Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೊತೆಗೆ ಇದ್ದವರು ಗೆದ್ದರು; ಸೋತು ಸೈಲೆಂಟ್​ ಆದ ಉಗ್ರಂ ಮಂಜು, ಗೌತಮಿ

ಬಿಗ್ ಬಾಸ್ ಆಟದಲ್ಲಿ ಯಾವಾಗ, ಯಾವ ರೀತಿಯ ಟ್ವಿಸ್ಟ್​ ಸಿಗುತ್ತದೆ ಎಂದು ಊಹಿಸೋಕೆ ಆಗಲ್ಲ. ತುಂಬ ಸ್ಟ್ರಾಂಗ್ ಸ್ಪರ್ಧಿ ಎನಿಸಿಕೊಂಡವರ ಆಟ ಅರ್ಧದಲ್ಲೇ ಡಲ್ ಆಗಬಹುದು. ಉಗ್ರಂ ಮಂಜು ಅವರ ವಿಚಾರದಲ್ಲಿ ಹಾಗೆಯೇ ಆಗಿದೆ. ವೈಯಕ್ತಿಕ ಆಟದ ಮೇಲೆ ಗಮನ ಹರಿಸದೇ ಇರುವ ಕಾರಣ ಅವರು ಹಿಂದೆ ಉಳಿಯುವಂತಾಗಿದೆ.

ಜೊತೆಗೆ ಇದ್ದವರು ಗೆದ್ದರು; ಸೋತು ಸೈಲೆಂಟ್​ ಆದ ಉಗ್ರಂ ಮಂಜು, ಗೌತಮಿ
Bigg Boss Kannada
Follow us
ಮದನ್​ ಕುಮಾರ್​
|

Updated on: Jan 10, 2025 | 10:21 PM

ಈ ವಾರ ‘ಬಿಗ್ ಬಾಸ್ ಕನ್ನಡ ಸೀಸನ್​ 11’ ರಿಯಾಲಿಟಿ ಶೋ ಸ್ಪರ್ಧಿಗಳಿಗೆ ಬಹಳ ಮಹತ್ವದ್ದಾಗಿತ್ತು. ಫಿನಾಲೆಯ ಟಿಕೆಟ್ ಪಡೆಯಲು ಹಲವು ಟಾಸ್ಕ್​ಗಳನ್ನು ನೀಡಲಾಗಿತ್ತು. ಆ ಟಾಸ್ಕ್​ಗಳಲ್ಲಿ ಗೆಲ್ಲುವ ನಾಲ್ಕು ಮಂದಿಗೆ ‘ಟಿಕೆಟ್ ಟು ಫಿನಾಲೆ’ ಟಾಸ್ಕ್​ನಲ್ಲಿ ಸ್ಪರ್ಧಿಸುವ ಅವಕಾಶ ಸಿಗುತ್ತಿತ್ತು. ಇದರಲ್ಲಿ ಹನುಮಂತ, ತ್ರಿವಿಕ್ರಮ್, ಭವ್ಯಾ ಗೌಡ ಹಾಗೂ ಮನೆಯ ಕ್ಯಾಪ್ಟನ್ ರಜತ್ ಅವರು ಅವಕಾಶ ಪಡೆದುಕೊಂಡರು. ಆದರೆ ಉಗ್ರಂ ಮಂಜು, ಗೌತಮಿ ಜಾದವ್, ಮೋಕ್ಷಿತಾ ಪೈ ಮತ್ತು ಧನರಾಜ್ ಅವರು ಹಿಂದುಳಿದರು.

ಉಗ್ರಂ ಮಂಜು ಅವರ ಬಗ್ಗೆ ವೀಕ್ಷಕರಿಗೆ ಬಹಳ ಭರವಸೆ ಇತ್ತು. ಯಾಕೆಂದರೆ ಅವರು ಆರಂಭದಲ್ಲಿ ಆ ರೀತಿಯ ಆಟ ಪ್ರದರ್ಶನ ಮಾಡಿದ್ದರು. ಆದರೆ ದಿನ ಕಳೆದಂತೆಲ್ಲ ಅವರ ಆಟ ಮಂಕಾಯಿತು. ಅವರ ಗಮನ ಸರಿಯಾಗಿ ಆಟದ ಮೇಲೆ ಇರಲೇ ಇಲ್ಲ. ಗೌತಮಿ ಜಾದವ್ ಜೊತೆ ಹೆಚ್ಚು ಆಪ್ತವಾಗಿದ್ದ ಅವರು ನಿರೀಕ್ಷಿತ ಪ್ರಮಾಣದಲ್ಲಿ ಟಾಸ್ಕ್​ಗಳನ್ನು ಗೆಲ್ಲಲು ಸಾಧ್ಯವಾಗಲೇ ಇಲ್ಲ.

