AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಸಂಕಷ್ಟ: ಶೂ ಫ್ಯಾಕ್ಟರಿ ಹೋಗಿ, ಮಾಸ್ಕ್ ಫ್ಯಾಕ್ಟರಿ ಬಂತು!

ಮಹಾಮಾರಿ ಕೊರೊನಾ ವಾಣಿಜ್ಯ ಕ್ಷೇತ್ರದಲ್ಲೂ ಗೊತ್ತಿಲ್ಲದಂತೆ ಕೈಯಾಡಿಸ್ತಾ ಇದೆ. ನಾವಿವತ್ತು ಹೇಳ್ತಾ ಇರೋದು ಪ್ರಖ್ಯಾತ ಶೂ ಕಂಪನಿಯ ಶೂ ತಯಾರಿಕಾ ಘಟಕದ ಸ್ಥಿತ್ಯಂತರದ ಕತೆ. ಶೂಸ್ ಫ್ಯಾಕ್ಟರಿ ಮಾಸ್ಕ್ ಫ್ಯಾಕ್ಟರಿಯಾಗಿದ್ದು ಹೇಗೆ? ಅಮೆರಿಕದಲ್ಲಿ ಅನೇಕ ಶೂ ಕಂಪನಿಗಳಿವೆ. ಅದ್ರಲ್ಲಿ ನ್ಯೂಬ್ಯಾಲೆನ್ಸ್ ಸಖತ್ ಫೇಮಸ್ ಹೆಸರು. ಅದು ತನ್ನ ಶೂ ತಯಾರಿಕಾ ಘಟಕವನ್ನು ಅದಾಗಲೇ ಮಾಸ್ಕ್ ತಯಾರಿ ಘಟಕವನ್ನಾಗಿ ಬದಲಾಯಿಸಿದೆ. ಹೀಗೆ ರಾಲ್ಪ್ ರಾಲೊನ್ ಅಂಡರ್ ಆರ್ಮರ್ ನಂಥ ಕಂಪನಿಗಳು ಮಾಸ್ಕ್ ತಯಾರಿಯತ್ತ ಮುಖ ಮಾಡಿವೆ. ಇಂಥದ್ದೊಂದು ನಿರ್ಧಾರದ […]

ಕೊರೊನಾ ಸಂಕಷ್ಟ: ಶೂ ಫ್ಯಾಕ್ಟರಿ ಹೋಗಿ, ಮಾಸ್ಕ್ ಫ್ಯಾಕ್ಟರಿ ಬಂತು!
ಸಾಧು ಶ್ರೀನಾಥ್​
| Updated By: ಆಯೇಷಾ ಬಾನು|

Updated on:May 22, 2020 | 1:25 PM

Share

ಮಹಾಮಾರಿ ಕೊರೊನಾ ವಾಣಿಜ್ಯ ಕ್ಷೇತ್ರದಲ್ಲೂ ಗೊತ್ತಿಲ್ಲದಂತೆ ಕೈಯಾಡಿಸ್ತಾ ಇದೆ. ನಾವಿವತ್ತು ಹೇಳ್ತಾ ಇರೋದು ಪ್ರಖ್ಯಾತ ಶೂ ಕಂಪನಿಯ ಶೂ ತಯಾರಿಕಾ ಘಟಕದ ಸ್ಥಿತ್ಯಂತರದ ಕತೆ.

ಶೂಸ್ ಫ್ಯಾಕ್ಟರಿ ಮಾಸ್ಕ್ ಫ್ಯಾಕ್ಟರಿಯಾಗಿದ್ದು ಹೇಗೆ? ಅಮೆರಿಕದಲ್ಲಿ ಅನೇಕ ಶೂ ಕಂಪನಿಗಳಿವೆ. ಅದ್ರಲ್ಲಿ ನ್ಯೂಬ್ಯಾಲೆನ್ಸ್ ಸಖತ್ ಫೇಮಸ್ ಹೆಸರು. ಅದು ತನ್ನ ಶೂ ತಯಾರಿಕಾ ಘಟಕವನ್ನು ಅದಾಗಲೇ ಮಾಸ್ಕ್ ತಯಾರಿ ಘಟಕವನ್ನಾಗಿ ಬದಲಾಯಿಸಿದೆ. ಹೀಗೆ ರಾಲ್ಪ್ ರಾಲೊನ್ ಅಂಡರ್ ಆರ್ಮರ್ ನಂಥ ಕಂಪನಿಗಳು ಮಾಸ್ಕ್ ತಯಾರಿಯತ್ತ ಮುಖ ಮಾಡಿವೆ.

ಇಂಥದ್ದೊಂದು ನಿರ್ಧಾರದ ಹಿಂದೆ ಎರಡು ಉದ್ದೇಶಗಳಿವೆ. ಒಂದು, ತಮ್ಮ ದಿನನಿತ್ಯದ ಪ್ರಾಡಕ್ಟ್​ಗಳಿಗೆ ಕೊರೊನಾದಿಂದಾಗಿ ಬೇಡಿಕೆ ಕುಸಿದಿರುವುದು ಮತ್ತು ಮಾಸ್ಕ್​ಗಳ ಕೊರತೆಯಿಂದ ಅದರ ಬೇಡಿಕೆ ಜಾಸ್ತಿಯಾಗಿರೋದು. ಎಲ್ಲದಕ್ಕಿಂತ ಮುಖ್ಯವಾಗಿ ಕೊರೊನಾ ಕಾಲದ ಮಾನವೀಯ ತುಡಿತ ಅವರನ್ನು ಈ ಕೆಲಸಕ್ಕೆ ಪ್ರೇರೇಪಿಸಿವೆ. ಹೀಗೆ ಅನೇಕ ಫ್ಯಾಕ್ಟರಿಗಳು ಮಾಸ್ಕ್ ಮಾಡಲು ತೊಡಗಿವೆ.

