AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mask ಹಾಕದವರನ್ನು ಕೆಕ್ಕರಿಸಿಕೊಂಡು ನೋಡದಿರಿ! ಯಾಕೆ ಗೊತ್ತಾ?

ಕೊರೊನಾ ಕಾಲದಲ್ಲಿ ಮಾಸ್ಕ್ ಧರಿಸಿದವನೇ ಜಾಣ. ಉಳಿದವರೆಲ್ಲ ಮಹಾಮಾರಿಗೆ ಮುಕ್ತ ಆಹ್ವಾನ ನೀಡದಂತೆ ಎಂಬಂತಾಗಿದೆ. ಹಾಗಾಗಿ ಮಾಸ್ಕ್ ಹಾಕದ, ಸಾರ್ವಜನಿಕ ಸ್ಥಳಗಳಲ್ಲಿ ಅಡ್ಡಾಡುವವರನ್ನು ಕಂಡರೆ ಉಳಿದವರು ಕೆಕ್ಕರಿಸಿಕೊಂಡು ನೋಡುವುದು ಸಾಮಾನ್ಯಾಗಿದೆ. ಈ ಮಧ್ಯೆ ಕೊರೊನಾಗೆ ಮೂಗುದಾರ ಹಾಕುವ ಭರದಲ್ಲಿ ಸರ್ಕಾರಗಳೂ ಸಹ ಅಂತಹವರನ್ನು ಹಿಡಿದು, ದಂಡ ಸಹ ವಿಧಿಸಿರುವ ಅನೇಕ ಉದಾಹರಣೆಗಳು ನಮ್ಮ ಮುಂದೆ ಇವೆ. ಆದ್ರೆ ಇನ್ಮುಂದೆ ಹಾಗೆ ಮಾಡುವುದು ಕ್ಷೇಮಕರವಲ್ಲ ಎಂಬುದು ರುಜುವಾತಾಗತೊಡಗಿದೆ. ಯಾಕೆ ಮತ್ತು ಹೇಗೆ ಗೊತ್ತಾ? ಮೊದಲು, ಇಲ್ಲೊಂದಷ್ಟು ಉದಾಹರಣೆಗಳಿವೆ.. ಗಮನಿಸಿ: […]

Mask ಹಾಕದವರನ್ನು ಕೆಕ್ಕರಿಸಿಕೊಂಡು ನೋಡದಿರಿ! ಯಾಕೆ ಗೊತ್ತಾ?
ಬಳಸಿದ ಮುಖಗವಸು
ಸಾಧು ಶ್ರೀನಾಥ್​
|

Updated on:May 21, 2020 | 1:28 PM

Share

ಕೊರೊನಾ ಕಾಲದಲ್ಲಿ ಮಾಸ್ಕ್ ಧರಿಸಿದವನೇ ಜಾಣ. ಉಳಿದವರೆಲ್ಲ ಮಹಾಮಾರಿಗೆ ಮುಕ್ತ ಆಹ್ವಾನ ನೀಡದಂತೆ ಎಂಬಂತಾಗಿದೆ. ಹಾಗಾಗಿ ಮಾಸ್ಕ್ ಹಾಕದ, ಸಾರ್ವಜನಿಕ ಸ್ಥಳಗಳಲ್ಲಿ ಅಡ್ಡಾಡುವವರನ್ನು ಕಂಡರೆ ಉಳಿದವರು ಕೆಕ್ಕರಿಸಿಕೊಂಡು ನೋಡುವುದು ಸಾಮಾನ್ಯಾಗಿದೆ. ಈ ಮಧ್ಯೆ ಕೊರೊನಾಗೆ ಮೂಗುದಾರ ಹಾಕುವ ಭರದಲ್ಲಿ ಸರ್ಕಾರಗಳೂ ಸಹ ಅಂತಹವರನ್ನು ಹಿಡಿದು, ದಂಡ ಸಹ ವಿಧಿಸಿರುವ ಅನೇಕ ಉದಾಹರಣೆಗಳು ನಮ್ಮ ಮುಂದೆ ಇವೆ. ಆದ್ರೆ ಇನ್ಮುಂದೆ ಹಾಗೆ ಮಾಡುವುದು ಕ್ಷೇಮಕರವಲ್ಲ ಎಂಬುದು ರುಜುವಾತಾಗತೊಡಗಿದೆ. ಯಾಕೆ ಮತ್ತು ಹೇಗೆ ಗೊತ್ತಾ?

