ಹಾರ್ಟ್ ಮಾಡುವಾಗ ತನ್ನದೇ ಕೈ ಬಣ್ಣದ ಬಗ್ಗೆ ಹನುಮಂತ ಬೇಸರ; ಅದಿತಿ ಉತ್ತರಕ್ಕೆ ನಾಚಿ ನೀರಾದ ಸ್ಪರ್ಧಿ

ಫಿನಾಲೆ ಟಿಕೆಟ್​ ಪಡೆಯಲು ಬಿಗ್ ಬಾಸ್​ ಒಂದು ಟಾಸ್ಕ್ ನೀಡಿದ್ದರು. ಯಾರು ಅತಿ ಕಡಿಮೆ ಸಮಯ ತೆಗೆದುಕೊಂಡು ಈ ಟಾಸ್ಕ್ ನಿಭಾಯಿಸುತ್ತಾರೋ ಅವರಿಗೆ ಫಿನಾಲೆಗೆ ಎಂಟ್ರಿ ಸಿಗಲಿದೆ ಎಂದು ಘೋಷಿಸಲಾಗಿತ್ತು. ಮನೆಯಲ್ಲಿ ಇರುವ ಇನ್ನುಳಿದ 8 ಘಟಾನುಘಟಿ ಸ್ಪರ್ಧಿಗಳನ್ನೂ ಮೀರಿಸಿ ಹನುಮಂತ ಈ ಸಾಧನೆ ಮಾಡಿದ್ದಾರೆ. ಅವರಿಗೆ ಅದಿತಿ ಶುಭ ಹಾರೈಸಿದ್ದಾರೆ.

ಹಾರ್ಟ್ ಮಾಡುವಾಗ ತನ್ನದೇ ಕೈ ಬಣ್ಣದ ಬಗ್ಗೆ ಹನುಮಂತ ಬೇಸರ; ಅದಿತಿ ಉತ್ತರಕ್ಕೆ ನಾಚಿ ನೀರಾದ ಸ್ಪರ್ಧಿ
ಅದಿತಿ-ಹನುಮಂತ
Follow us
ರಾಜೇಶ್ ದುಗ್ಗುಮನೆ
|

Updated on: Jan 11, 2025 | 6:54 AM

ಬಿಗ್ ಬಾಸ್ ಮನೆಯಲ್ಲಿ ಹನುಮಂತನ ಪಾಲಿಗೆ ಫಿನಾಲೆ ದೂರದ ಬೆಟ್ಟವಲ್ಲ. ಆ ಬೆಟ್ಟವನ್ನು ಏರಿಯಾಗಿದೆ. ಫಿನಾಲೆ ಟಿಕೆಟ್ ಪಡೆದು ಡೈರೆಕ್ಟ್ ಆಗಿ ಕೊನೆಯ ವಾರಕ್ಕೆ ಹೋಗಿದ್ದಾರೆ. ಅವರಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ. ವಿಸೇಷ ಎಂದರೆ ಫಿನಾಲೆ ಟಿಕೆಟ್ ಪಡೆದವರನ್ನು ಅಭಿನಂದಿಸೋಕೆ ‘ಛೂ ಮಂತರ’ ಚಿತ್ರದ ಶರಣ್ ಹಾಗೂ ಅದಿತಿ ಪ್ರಭುದೇವ ಆಗಮಿಸಿದ್ದರು. ಇವರು ಹನುಮಂತಗೆ ಶುಭಾಶಯ ಕೋರಿದ್ದಾರೆ.

ಹಗ್ಗದಿಂದ ಮಾಡಿದ ದೊಡ್ಡ ಜಾಲದ ಮಾದರಿಯನ್ನು ಗಾರ್ಡನ್ ಏರಿಯಾದಲ್ಲಿ ನಿಲ್ಲಿಸಲಾಗಿತ್ತು. ಇದರ ಮೇಲೆ ವಿವಿಧ ಕೀ ಇರುತ್ತದೆ. ಈ ಕೀನ ತೆಗೆದುಕೊಂಡ ಸ್ಪರ್ಧಿ ಮರಳಿ ಬಂದು ಕೀ ಮೂಲಕ ಪೆಟ್ಟಿಗೆ ತೆಗೆಯಬೇಕು. ತೆಗೆದ ಬಳಿಕ ಆ ಬಾಕ್ಸ್​ನಲ್ಲಿರುವ ಬಾವುಟವನ್ನು ಹಿಡಿದು ಮತ್ತೆ ಹಗ್ಗದ ಜಾಲವನ್ನು ಏರಿ, ಅದರ ಮೇಲಿರುವ ಒಂದು ಹಲಗೆಯ ಮೇಲೆ ನಿಂತು ಬಾವುಟವನ್ನು ಅಲ್ಲಿರುವ ಪೈಪ್​ಗೆ ಸಿಕ್ಕಿಸಿ ‘ಬಿಗ್ ಬಾಸ್’ ಎಂದು ಹೇಳಬೇಕು.

ಈ ಟಾಸ್ಕ್​​ಗೆ ಭವ್ಯಾ ಹಾಗೂ ರಜತ್ ಮೂರು ನಿಮಿಷಕ್ಕೂ ಹೆಚ್ಚಿನ ಸಮಯ ತೆಗೆದುಕೊಂಡರು. ತ್ರಿವಿಕ್ರಂ ಅವರು ಎರಡು ನಿಮಿಷ ಇಪ್ಪತ್ತೊಬ್ಬಂತ್ತು ಸೆಕೆಡ್ ತೆಗೆದುಕೊಂಡರು. ಹನುಮಂತ ಅವರು ಎರಡು ನಿಮಿಷ ಇಪ್ಪತ್ತೇಳು ಸೆಕೆಂಡ್​ನಲ್ಲಿ ಟಾಸ್ಕ್ ಪೂರ್ಣಗೊಳಿಸಿ ಭೇಷ್ ಎನಿಸಿಕೊಂಡರು. ಈ ಮೂಲಕ ಟಿಕೆಟ್ ಟು ಫಿನಾಲೆ ಟಿಕೆಟ್​ನ ತಮ್ಮದಾಗಿಸಿಕೊಂಡರು.

ಇದನ್ನೂ ಓದಿ: ಬಿಗ್ ಬಾಸ್ ಫಿನಾಲೆಗೆ ಹನುಮಂತ ಎಂಟ್ರಿ; ಘಟಾನುಘಟಿಗಳೆಲ್ಲ ಗಪ್​ಚುಪ್​

ಈ ಟಿಕೆಟ್ ನೀಡೋಕೆ ಶರಣ್ ಹಾಗೂ ಅದಿತಿ ಬಂದಿದ್ದರು. ಟಿಕೆಟ್ ನೀಡಿದ ಬಳಿಕ ಹನುಮಂತ ಹಾಗೂ ಅದಿತಿ ಪ್ರತ್ಯೇಕವಾಗಿ ಹೋಗಿ ನಿಂತರು. ಈ ವೇಳೆ ಅದಿತಿ ಹನುಮಂತನ ಕೈ ಸಹಾಯದಿಂದ ಹಾರ್ಟ್ ಮಾಡಲು ಹೋದರು. ಆಗ ಹನುಮಂತಗೆ ಅದಿತಿ ಕೈ ಬಣ್ಣ ನೋಡಿ ಬೇಸರವಾಯಿತು. ‘ನನ್ನ ಕೈ ಕಪ್ಪಿದೆ’ ಎಂದು ಬೇಸರ ಹೊರಹಾಕಿದರು. ಆಗ ಇದಕ್ಕೆ ಉತ್ತರಿಸಿದ ