ಶಾಸಕಿ ಬಗ್ಗೆ ಮಾತಾಡಬೇಡ ಅಂತಾ ವರಿಷ್ಠರು ಹೇಳೋಕೆ.. ಆಕೆ ಏನು ಅಂಥ ದೊಡ್ಡ ಲೀಡರಾ? -ಸಚಿವ ರಮೇಶ್ ಜಾರಕಿಹೊಳಿ

ಹಿತೈಷಿಗಳು ಸಲಹೆ ಕೊಟ್ಟಿದ್ದಕ್ಕೆ ಆಕೆ ಬಗ್ಗೆ ಮಾತಾಡೋದನ್ನ ಬಿಟ್ಟಿದ್ದೇನೆ. ವರಿಷ್ಠರು ಹೇಳೋಕೆ ಆಕೆ ಏನು ಅಂತಹ ದೊಡ್ಡ ಲೀಡರಾ? ಎಂದು ಪರೋಕ್ಷವಾಗಿ ಏಕವಚನದಲ್ಲೇ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ರಮೇಶ್​ ಜಾರಕಿಹೊಳಿ‌ ವಾಗ್ದಾಳಿ ನಡೆಸಿದರು.

ಶಾಸಕಿ ಬಗ್ಗೆ ಮಾತಾಡಬೇಡ ಅಂತಾ ವರಿಷ್ಠರು ಹೇಳೋಕೆ.. ಆಕೆ ಏನು ಅಂಥ ದೊಡ್ಡ ಲೀಡರಾ? -ಸಚಿವ ರಮೇಶ್ ಜಾರಕಿಹೊಳಿ
ಲಕ್ಷ್ಮಿ ಹೆಬ್ಬಾಳ್ಕರ್ (ಎಡ) , ರಮೇಶ್ ಜಾರಕಿಹೊಳಿ (ಬಲ)

Updated on: Dec 26, 2020 | 4:04 PM

ಬೆಳಗಾವಿ: ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಮಾತಾಡದಂತೆ ಹಿತೈಷಿಗಳ ಸಲಹೆ ಕೊಟ್ಟಿದ್ದಾರೆ ಎಂದು ಸಚಿವ ರಮೇಶ್ ಜಾರಕಿಹೊಳಿ‌ ಹೇಳಿದರು. ಶಾಸಕಿ ಬಗ್ಗೆ ಮಾತನಾಡಬೇಡ ಎಂದು ವರಿಷ್ಠರು ಹೇಳಿಲ್ಲ. ನಮ್ಮ ವರಿಷ್ಠರಿಗೂ ಶಾಸಕಿ ಹೆಬ್ಬಾಳ್ಕರ್​ಗೂ ಏನು ಸಂಬಂಧ? ಎಂದು ಸಚಿವರು ಪ್ರಶ್ನಿಸಿದರು.

ನನ್ನ ಹಿತೈಷಿಗಳು ಆಕೆ ಬಗ್ಗೆ ಮಾತನಾಡಬೇಡ ಎಂದು ಸಲಹೆ ಕೊಟ್ಟಿದ್ದಾರೆ. ಹಿತೈಷಿಗಳು ಸಲಹೆ ಕೊಟ್ಟಿದ್ದಕ್ಕೆ ಆಕೆ ಬಗ್ಗೆ ಮಾತಾಡೋದನ್ನ ಬಿಟ್ಟಿದ್ದೇನೆ. ವರಿಷ್ಠರು ಹೇಳೋಕೆ ಆಕೆ ಏನು ಅಂತಹ ದೊಡ್ಡ ಲೀಡರಾ? ಎಂದು ಪರೋಕ್ಷವಾಗಿ ಏಕವಚನದಲ್ಲೇ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ರಮೇಶ್​ ಜಾರಕಿಹೊಳಿ‌ ವಾಗ್ದಾಳಿ ನಡೆಸಿದರು.

‘ಯಡಿಯೂರಪ್ಪನವರು ಸಿಎಂ ಆಗಿ ಮುಂದುವರಿಯುತ್ತಾರೆ’
ಉತ್ತರಾಯಣ ಕಾಲದಲ್ಲಿ ಎಲ್ಲಾ ಬದಲಾಗುತ್ತೆ ಎಂಬ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವೈಯಕ್ತಿಕ. ಸಿಎಂ ಬದಲಾವಣೆ ಇಲ್ಲವೆಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಯಡಿಯೂರಪ್ಪನವರು ಸಿಎಂ ಆಗಿ ಮುಂದುವರಿಯುತ್ತಾರೆ. ಮುಂದಿನ ಎರಡೂವರೆ ವರ್ಷ ಬಿಎಸ್​ವೈ ಸಿಎಂ ಆಗಿರುತ್ತಾರೆ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.

ಬೆಳಗಾವಿ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡುವ ವಿಚಾರವಾಗಿ ದಿ.ಸುರೇಶ್ ಅಂಗಡಿ ಪತ್ನಿಗೆ ಟಿಕೆಟ್ ಕೊಟ್ಟರೆ ಒಳ್ಳೆಯದು. ವರಿಷ್ಠರು ಯಾರಿಗೆ ಟಿಕೆಟ್​ ಕೊಟ್ಟರೂ ಅವರ ಪರ ಕೆಲಸ ಮಾಡುತ್ತೇನೆ. ಗಟ್ಟಿಯಾಗಿ ದುಡಿದು ಅಭ್ಯರ್ಥಿ ಗೆಲ್ಲಿಸುವ ಕೆಲಸ ಮಾಡ್ತೇವೆ ಎಂದು ಸಚಿವ ರಮೇಶ್ ಜಾರಕಿಹೊಳಿ‌ ಹೇಳಿದರು.

‘ಶಾಸಕಿ ಬಗ್ಗೆ ಮಾತಾಡಬೇಡ ಎಂದು ವರಿಷ್ಠರ ವಾರ್ನಿಂಗ್ ಇದೆ.. ಹಾಗಾಗಿ ಕಳೆದ 6 ತಿಂಗಳಿನಿಂದ ಒಂದು ಶಬ್ದ ಮಾತನಾಡಿಲ್ಲ’