ಮದುವೆಯಾಗದ ಬಾಂಬರ್ ಆದಿತ್ಯನ ಹಿಸ್ಟರಿ ಶೀಟ್ ರೋಚಕವಾಗಿದೆ ನೋಡಿ!
ಬೆಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದು ತಾನೇ ಎಂದು ಆರೋಪಿ ಆದಿತ್ಯರಾವ್ ಬೆಂಗಳೂರು ಪೊಲೀಸರ ಮುಂದೆ ಶರಣಾಗಿದ್ದಾನೆ. ಇಂದು ಬೆಳಗ್ಗೆ ಡಿಜಿ & ಐಜಿಪಿ ನೀಲಮಣಿ ಎನ್ ರಾಜು ಅವರ ಎದುರು ಹಾಜರಾಗಿ ಏರ್ಪೋರ್ಟ್ನಲ್ಲಿ ಬಾಂಬ್ ಇಟ್ಟಿದ್ದು ತಾನೇ ಎಂದು ಆದಿತ್ಯರಾವ್ ತಪ್ಪೊಪ್ಪಿಕೊಂಡಿದ್ದಾನೆ. ಆದಿತ್ಯನ ಕಂಪ್ಲೀಟ್ ಡಿಟೇಲ್ಸ್: ಉಡುಪಿಯ ಮಣಿಪಾಲದ ನಿವಾಸಿಯಾಗಿರುವ ಆರೋಪಿ ಆದಿತ್ಯರಾವ್, 2007ರಲ್ಲಿ ಮಣಿಪಾಲದಲ್ಲಿ ಎಂಬಿಎ ವಿದ್ಯಾಭ್ಯಾಸ ಮಾಡಿ ಫಸ್ಟ್ ಕ್ಲಾಸ್ನಲ್ಲಿ ಪಾಸಾಗಿದ್ದಾನೆ. ಬಳಿಕ ಬೆಂಗಳೂರಲ್ಲಿ ಬಹುರಾಷ್ಟ್ರಿಯ ಬ್ಯಾಂಕ್ನಲ್ಲಿ ಮ್ಯಾನೇಜರ್ ಆಗಿ […]
ಬೆಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದು ತಾನೇ ಎಂದು ಆರೋಪಿ ಆದಿತ್ಯರಾವ್ ಬೆಂಗಳೂರು ಪೊಲೀಸರ ಮುಂದೆ ಶರಣಾಗಿದ್ದಾನೆ. ಇಂದು ಬೆಳಗ್ಗೆ ಡಿಜಿ & ಐಜಿಪಿ ನೀಲಮಣಿ ಎನ್ ರಾಜು ಅವರ ಎದುರು ಹಾಜರಾಗಿ ಏರ್ಪೋರ್ಟ್ನಲ್ಲಿ ಬಾಂಬ್ ಇಟ್ಟಿದ್ದು ತಾನೇ ಎಂದು ಆದಿತ್ಯರಾವ್ ತಪ್ಪೊಪ್ಪಿಕೊಂಡಿದ್ದಾನೆ.
ಆದಿತ್ಯನ ಕಂಪ್ಲೀಟ್ ಡಿಟೇಲ್ಸ್: ಉಡುಪಿಯ ಮಣಿಪಾಲದ ನಿವಾಸಿಯಾಗಿರುವ ಆರೋಪಿ ಆದಿತ್ಯರಾವ್, 2007ರಲ್ಲಿ ಮಣಿಪಾಲದಲ್ಲಿ ಎಂಬಿಎ ವಿದ್ಯಾಭ್ಯಾಸ ಮಾಡಿ ಫಸ್ಟ್ ಕ್ಲಾಸ್ನಲ್ಲಿ ಪಾಸಾಗಿದ್ದಾನೆ. ಬಳಿಕ ಬೆಂಗಳೂರಲ್ಲಿ ಬಹುರಾಷ್ಟ್ರಿಯ ಬ್ಯಾಂಕ್ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದ. ಒಂದು ವರ್ಷದ ಬಳಿಕ ಬ್ಯಾಂಕ್ನಲ್ಲಿ ಎಸಿ ವಿಚಾರವಾಗಿ ಆಡಳಿತ ವಿಭಾಗದ ಜತೆ ಗಲಾಟೆ ಮಾಡಿಕೊಂಡಿದ್ದ. ನಂತರ ಬ್ಯಾಂಕ್ನಲ್ಲಿ ಎಸಿ ಸರಿ ಇಲ್ಲ ಎಂಬ ಕಾರಣಕ್ಕೇ ತನ್ನ ಹುದ್ದೆಗೆ ಆದಿತ್ಯ ರಾಜೀನಾಮೆ ನೀಡಿದ್ದ.
ಫ್ರೆಶ್ ಗಾಳಿಗಾಗಿ ಸೆಕ್ಯೂರಿಟಿ ಕೆಲಸಕ್ಕೆ ಸೇರಿದ್ದ: ಬ್ಯಾಂಕ್ನಲ್ಲಿ ಕೆಲಸ ಬಿಟ್ಟ ನಂತರ ಫ್ರೆಶ್ ಗಾಳಿ ಬೇಕೆಂದು ಮೂಡಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸಕ್ಕೆ ಸೇರಿದ್ದ. ಕೆಲ ತಿಂಗಳುಗಳ ನಂತರ ಮಂಗಳೂರಿನ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ. ಆಗಲೇ ದೊಡ್ಡ ಕಳ್ಳತನದ ಪ್ಲಾನ್ ಸಹ ಮಾಡಿದ್ದ ಎನ್ನಲಾಗಿದೆ. ಬಳಿಕ ಹಲವು ಗಣ್ಯ ನಾಯಕರ ಮನೆಯ ಸೆಕ್ಯುರಿಟಿ ಆಗಿ ಕೆಲಸ ಮಾಡಿದ್ದಾನೆ. ಈತನಿಗೆ ಹೆಸರು ಮಾಡಬೇಕು ತನ್ನನ್ನು ಜನ ಗುರುತಿಸಬೇಕು ಅನ್ನೋ ಬಯಕೆ ಹೆಚ್ಚಾಗಿತ್ತು. ತನ್ನ ಬಗ್ಗೆ ದೇಶವಿಡಿ ಮಾತಾಡಬೇಕು ಎಂಬ ಮಹದಾಸೆ ಇಟ್ಟುಕೊಂಡಿದ್ದ. ಪ್ರತಿ ಮನೆ ಮನೆಯಲ್ಲೂ ತನ್ನ ಬಗ್ಗೆ ಚರ್ಚೆಯಾಗಬೇಕು, ಇದಕ್ಕಾಗಿ ಏನಾದ್ರೂ ಮಾಡಬೇಕೆಂದು ಕೊಂಡಿದ್ದ.
ನಕಲಿ ಗನ್ ತೋರಿಸಿ ರಾಬರಿ ಯತ್ನ: ನಕಲಿ ಗನ್ ತೋರಿಸಿ ಆದಿತ್ಯ ಎರಡು ಸಲ ರಾಬರಿ ಕೂಡ ಮಾಡಲು ಪ್ರಯತ್ನಿಸಿದ್ದ ಎನ್ನಲಾಗಿದೆ. 2013ರಲ್ಲಿ ಉಡುಪಿಯ ಪುತ್ತಿಗೆ ಮಠಕ್ಕೆ ಅಡುಗೆ ಸಹಾಯಕನಾಗಿ ಕೆಲಸಕ್ಕೆ ಸೇರಿಕೊಂಡಿದ್ದ. ಅಲ್ಲಿನ ಕೆಲಸದ ವಿಚಾರವಾಗಿ ಗಲಾಟೆ ಮಾಡಿಕೊಂಡು ಮತ್ತೆ ಬೆಂಗಳೂರಿಗೆ ವಾಪಸ್ ಆಗಿದ್ದ. ಬಳಿಕ ಬೆಂಗಳೂರಿನ ಸುದ್ದಗುಂಟೆ ಪಾಳ್ಯದ ರೂಮ್ಲ್ಲಿ ರೂಮ್ಮೇಟ್ ಲ್ಯಾಪ್ ಟಾಪ್ ಸಹ ಕಳ್ಳತನ ಮಾಡಿ ಪೊಲೀಸರ ಕೈಗೆ ಸಿಕ್ಕಿಬೀಳುತ್ತಾನೆ.
ಲ್ಯಾಪ್ ಟಾಪ್ ಕದ್ದು ಜೈಲುಪಾಲಾಗಿದ್ದ: ಲ್ಯಾಪ್ ಟಾಪ್ ಕಳ್ಳತನ ಮಾಡಿ ಜೈಲುವಾಸ ಅನುಭವಿಸಿದ ಬಳಿಕ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕೆಲಸಕ್ಕೆ ಅರ್ಜಿ ಹಾಕಿದ್ದ. ಕೆಲಸ ಸಿಗದೆ ನಿರಾಸೆಗೊಂಡು ಕೊಚ್ಚಿ, ಹೈದರಾಬಾದ್, ಮುಂಬೈ, ದೆಹಲಿಗೆ ಹೋಗುತ್ತಿರುವ ವಿಮಾನದಲ್ಲಿ ಬಾಂಬ್ ಇಟ್ಟಿದ್ದೇನೆಂದು ಹುಸಿ ಕರೆ ಮಾಡಿ ಬಂಧನಕ್ಕೊಳಗಾಗಿ ಶಿಕ್ಷೆ ಅನುಭವಿಸಿದ್ದ. ಬಳಿಕ ಬಾರ್, ಹೋಟೆಲ್, ರೆಸ್ಟೋರೆಂಟ್ಗಳಲ್ಲಿ ಕೆಲಸ ಮಾಡ್ತಾನೆ. ಆರೋಪಿ ಆದಿತ್ಯ ಕಿಕ್ ಬಾಕ್ಸಿಂಗ್, ಕರಾಟೆ ಸಹ ಕಲಿತಿದ್ದಾನೆ.
Published On - 2:56 pm, Wed, 22 January 20