ ಏರಿಯಾದಲ್ಲಿ ಕಾರ್ಯನಿರ್ವಹಿಸುವ ವೇಳೆ ಸೋಂಕು ತಗುಲಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಮಂಡ್ಯ ಯಾಕೆ ಹಿಂಗೆ ಆಗ್ತಿದೆ? ತಾಲೂಕು ಅಧಿಕಾರಿಗೂ ಕೊರೊನಾ ಅಟ್ಯಾಕ್
Follow us on

ಮಂಡ್ಯ: ಸಕ್ಕರೆ ನಾಡು ಮಂಡ್ಯಕ್ಕೆ ಕೊರೊನಾ ಬೆನ್ನು ಬಿಡದ ಬೇತಾಳದಂತೆ ಕಾಡುತ್ತಿದೆ. ಇಂದು ಹೊಸದಾಗಿ 15ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ಸೋಂಕಿತರ ಸಂಖ್ಯೆ 183ಕ್ಕೆ ಏರಿಕೆಯಾಗಿದೆ.

ಜೊತೆಗೆ ಕಾರ್ಯನಿರತ ಮಳವಳ್ಳಿಯ ತಾಲೂಕು ಮಟ್ಟದ ಅಧಿಕಾರಿಗೆ ಪಾಸಿಟಿವ್ ಬಂದಿದೆ. 31 ವರ್ಷದ ಇವರನ್ನು P-1471 ಎಂದು ಗುರುತಿಸಲಾಗಿದೆ. ಕೊರೊನಾ ದೃಢಪಟ್ಟ ನಂತರ ಅಧಿಕಾರಿ ವಲಯದಲ್ಲಿ ಆತಂಕ ಹೆಚ್ಚಾಗಿದೆ. ಮಳವಳ್ಳಿಯ ಸೀಲ್​ಡೌನ್ ಏರಿಯಾದಲ್ಲಿ ಕಾರ್ಯನಿರ್ವಹಿಸುವ ವೇಳೆ ಸೋಂಕು ತಗುಲಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

Published On - 1:52 pm, Thu, 21 May 20