BJP ಜೊತೆಗೆ ‘ಆ ಪಕ್ಷ’ ವಿಲೀನವಾಗುತ್ತಾ? ಶಾಸಕ ಲಿಂಬಾವಳಿಯಿಂದ ಸ್ಫೋಟಕ ಸುಳಿವು

ಸಾರ್.. ಬಿಜೆಪಿ ಜೊತೆಗೆ ಪಕ್ಷವೊಂದು ವಿಲೀನವಾಗುತ್ತಾ? ‘ಕಮಲ’ದೊಂದಿಗೆ ಆ ಪಕ್ಷ ಕೈಜೋಡಿಸುತ್ತಾ? ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸುವಾಗ ಬಿಜೆಪಿ ಹಿರಿಯ ಶಾಸಕ ಅರವಿಂದ ಲಿಂಬಾವಳಿ ಸ್ಫೋಟಕ ಸುಳಿವು ಒಂದನ್ನು ಕೊಟ್ಟರು.

BJP ಜೊತೆಗೆ ‘ಆ ಪಕ್ಷ’ ವಿಲೀನವಾಗುತ್ತಾ? ಶಾಸಕ ಲಿಂಬಾವಳಿಯಿಂದ ಸ್ಫೋಟಕ ಸುಳಿವು
ಶಾಸಕ ಅರವಿಂದ ಲಿಂಬಾವಳಿ
Follow us
KUSHAL V
|

Updated on:Dec 20, 2020 | 4:22 PM

ಬೆಂಗಳೂರು: ಸಾರ್.. ಬಿಜೆಪಿ ಜೊತೆಗೆ ಪಕ್ಷವೊಂದು ವಿಲೀನವಾಗುತ್ತಾ? ‘ಕಮಲ’ದೊಂದಿಗೆ ಆ ಪಕ್ಷ ಕೈಜೋಡಿಸುತ್ತಾ? ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸುವಾಗ ಬಿಜೆಪಿ ಹಿರಿಯ ಶಾಸಕ ಅರವಿಂದ ಲಿಂಬಾವಳಿ ಸ್ಫೋಟಕ ಸುಳಿವು ಒಂದನ್ನು ಕೊಟ್ಟರು.

ರಾಜಕೀಯ ಪಕ್ಷವೊಂದು ವಿಲೀನ ಆಗುತ್ತಾ ಅನ್ನೋ ಪ್ರಶ್ನೆಗೆ ಸುಳಿವು ಕೊಟ್ಟ ಬಿಜೆಪಿ ಹಿರಿಯ ಶಾಸಕ ಅರವಿಂದ ಲಿಂಬಾವಳಿ ಈ ವೇಳೆ, ನಾನೂ ಮಾಧ್ಯಮದಲ್ಲೇ ನೋಡಿದ್ದೇನೆಂದು ಸ್ಮೈಲ್ ಮಾಡಿ ಸುಮ್ಮನಾದರು.

‘ರಾಜ್ಯದಲ್ಲಿ ರಾಜಕೀಯ ಧ್ರುವೀಕರಣ ಹೆಚ್ಚಾಗಲಿವೆ’ ಕರ್ನಾಟಕದಲ್ಲೂ ಧ್ರುವೀಕರಣ ಆರಂಭವಾಗಲಿದೆ. ಅಭಿವೃದ್ಧಿ ಮಾಡುವ ಪಕ್ಷದ ಕಡೆಗೆ ಎಲ್ಲರೂ ಮುಖ ಮಾಡ್ತಾರೆ ಎಂದು ಶಾಸಕ ಅರವಿಂದ ಲಿಂಬಾವಳಿ ಹೇಳಿದರು.

ಕರ್ನಾಟಕದಲ್ಲಿ ಈಗ ಸ್ಥಿರ ಸರ್ಕಾರ ಇದೆ. ಬರುವಂತ ದಿನಗಳಲ್ಲಿ ರಾಜಕೀಯ ಧ್ರುವೀಕರಣ ಮತ್ತಷ್ಟು ಹೆಚ್ಚಾಗಲಿದೆ. ಮೋದಿ ಅಲೆ, ಬಿಜೆಪಿ ಅಲೆ ಸ್ಪಷ್ಟವಾಗಿದೆ. ಕರ್ನಾಟಕದಲ್ಲೂ ಧ್ರುವೀಕರಣ ಆರಂಭವಾಗಲಿದೆ. ಸಮ್ಮಿಶ್ರ ಸರ್ಕಾರ ಮಾಡಿದವರೇ ಪರಸ್ಪರ ಕಿತ್ತಾಡ್ತಿರೋದು ನೋಡಿದರೆ ಬರುವಂತ ದಿನಗಳಲ್ಲಿ ರಾಜ್ಯದ ಅಭಿವೃದ್ಧಿ ಮಾಡುವ ಪಕ್ಷದ ಕಡೆಗೆ ಎಲ್ಲರು ಮುಖ ಮಾಡ್ತಾರೆ ಎಂದು ಲುಂಬಾವಳಿ ಹೇಳಿದರು.

BJP ಜೊತೆ JDSನ್ನು ವಿಲೀನಗೊಳಿಸುವ ವರದಿ ಸುಳ್ಳು -ಸಿಎಂ BSY ಸ್ಪಷ್ಟನೆ

Published On - 3:15 pm, Sun, 20 December 20