103ನೇ ದಿನದಲ್ಲಿ ‘ಟಿಕೆಟ್​ ಟು ಫಿನಾಲೆ’ ಟಾಸ್ಕ್ ಆಡಲು ಆಯ್ಕೆಯಾದ ತ್ರಿವಿಕ್ರಮ್, ಭವ್ಯಾ ಗೌಡ, ಹನುಮಂತ ಮತ್ತು ರಜತ್ ಅವರ ವಿಟಿ ಪ್ರದರ್ಶನ ಮಾಡಲಾಯಿತು. ಆ ಎಲ್ಲರ ವಿಟಿಯಲ್ಲೂ ಉಗ್ರಂ ಮಂಜು ಅವರ ತುಣುಕುಗಳು ಇದ್ದವು. ಆದರೆ ಆ ನಾಲ್ಕು ಮಂದಿಗೆ ಸಮನಾಗಿ ನಿಂತುಕೊಳ್ಳಲು ಉಗ್ರಂ ಮಂಜುಗೆ ಆಗಿರಲಿಲ್ಲ. ಆ ವಿಚಾರದಲ್ಲಿ ಮಂಜುಗೆ ಬೇಸರ ಕಾಡಿತು. ಸೈಲೆಂಟ್​ ಆಗಿ ಕುಳಿತುಕೊಂಡು ಅವರು ಮುಖ ಸಣ್ಣಗೆ ಮಾಡಿಕೊಂಡರು.

ಇದನ್ನೂ ಓದಿ: ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ

ಗೌತಮಿ ಜಾದವ್ ಮತ್ತು ಉಗ್ರಂ ಮಂಜು ನಡುವೆ ಮೂಡಿದ ಸ್ನೇಹ ತಪ್ಪಲ್ಲ. ಆದರೆ ಆ ಸ್ನೇಹದ ಕಾರಣದಿಂದಾಗಿ ಅವರು ಆಟದ ಕಡೆಗೆ ಸರಿಯಾಗಿ ಗಮನ ನೀಡದೇ ಇರುವುದೇ ತಪ್ಪು. ಬೇರೆ ಸದಸ್ಯರ ಜೊತೆ ಕೂಡ ಅವರು ಸರಿಯಾಗಿ ಬೆರೆಯಲಿಲ್ಲ. ಇದರಿಂದಾಗಿ ಅವರ ಆಟಕ್ಕೆ ಅಡ್ಡಿ ಉಂಟಾಯಿತು. ಅಂತಿಮವಾಗಿ ಟಿಕೆಟ್​ ಟು ಫಿನಾಲೆ ಟಾಸ್ಕ್​ನಲ್ಲಿ ಭಾಗವಹಿಸುವ ಅವಕಾಶ ತಪ್ಪಿಹೋಯಿತು. ಮುಂದಿನ ಆಟದ ಬಗ್ಗೆ ಗಮನ ಹರಿಸಿ ಎಂದು ಮಂಜುಗೆ ಗೌತಮಿ ಅವರು ಬುದ್ಧಿಮಾತು ಹೇಳಿದ್ದಾರೆ. ಆದರೆ ಇನ್ನು ಉಳಿದಿರುವುದು ಕೆಲವೇ ದಿನಗಳ ಮಾತ್ರ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜಣ್ಣ ಪುತ್ರನ ಹತ್ಯೆ ಸಂಚಿನ ಬಗ್ಗೆ ಮಹಿಳೆ ವಿವರಣೆಯ ಸ್ಫೋಟಕ ಆಡಿಯೋ ಬಹಿರಂಗ
ರಾಜಣ್ಣ ಪುತ್ರನ ಹತ್ಯೆ ಸಂಚಿನ ಬಗ್ಗೆ ಮಹಿಳೆ ವಿವರಣೆಯ ಸ್ಫೋಟಕ ಆಡಿಯೋ ಬಹಿರಂಗ
ಹೊಸ ಪಕ್ಷ ಕಟ್ಟಲ್ಲ ಎಂದಿದ್ದ ಬಸನಗೌಡ ಯತ್ನಾಳ್ ಗೊಂದಲದಲ್ಲಿರೋದು ಸ್ಪಷ್ಟ
ಹೊಸ ಪಕ್ಷ ಕಟ್ಟಲ್ಲ ಎಂದಿದ್ದ ಬಸನಗೌಡ ಯತ್ನಾಳ್ ಗೊಂದಲದಲ್ಲಿರೋದು ಸ್ಪಷ್ಟ
ಕಚ್ಚಲೆಂದು ಬಂದ ಹಾವು, ಅದೇ ವೇಗದಲ್ಲಿ ವಾಪಸ್ ಹೋಗಿದ್ದೇಕೆ?
ಕಚ್ಚಲೆಂದು ಬಂದ ಹಾವು, ಅದೇ ವೇಗದಲ್ಲಿ ವಾಪಸ್ ಹೋಗಿದ್ದೇಕೆ?
ಹಂತಕರು ನೇಪಾಳಿ ಮಂಜನಿಗೆ ಅಪರಚಿತರಾಗಿರಲಿಲ್ಲ, ಅವರೇ ಊಟಕ್ಕೆ ಕರೆಸಿದ್ದರು
ಹಂತಕರು ನೇಪಾಳಿ ಮಂಜನಿಗೆ ಅಪರಚಿತರಾಗಿರಲಿಲ್ಲ, ಅವರೇ ಊಟಕ್ಕೆ ಕರೆಸಿದ್ದರು
ಫ್ಲೈಓವರ್​ನಿಂದ ಸರ್ವೀಸ್ ರಸ್ತೆಗೆ ಬಿದ್ದ ತೈಲ ಟ್ಯಾಂಕರ್, ಭಯಾನಕ ವಿಡಿಯೋ
ಫ್ಲೈಓವರ್​ನಿಂದ ಸರ್ವೀಸ್ ರಸ್ತೆಗೆ ಬಿದ್ದ ತೈಲ ಟ್ಯಾಂಕರ್, ಭಯಾನಕ ವಿಡಿಯೋ
ಮಂಗಳೂರಿನಲ್ಲಿ ರಂಜಾನ್: ಸಾಮೂಹಿಕ ಪ್ರಾರ್ಥನೆಯಲ್ಲಿ ಸ್ಪೀಕರ್ ಖಾದರ್ ಭಾಗಿ
ಮಂಗಳೂರಿನಲ್ಲಿ ರಂಜಾನ್: ಸಾಮೂಹಿಕ ಪ್ರಾರ್ಥನೆಯಲ್ಲಿ ಸ್ಪೀಕರ್ ಖಾದರ್ ಭಾಗಿ
ಮಸೀದಿ ಎದುರು ಮಹಿಳೆ-ಭದ್ರತಾ ಅಧಿಕಾರಿ ಪರಸ್ಪರ ಕಪಾಳಮೋಕ್ಷ
ಮಸೀದಿ ಎದುರು ಮಹಿಳೆ-ಭದ್ರತಾ ಅಧಿಕಾರಿ ಪರಸ್ಪರ ಕಪಾಳಮೋಕ್ಷ
ಇಂದು ದೇಶಾದ್ಯಂತ ರಂಜಾನ್ ಹಬ್ಬ ಆಚರಣೆ: 30 ದಿನಗಳ ಉಪವಾಸ ಅಂತ್ಯ
ಇಂದು ದೇಶಾದ್ಯಂತ ರಂಜಾನ್ ಹಬ್ಬ ಆಚರಣೆ: 30 ದಿನಗಳ ಉಪವಾಸ ಅಂತ್ಯ
ಯಾರಾದ್ರೂ ಸತ್ರಾ? ಪಾದಚಾರಿಗಳಿಗೆ ಗುದ್ದಿದ್ಮೇಲೆ ಕಾರು ಚಾಲಕ ಕೇಳಿದ್ದಿದು
ಯಾರಾದ್ರೂ ಸತ್ರಾ? ಪಾದಚಾರಿಗಳಿಗೆ ಗುದ್ದಿದ್ಮೇಲೆ ಕಾರು ಚಾಲಕ ಕೇಳಿದ್ದಿದು
ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಓಕುಳಿ ಉತ್ಸವ ಸಂಭ್ರಮ
ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಓಕುಳಿ ಉತ್ಸವ ಸಂಭ್ರಮ