ಮೊದಲು, ಇಲ್ಲೊಂದಷ್ಟು ಉದಾಹರಣೆಗಳಿವೆ.. ಗಮನಿಸಿ: 1) ಜಿಮ್ ಶಾಲೆಯಲ್ಲಿ ಮಾಸ್ಕ್ ಧರಿಸಿದ್ದ ಇಬ್ಬರು ಬಾಲಕರು ಕುಸಿದುಬಿದ್ದು ಸಾವು 2) ವೂಹಾನ್​ನಲ್ಲಿ ಜಾಗಿಂಗ್​ ಮಾಡ್ತಾ ನಾಲ್ಕಾರು ಕಿಮೀ ಓಡಿದ ವ್ಯಕ್ತಿ ಶ್ವಾಸಕೋಶ ಢಮಾರ್ 3) ಮಾಸ್ಕ್​ ಧರಿಸಿ, ಎಸಿ ಕಾರು ಚಲಾಯಿಸುತ್ತಿದ್ದವ ಪ್ರಜ್ಞೆ ಕಳೆದುಕೊಂಡು ಮರಕ್ಕೆ ಡಿಕ್ಕಿ ಇಂತಹ ಉದಾಹರಣೆಗಳು ಹಲವಾರು ಇವೆ. ಇದರ ತಾತ್ಪರ್ಯ ಇಷ್ಟೇ.. ವ್ಯಾಯಾಮ ಮಾಡುವಾಗ, ದೈಹಿಕ ಕಸರತ್ತು/ ಕೆಲಸ ಮಾಡುವಾಗ, ಮಲಗಿರುವಾಗ ಮಾಸ್ಕ್ ಹಾಕಿಕೊಳ್ಳುವುದು ಕ್ಷೇಮವಲ್ಲ!

ಮಾಸ್ ಇದ್ದ ಕಡೆ ಮಾಸ್ಕ್ ಹಾಕಿರಲೇಬೇಕು, ಆದ್ರೆ..  ಹೌದು, ಇಂತಹ ಪ್ರಕರಣಗಳನ್ನು ಗಮನಿಸಿರುವ ವೈದ್ಯ ಲೋಕ ಈಗ ಒಂದಷ್ಟು ಸೂಕ್ತ ಸಲಹೆಗಳನ್ನು ನೀಡಿದೆ. ಸಾರ್ವಜನಿಕವಾಗಿ ಖರೀದಿ ಸ್ಥಳಗಳಲ್ಲಿ ಜನ ಮಾಸ್ಕ್ ಧರಿಸುವುದು ಒಳಿತು. ಗುಂಪು ಸೇರುವ ಕಡೆ ಸಾಮಾಜಿಕ ಅಂತರ ಪಾಲಿಸುವುದರ ಜೊತೆಗೆ ಮಾಸ್ಕ್ ಹಾಕಿರಲೇಬೇಕು. ಅದೇ ರನ್ನಿಂಗ್/ ಜಾಗಿಂಗ್ ಮಾಡುವಾಗ, ವ್ಯಾಯಾಮ ಮಾಡುವಾಗ.. ಆಲ್​ ರೆಡಿ ನೀವು ಜನರಿಂದ ದೂರ ಓಡುತ್ತಿರುತ್ತೀರಿ. ಹಾಗಿರುವಾಗ ಮಾಸ್ಕ್​ ಏಕೆ ಬೇಕು? ಯೋಚಿಸಿ ನೋಡಿ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಇನ್ನು ಎಸಿ ಕಾರಿನಲ್ಲಿ ಹೋಗುವಾಗ ಮಾಸ್ಕ್​ ಏಕೆ? ಎಂದೂ ವೈದ್ಯರು ಪ್ರಶ್ನಿಸಿದ್ದು, ಮಾಸ್ಕ್ ಧರಿಸುವುದು ಅಥವಾ ಬಿಡುವುದು ನಿಮ್ಮ ನಿಮ್ಮ ವಿವೇಚನೆಗೆ ಬಿಟ್ಟ ವಿಷಯ ಎಂದು ಜನರ ಹೆಗಲಿಗೇ ಮಾಸ್ಕ್ ಜವಾಬ್ದಾರಿಯನ್ನು ಹೊರಿಸಿದ್ದಾರೆ.

