ಕ್ಯಾಸಿನೊ ರಾಜ ಫಾಜಿಲ್ ಜೊತೆಗಿನ ಪುರಾತನ ದೋಸ್ತಿ ಬಗ್ಗೆ ಶಾಸಕ ಜಮೀರ್ ಹೇಳಿದ್ದೇನು?
ಬೆಂಗಳೂರು: ಸ್ಯಾಂಡಲ್‌ವುಡ್ ಡ್ರಗ್ಸ್ ಜಾಲದ ನಂಟ ಪ್ರಕರಣ ಸಂಬಂಧ ಶಾಸಕ ಜಮೀರ್ ಅಹಮ್ಮದ್ ಕ್ಯಾಸಿನೊ ರಾಜ ಫಾಜಿಲ್ ಜೊತೆಗಿನ ಪುರಾತನ ದೋಸ್ತಿ ಬಗ್ಗೆ ಮಾತನಾಡಿದ್ದಾರೆ. ಫಾಜಿಲ್ ನಾಲ್ಕು ವರ್ಷದ ಹಿಂದೆ ನನಗೆ ಪರಿಚಯ. ಆದರೆ ಈಗ ಇಲ್ಲ. ನಾಲ್ಕು ವರ್ಷದಿಂದ ಫೋನು ಇಲ್ಲ, ಮೆಸೇಜೂ ಇಲ್ಲ. ಯಾರ್ ಯಾರೋ ನನ್ನನ್ನ ಭೇಟಿ ಮಾಡಲು ಬರುತ್ತಿರುತ್ತಾರೆ. ಭೇಟಿ ಮಾಡಲು ಬಂದವರೆಲ್ಲ ನನ್ನ ಆಪ್ತರು ಅನ್ನೋಕಾಗುತ್ತಾ ಸರ್ಕಾರ ಯಾವುದಿದೆ ? ಕಾಂಗ್ರೆಸ್ ಸರ್ಕಾರ ಇದೆಯಾ ? ಬಿಜೆಪಿ ಸರ್ಕಾರ ಇದೆ? […]
ಸಾಧು ಶ್ರೀನಾಥ್
Updated on:
Sep 11, 2020 | 12:57 PM
ಬೆಂಗಳೂರು: ಸ್ಯಾಂಡಲ್‌ವುಡ್ ಡ್ರಗ್ಸ್ ಜಾಲದ ನಂಟ ಪ್ರಕರಣ ಸಂಬಂಧ ಶಾಸಕ ಜಮೀರ್ ಅಹಮ್ಮದ್ ಕ್ಯಾಸಿನೊ ರಾಜ ಫಾಜಿಲ್ ಜೊತೆಗಿನ ಪುರಾತನ ದೋಸ್ತಿ ಬಗ್ಗೆ ಮಾತನಾಡಿದ್ದಾರೆ. ಫಾಜಿಲ್ ನಾಲ್ಕು ವರ್ಷದ ಹಿಂದೆ ನನಗೆ ಪರಿಚಯ. ಆದರೆ ಈಗ ಇಲ್ಲ. ನಾಲ್ಕು ವರ್ಷದಿಂದ ಫೋನು ಇಲ್ಲ, ಮೆಸೇಜೂ ಇಲ್ಲ. ಯಾರ್ ಯಾರೋ ನನ್ನನ್ನ ಭೇಟಿ ಮಾಡಲು ಬರುತ್ತಿರುತ್ತಾರೆ. ಭೇಟಿ ಮಾಡಲು ಬಂದವರೆಲ್ಲ ನನ್ನ ಆಪ್ತರು ಅನ್ನೋಕಾಗುತ್ತಾ ಸರ್ಕಾರ ಯಾವುದಿದೆ ? ಕಾಂಗ್ರೆಸ್ ಸರ್ಕಾರ ಇದೆಯಾ ? ಬಿಜೆಪಿ ಸರ್ಕಾರ ಇದೆ? ತನಿಖೆ ಮಾಡಲಿ ಎಂದು ಹೇಳಿದ್ದಾರೆ.
ಸಂಜನಾ ಜತೆ ಇದ್ದಿದ್ದು ಸಾಬೀತಾದ್ರೆ ಆಸ್ತಿ ಬರೆದು ಕೊಡ್ತೀನಿ: ಇನ್ನು ಇದೇ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ನಟಿ ಸಂಜನಾ ಬಗ್ಗೆ ಮಾತನಾಡಿದ ಅವರು ಸಂಜನಾ ಜತೆ ನಾನು ಇದ್ದಿದ್ದು ಸಾಬೀತಾದ್ರೆ ನನ್ನ ಎಲ್ಲಾ ಆಸ್ತಿಯನ್ನು ರಾಜ್ಯ ಸರ್ಕಾರಕ್ಕೆ ಬರೆದುಕೊಡುತ್ತೇನೆ ಎಂದ್ರು. ಪ್ರಶಾಂತ್ ಸಂಬರಗಿ ಯಾರೋ ಕಾಂಜಿಪೀಂಜಿ ನಟಿ ಸಂಜನಾರನ್ನ ಬೆಂಗಳೂರಲ್ಲೂ, ಶ್ರೀಲಂಕಾದಲ್ಲೂ ನೋಡಿಲ್ಲ. ಏರ್ಪೋರ್ಟ್ ಅಥವಾ ಬಸ್ಸ್ಟ್ಯಾಂಡ್ನಲ್ಲೂ ನಾನು ನೋಡಿಲ್ಲ. ಈಗ ನಮ್ಮ ಸರ್ಕಾರವಿಲ್ಲ, ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ನಟಿ ಸಂಜನಾ ಗಲ್ರಾನಿ ಈಗ ಪೊಲೀಸ್ ಕಸ್ಟಡಿಯಲ್ಲೇ ಇದ್ದಾರೆ. ಹೀಗಾಗಿ ಸಿಎಂ ಬಿಎಸ್ವೈಗೆ ತನಿಖೆಗೆ ಮನವಿ ಮಾಡುತ್ತೇನೆ. ಸಂಬರಗಿ ಆರೋಪದ ಬಗ್ಗೆ ಯಾವ ತನಿಖೆ ಬೇಕಾದ್ರೂ ಮಾಡಲಿ ಎಂದಿದ್ದಾರೆ.
sadhu srinath
ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ!
ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್ ನ್ಯೂಸ್ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್ ಆಲ್ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು. ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು