ಕೊರೊನಾದಿಂದ.. ಪ್ರತಿಷ್ಠಿತ ಕಿದ್ವಾಯಿ ಆಸ್ಪತ್ರೆಗೂ ಇಂಥಾ ಪರಿಸ್ಥಿತಿ ಬಂತಾ?
ಬೆಂಗಳೂರು: ಕ್ರೂರಿ ಕೊರೊನಾ ರಾಜ್ಯದಲ್ಲಿ ತನ್ನ ಇನ್ನೊಂದು ಮುಖವನ್ನ ತೋರಿಸೋಕೆ ಶುರು ಮಾಡಿದೆ. ಈ ಮಧ್ಯೆ ಸೋಂಕಿನ ಆಟದ ಜೊತೆ ಕಾರ್ಮಿಕರ ಸಂಬಳಕ್ಕೂ ಕತ್ತರಿ ಬೀಳುತ್ತಿದೆ. ಕೊರೊನಾ ಹಿನ್ನೆಲೆಯಲ್ಲಿ ನೌಕರರಿಗೆ ಸಂಬಳ ನೀಡದೆ ಪ್ರತಿಷ್ಠಿತ ಕಿದ್ವಾಯಿ ಆಸ್ಪತ್ರೆಯೂ ಸತಾಯಿಸುತ್ತಿದೆ. ಮಾರ್ಚ್, ಏಪ್ರಿಲ್ ತಿಂಗಳ ಸಂಬಳವನ್ನು ಇನ್ನೂ ನೀಡಿಲ್ಲ. ಹಾಗಾಗಿ ಕಿದ್ವಾಯಿ ಆಸ್ಪತ್ರೆಯ ಸಿಬ್ಬಂದಿ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಲಾಕ್ಡೌನ್ನಲ್ಲಿ ಕೆಲಸಕ್ಕೆ ಹಾಜರಾಗದೇ ಇರುವವರನ್ನು ನಿವೃತ್ತಿ ಹೊಂದಿದ್ದಾರೆ ಎಂದು ನೋಟಿಸ್ ನೀಡಲಾಗುತ್ತಿದೆ. ಸುಳ್ಳು ಕಾರಣ ನೀಡಿ ನೌಕರರನ್ನ ಕೆಲಸದಿಂದ ತೆಗೆಯಲಾಗುತ್ತಿದೆ. […]
ಬೆಂಗಳೂರು: ಕ್ರೂರಿ ಕೊರೊನಾ ರಾಜ್ಯದಲ್ಲಿ ತನ್ನ ಇನ್ನೊಂದು ಮುಖವನ್ನ ತೋರಿಸೋಕೆ ಶುರು ಮಾಡಿದೆ. ಈ ಮಧ್ಯೆ ಸೋಂಕಿನ ಆಟದ ಜೊತೆ ಕಾರ್ಮಿಕರ ಸಂಬಳಕ್ಕೂ ಕತ್ತರಿ ಬೀಳುತ್ತಿದೆ. ಕೊರೊನಾ ಹಿನ್ನೆಲೆಯಲ್ಲಿ ನೌಕರರಿಗೆ ಸಂಬಳ ನೀಡದೆ ಪ್ರತಿಷ್ಠಿತ ಕಿದ್ವಾಯಿ ಆಸ್ಪತ್ರೆಯೂ ಸತಾಯಿಸುತ್ತಿದೆ.
ಮಾರ್ಚ್, ಏಪ್ರಿಲ್ ತಿಂಗಳ ಸಂಬಳವನ್ನು ಇನ್ನೂ ನೀಡಿಲ್ಲ. ಹಾಗಾಗಿ ಕಿದ್ವಾಯಿ ಆಸ್ಪತ್ರೆಯ ಸಿಬ್ಬಂದಿ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಲಾಕ್ಡೌನ್ನಲ್ಲಿ ಕೆಲಸಕ್ಕೆ ಹಾಜರಾಗದೇ ಇರುವವರನ್ನು ನಿವೃತ್ತಿ ಹೊಂದಿದ್ದಾರೆ ಎಂದು ನೋಟಿಸ್ ನೀಡಲಾಗುತ್ತಿದೆ. ಸುಳ್ಳು ಕಾರಣ ನೀಡಿ ನೌಕರರನ್ನ ಕೆಲಸದಿಂದ ತೆಗೆಯಲಾಗುತ್ತಿದೆ.
ಸುಮಾರು 150ಕ್ಕೂ ಹೆಚ್ಚು ನೌಕರರ ಸಂಬಳ ಕಡಿತಗೊಳಿಸಲಾಗಿದೆ. ಸಂಬಳ ಇಲ್ಲದೆ, ಕೆಲಸ ಇಲ್ಲದೇ ನೌಕರರು ಕಂಗಾಲಾಗಿದ್ದಾರೆ ಎಂದು ಟಿವಿ9 ಜೊತೆ ಕಿದ್ವಾಯಿ ಆಸ್ಪತ್ರೆ ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.
Published On - 1:04 pm, Tue, 30 June 20