ಮಾಸ್ಕ್ ಮಾದರಿ ಪ್ರೊಟೋಟೈಪ್ ರೆಡಿಯಾಗಿದ್ದು ಹೀಗೆ..! ನ್ಯೂ ಬ್ಯಾಲೆನ್ಸ್ ಒಂದು ಶೂ ಕಂಪೆನಿ. ಅದು ಯಾವತ್ತೂ ಮಾಸ್ಕ್ ಗಳನ್ನು ಮಾಡಿದ್ದಿಲ್ಲ. ಅದರಲ್ಲಿ ಕೆಲಸ ಮಾಡುವವರು ಮತ್ತು ಅದರ ಮೇಲ್ವಿಚಾರಕರು, ನಿರ್ವಾಹಕರು ಶೂ ಮಾಡೋದ್ರಲ್ಲೇ ಎಕ್ಸ್ ಪರ್ಟ್ ಗಳು. ಹಾಗಾಗಿ, ಅವರು ಅದ್ರ ಡಿಸೈನ್ ಮತ್ತು ಗುಣಮಟ್ಟ ಹಾಗೂ ತಾವು ಮಾರುಕಟ್ಟೆಗೆ ಮುಟ್ಟಿಸಬೇಕಾದ ಸಮಯಾವಕಾಶ ಎಲ್ಲದರ ಬಗ್ಗೆ ಆಲೋಚಿಸಬೇಕಿತ್ತು.

ಪ್ರೋಟೊಟೈಪ್ ಮಾಸ್ಕ್ ಗಳನ್ನು ಮೊದಲಿಗೆ ಅದು ರೆಡಿ ಮಾಡಿತು. ಅದ್ರ ಮೂತಿ ಪಕ್ಕಾ ನ್ಯೂಬ್ಯಾಲೆನ್ಸ್ ಶೂಸ್ ಮೂತಿಯನ್ನೇ ಹೋಲುತ್ತೆ. ಬೇಕಾದ ಹಾಗೆ ಬಿಗಿಗೊಳಿಸಬಹುದಾದ ಮತ್ತು ಸಡಿಲಗೊಳಿಸಬಹುದಾದ ಉತ್ತಮ ಗುಣಮಟ್ಟದ ಸ್ಟ್ರಾಪ್ ಗಳನ್ನು ಇದಕ್ಕೆ ಬಳಸಲಾಗಿದೆ. ಹೀಗೆ ಜಸ್ಟ್ ಮೂರು ದಿನಗಳಲ್ಲಿ ತ್ರಿ ಡಿ ಮಾಡೆಲ್ ಪ್ರೊಟೊಟೈಪ್ ಗಳನ್ನು ರೆಡಿ ಮಾಡಿ ಗುಣಮಟ್ಟ ಪರೀಕ್ಷಿಸಲಾಯ್ತು..

ಫ್ಯಾಕ್ಟರಿಯಲ್ಲಿ ಸಾಮಾಜಿಕ ಅಂತರ: ಕೊರೊನಾ ಕಾಲದ ಸೋಶಿಯಲ್ ಡಿಸ್ಟೆನ್ಸ್ ನಿಯಮಗಳಿಗೆ ಇಲ್ಲಿ ಯಾವತ್ತೂ ಕುತ್ತು ಬಂದಿಲ್ಲ. ಅಲ್ಲಿ 6 ಅಡಿಗಳ ಅಂತರವನ್ನು ಪ್ರತಿಯೊಬ್ಬರೂ ಕಾಯ್ದುಕೊಳ್ಳಲೇಬೇಕಿತ್ತು. ಜೊತೆಗೆ ಕೈಗವಸುಗಳು, ಸುರಕ್ಷತೆಗೆ ಮೇಲಂಗಿ, ಮಾಸ್ಕ್, ಹೇರ್ ಬಾನೆಟ್‌ಗಳನ್ನು ಒದಗಿಸಲಾಗಿತ್ತು.

ಇಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿತ್ತು. ಈ ಹಿಂದೆಯೂ ಕಟ್ಟಿಂಗ್ ಮೊದಲಾದ ಕೆಲಸಗಳನ್ನು ಕಂಪ್ಯೂಟರ್ ನಿಯಂತ್ರಿತ ಮೆಷಿನ್ ಮೂಲಕವೇ ಮಾಡಿಸಲಾಗುತಿತ್ತು. ಈ ಕಂಪನಿಯಲ್ಲಿ 130 ಜನ ಮಾಸ್ಕ್ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ. ನೀವು ನಂಬ್ತೀರೋ ಬಿಡ್ತೀರೋ ಈ ಶೂ ಫ್ಯಾಕ್ಟರಿ ವಾರವೊಂದಕ್ಕೆ ಒಂದು ಲಕ್ಷ ಮಾಸ್ಕ್ ತಯಾರಿಸಿ ಎಲ್ಲೆಡೆ ಪೂರೈಕೆ ಮಾಡ್ತಾ ಇದೆ.

Published On - 11:46 am, Fri, 22 May 20

ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