ಮನೆ ಮುಂದೆ ನೀರು ಚೆಲ್ಲಿದ್ದಕ್ಕೆ ದೇವಸ್ಥಾನದ ಮುಂದೆ ನೆತ್ತರು ಹರಿಸಿದರು
ರಾಯಚೂರು: ಕ್ಷುಲ್ಲಕ ಕಾರಣಕ್ಕೆ ಕತ್ತು ಕೊಯ್ದು ವ್ಯಕ್ತಿಯನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ಜಿಲ್ಲೆಯ ಪುಚ್ಚಲದಿನ್ನಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಗ್ರಾಮದ ನಂದಯ್ಯಸ್ವಾಮಿ(45) ಕೊಲೆಯಾದ ವ್ಯಕ್ತಿ ಎಂದು ತಿಳಿದು ಬಂದಿದೆ. ಇಂದು ಬೆಳಗ್ಗೆ ಮನೆ ಮುಂದೆ ನೀರು ಚೆಲ್ಲಿದ್ದಕ್ಕೆ ನಂದಯ್ಯಸ್ವಾಮಿ ಮತ್ತು ಆರೋಪಿ ಚನ್ನಯ್ಯಸ್ವಾಮಿ ನಡುವೆ ಜಗಳ ಆರಂಭವಾಗಿದೆ. ಇದಾದ ಬಳಿಕ ಗ್ರಾಮದ ದೇವಾಲಯದ ಬಳಿ ನಂದಯ್ಯಸ್ವಾಮಿ ದೇವರಿಗೆ ನಮಸ್ಕರಿಸ್ತಿದ್ದಾಗ ಚನ್ನಯ್ಯಸ್ವಾಮಿ ಆತನ ಕತ್ತು ಕೊಯ್ದು ಅಲ್ಲಿಂದ ಪರಾರಿಯಾಗಿದ್ದಾನಂತೆ. ಯರಗೇರ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ […]

ರಾಯಚೂರು: ಕ್ಷುಲ್ಲಕ ಕಾರಣಕ್ಕೆ ಕತ್ತು ಕೊಯ್ದು ವ್ಯಕ್ತಿಯನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ಜಿಲ್ಲೆಯ ಪುಚ್ಚಲದಿನ್ನಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಗ್ರಾಮದ ನಂದಯ್ಯಸ್ವಾಮಿ(45) ಕೊಲೆಯಾದ ವ್ಯಕ್ತಿ ಎಂದು ತಿಳಿದು ಬಂದಿದೆ.
ಇಂದು ಬೆಳಗ್ಗೆ ಮನೆ ಮುಂದೆ ನೀರು ಚೆಲ್ಲಿದ್ದಕ್ಕೆ ನಂದಯ್ಯಸ್ವಾಮಿ ಮತ್ತು ಆರೋಪಿ ಚನ್ನಯ್ಯಸ್ವಾಮಿ ನಡುವೆ ಜಗಳ ಆರಂಭವಾಗಿದೆ. ಇದಾದ ಬಳಿಕ ಗ್ರಾಮದ ದೇವಾಲಯದ ಬಳಿ ನಂದಯ್ಯಸ್ವಾಮಿ ದೇವರಿಗೆ ನಮಸ್ಕರಿಸ್ತಿದ್ದಾಗ ಚನ್ನಯ್ಯಸ್ವಾಮಿ ಆತನ ಕತ್ತು ಕೊಯ್ದು ಅಲ್ಲಿಂದ ಪರಾರಿಯಾಗಿದ್ದಾನಂತೆ. ಯರಗೇರ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ.



