ಎಲೆಕ್ಟ್ರಾನಿಕ್ ಸಿಟಿಯಲ್ಲಿ ಪೆಟ್ರೋಲ್ ಇದ್ದಾಗಲೇ ಟ್ಯಾಂಕ್ ವೆಲ್ಡಿಂಗ್: ಒಬ್ಬನ ಸಾವು
ಬೆಂಗಳೂರು: ಪೆಟ್ರೋಲ್ ಟ್ಯಾಂಕ್ ವೆಲ್ಡಿಂಗ್ ಮಾಡುವ ಸಂದರ್ಭದಲ್ಲಿ ಭಾರಿ ಅವಘಡವೊಂದು ಸಂಭವಿಸಿ ವ್ಯಕ್ತಿ ಮೃತಪಟ್ಟಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಬಳಿಯ ವಿಟ್ಟಸಂದ್ರದಲ್ಲಿ ನಡೆದಿದೆ. ಗೌರಿ ಶಂಕರ್ ಮೃತ ವ್ಯಕ್ತಿ. ಟ್ಯಾಂಕ್ನ ತಳದಲ್ಲಿ ಐದಾರು ಲೀಟರ್ ಪೆಟ್ರೋಲ್ ಉಳಿದಿತ್ತು. ಸರಿಯಾಗಿ ಗಮನಿಸದೆ ವೆಲ್ಡಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಪೆಟ್ರೋಲ್ ಟ್ಯಾಂಕರ್ಗೆ ಬೆಂಕಿ ತಗುಲಿ ಬ್ಲಾಸ್ಟ್ ಆಗಿದೆ. ಈ ವೇಳೆ ಆ ಸ್ಥಳದಲ್ಲಿ ಒಟ್ಟು ಮೂವರು ಕೆಲಸ ಮಾಡುತ್ತಿದ್ದರು. ಅದರಲ್ಲಿ ಓರ್ವ ಮೃತಪಟ್ಟಿದ್ದು, ಇನ್ನುಳಿದ ಇಬ್ಬರಿಗೆ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ […]

ಬೆಂಗಳೂರು: ಪೆಟ್ರೋಲ್ ಟ್ಯಾಂಕ್ ವೆಲ್ಡಿಂಗ್ ಮಾಡುವ ಸಂದರ್ಭದಲ್ಲಿ ಭಾರಿ ಅವಘಡವೊಂದು ಸಂಭವಿಸಿ ವ್ಯಕ್ತಿ ಮೃತಪಟ್ಟಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಬಳಿಯ ವಿಟ್ಟಸಂದ್ರದಲ್ಲಿ ನಡೆದಿದೆ. ಗೌರಿ ಶಂಕರ್ ಮೃತ ವ್ಯಕ್ತಿ.
ಟ್ಯಾಂಕ್ನ ತಳದಲ್ಲಿ ಐದಾರು ಲೀಟರ್ ಪೆಟ್ರೋಲ್ ಉಳಿದಿತ್ತು. ಸರಿಯಾಗಿ ಗಮನಿಸದೆ ವೆಲ್ಡಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಪೆಟ್ರೋಲ್ ಟ್ಯಾಂಕರ್ಗೆ ಬೆಂಕಿ ತಗುಲಿ ಬ್ಲಾಸ್ಟ್ ಆಗಿದೆ. ಈ ವೇಳೆ ಆ ಸ್ಥಳದಲ್ಲಿ ಒಟ್ಟು ಮೂವರು ಕೆಲಸ ಮಾಡುತ್ತಿದ್ದರು. ಅದರಲ್ಲಿ ಓರ್ವ ಮೃತಪಟ್ಟಿದ್ದು, ಇನ್ನುಳಿದ ಇಬ್ಬರಿಗೆ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Published On - 1:03 pm, Sat, 26 September 20




