
ರಾಯಚೂರು: ಹೊಟ್ಟೆ ನೋವಿನ ಟಾನಿಕ್ ಎಂದು ಭಾವಿಸಿ ಹ್ಯಾಂಡ್ ಸ್ಯಾನಿಟೈಜರ್ ಕುಡಿದ ವೃದ್ಧನೊಬ್ಬ ಸಾವನ್ನಪ್ಪಿರೋ ಘಟನೆ ಜಿಲ್ಲೆಯ ನೆಲಹಾಳದಲ್ಲಿ ಬೆಳಕಿಗೆ ಬಂದಿದೆ. 65 ವರ್ಷದ ಖಾಸಿಮ್ ಸಾಬ್ ಸ್ಯಾನಿಟೈಸರ್ ಕುಡಿದ ಮೃತ ವೃದ್ಧ ಎಂದು ತಿಳಿದುಬಂದಿದೆ.
ಜುಲೈ 26ರಂದು ವಿಪರೀತ ಹೊಟ್ಟೆ ನೋವಿಂದ ಬಳಲ್ತಿದ್ದ ಖಾಸಿಮ್ ಸಾಬ್ ಮನೆಯಲ್ಲಿ ಕಂಡ ಸ್ಯಾನಿಟೈಸರ್ ಅನ್ನು ಟಾನಿಕ್ ಎಂದು ತಿಳಿದು ಕುಡಿದಿದ್ದರು. ಕೂಡಲೆ ರಿಮ್ಸ್ ಆಸ್ಪತ್ರೆಗೆ ವೃದ್ಧನನ್ನು ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ವೃದ್ಧ ಕಳೆದ ರಾತ್ರಿ ಮೃತಪಟ್ಟಿದ್ದಾರೆ.
Published On - 3:54 pm, Tue, 28 July 20