ಸಹೋದ್ಯೋಗಿಗಳ ಸಂಕಷ್ಟಕ್ಕೆ ಮಿಡಿದ ಇನ್ಸ್‌ಪೆಕ್ಟರ್, ಮಳೆಯಲ್ಲಿ 50 ಕಿ.ಮೀ ಬಂದು ಆಹಾರ ಪೂರೈಕೆ
ಮಂಗಳೂರು: ಕೊರೊನಾ ಸಂದರ್ಭದಲ್ಲಿ ಸಹೋದ್ಯೋಗಿಗಳ ಸಂಕಷ್ಟಕ್ಕೆ ಇನ್ಸ್‌ಪೆಕ್ಟರ್ ಮನ ಮಿಡಿದಿದ್ದಾರೆ. ಮಧ್ಯರಾತ್ರಿ ಭಾರೀ ಮಳೆಯ ಮಧ್ಯೆಯೂ ಕ್ವಾರಂಟೈನ್ನಲ್ಲಿರುವ ಸಿಬ್ಬಂದಿಗೆ ಆಹಾರ ಸಾಮಗ್ರಿ ಪೂರೈಕೆ ಮಾಡಿದ್ದಾರೆ. ಸದ್ಯ ಉಳ್ಳಾಲ ಠಾಣೆಯ 10 ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ. ಉಳಿದ ಪೊಲೀಸ್ ಸಿಬ್ಬಂದಿಯನ್ನು ಉಳ್ಳಾಲ ಅತಿಥಿ ಗೃಹದಲ್ಲಿ ಕ್ವಾರಂಟೈನ್ ಮಾಡಲಾಗಿದೆ. 50 ಕಿಲೋ ಮೀಟರ್ ದೂರದ ಮೂಡಬಿದ್ರೆ ಪೊಲೀಸ್ ಠಾಣೆಯಿಂದ ಆಗಮಿಸಿ, ಉಳ್ಳಾಲ ಠಾಣೆಯ ಕ್ವಾರಂಟೈನ್ ಸಿಬ್ಬಂದಿಗೆ ಆಹಾರದ ಕಿಟ್ ನೀಡಿದ್ದಾರೆ. ಬೇರೆ ಠಾಣೆಯ ತನ್ನ ಸಿಬ್ಬಂದಿ ಜೊತೆ […]
ಮಂಗಳೂರು: ಕೊರೊನಾ ಸಂದರ್ಭದಲ್ಲಿ ಸಹೋದ್ಯೋಗಿಗಳ ಸಂಕಷ್ಟಕ್ಕೆ ಇನ್ಸ್‌ಪೆಕ್ಟರ್ ಮನ ಮಿಡಿದಿದ್ದಾರೆ. ಮಧ್ಯರಾತ್ರಿ ಭಾರೀ ಮಳೆಯ ಮಧ್ಯೆಯೂ ಕ್ವಾರಂಟೈನ್ನಲ್ಲಿರುವ ಸಿಬ್ಬಂದಿಗೆ ಆಹಾರ ಸಾಮಗ್ರಿ ಪೂರೈಕೆ ಮಾಡಿದ್ದಾರೆ.
ಸದ್ಯ ಉಳ್ಳಾಲ ಠಾಣೆಯ 10 ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ. ಉಳಿದ ಪೊಲೀಸ್ ಸಿಬ್ಬಂದಿಯನ್ನು ಉಳ್ಳಾಲ ಅತಿಥಿ ಗೃಹದಲ್ಲಿ ಕ್ವಾರಂಟೈನ್ ಮಾಡಲಾಗಿದೆ. 50 ಕಿಲೋ ಮೀಟರ್ ದೂರದ ಮೂಡಬಿದ್ರೆ ಪೊಲೀಸ್ ಠಾಣೆಯಿಂದ ಆಗಮಿಸಿ, ಉಳ್ಳಾಲ ಠಾಣೆಯ ಕ್ವಾರಂಟೈನ್ ಸಿಬ್ಬಂದಿಗೆ ಆಹಾರದ ಕಿಟ್ ನೀಡಿದ್ದಾರೆ.
ಬೇರೆ ಠಾಣೆಯ ತನ್ನ ಸಿಬ್ಬಂದಿ ಜೊತೆ ಆಗಮಿಸಿ ಮೂಡಬಿದ್ರೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ದಿನೇಶ್ ಮತ್ತು ತಂಡದಿಂದ ಕಿಟ್ ವಿತರಿಸಿದ್ದಾರೆ. ಕ್ವಾರಂಟೈನ್ನಲ್ಲಿರುವ ಪೊಲೀಸರ ಸಂಕಷ್ಟಕ್ಕೆ ಸ್ಪಂದಿಸಿದ ಇನ್ಸ್‌ಪೆಕ್ಟರ್ ಬಗ್ಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.