Published On - 1:26 pm, Thu, 21 May 20

ಹುಡಾ ಅಧ್ಯಕ್ಷ ಸ್ಥಾನಕ್ಕೆ ಬೀದಿಗಿಳಿದ ಮುಸ್ಲಿಂ ಸಮುದಾಯ
ಹುಡಾ ಅಧ್ಯಕ್ಷ ಸ್ಥಾನಕ್ಕೆ ಬೀದಿಗಿಳಿದ ಮುಸ್ಲಿಂ ಸಮುದಾಯ
ಬಿಗ್ ಬಾಸ್​ಗೆ ಹೋಗೋಕೆ ಡಿ ಫ್ಯಾನ್ಸ್​ನ ಎದುರು ಹಾಕ್ಕೊಂಡ್ರಾ ಸೋನು ಶೆಟ್ಟಿ?
ಬಿಗ್ ಬಾಸ್​ಗೆ ಹೋಗೋಕೆ ಡಿ ಫ್ಯಾನ್ಸ್​ನ ಎದುರು ಹಾಕ್ಕೊಂಡ್ರಾ ಸೋನು ಶೆಟ್ಟಿ?
ಬಾಲ್ಯದಲ್ಲೇ ನಿಸ್ಸಾರ್ ಮನೆಯಲ್ಲಿ ಲಿಂಗ ತಂದಿಟ್ಟು ಪೂಜೆ ಮಾಡುತ್ತಿದ್ದನಂತೆ
ಬಾಲ್ಯದಲ್ಲೇ ನಿಸ್ಸಾರ್ ಮನೆಯಲ್ಲಿ ಲಿಂಗ ತಂದಿಟ್ಟು ಪೂಜೆ ಮಾಡುತ್ತಿದ್ದನಂತೆ
ಮೈಸೂರಿಗೆ ಹೊರಟಿದ್ದ ರೈಲಿನಿಂದ ಬೇರ್ಪಟ್ಟ 6 ಬೋಗಿಗಳು
ಮೈಸೂರಿಗೆ ಹೊರಟಿದ್ದ ರೈಲಿನಿಂದ ಬೇರ್ಪಟ್ಟ 6 ಬೋಗಿಗಳು
ಉತ್ತರಕಾಶಿಯ ಧರಾಲಿ ಪ್ರದೇಶವಿಡೀ ಕೆಸರಾವೃತ, ಸಿಎಂ ಧಾಮಿ ವೈಮಾನಿಕ ಸಮೀಕ್ಷೆ
ಉತ್ತರಕಾಶಿಯ ಧರಾಲಿ ಪ್ರದೇಶವಿಡೀ ಕೆಸರಾವೃತ, ಸಿಎಂ ಧಾಮಿ ವೈಮಾನಿಕ ಸಮೀಕ್ಷೆ
ಕೃತಜ್ಞ ಮಗ ಸರ್ಕಾರೀ ನೌಕರ, ಕೆಎಸ್​ಅರ್​ಟಿಸಿಯಲ್ಲಿ ಚಾಲಕ!
ಕೃತಜ್ಞ ಮಗ ಸರ್ಕಾರೀ ನೌಕರ, ಕೆಎಸ್​ಅರ್​ಟಿಸಿಯಲ್ಲಿ ಚಾಲಕ!
ವಾರಾಣಸಿಯಲ್ಲಿ ಪ್ರವಾಹ; ಮನೆ, ಅಂಗಡಿ, ಆಸ್ಪತ್ರೆಗೆ ನುಗ್ಗಿದ ಗಂಗಾ ನದಿ ನೀರು
ವಾರಾಣಸಿಯಲ್ಲಿ ಪ್ರವಾಹ; ಮನೆ, ಅಂಗಡಿ, ಆಸ್ಪತ್ರೆಗೆ ನುಗ್ಗಿದ ಗಂಗಾ ನದಿ ನೀರು
ದರ್ಶನ್ ಅಭಿಮಾನಿಗಳನ್ನು ಕೊಚ್ಚೆಗೆ ಹೋಲಿಸಿದ ಮಾಡೆಲ್ ಸೋನು
ದರ್ಶನ್ ಅಭಿಮಾನಿಗಳನ್ನು ಕೊಚ್ಚೆಗೆ ಹೋಲಿಸಿದ ಮಾಡೆಲ್ ಸೋನು
ವಿಕ್ಟೋರಿಯ ಆಸ್ಪತ್ರೆಯಲ್ಲಿ ರೋಗಿಗಳಿಗೆ ಬಿಸಿನೀರಲ್ಲ ತಣ್ಣೀರೂ ಸಿಗಲ್ಲ!
ವಿಕ್ಟೋರಿಯ ಆಸ್ಪತ್ರೆಯಲ್ಲಿ ರೋಗಿಗಳಿಗೆ ಬಿಸಿನೀರಲ್ಲ ತಣ್ಣೀರೂ ಸಿಗಲ್ಲ!
ಕೆ.ಆರ್ ಪುರ ಮೇಟ್ರೋ ಸ್ಟೇಷನ್ ಬಳಿ ಕೆಲಕಾಲ ಆತಂಕ ಸೃಷ್ಟಿದ ಸೂಟ್​​​ಕೇಸ್​
ಕೆ.ಆರ್ ಪುರ ಮೇಟ್ರೋ ಸ್ಟೇಷನ್ ಬಳಿ ಕೆಲಕಾಲ ಆತಂಕ ಸೃಷ್ಟಿದ ಸೂಟ್​​​ಕೇಸ್​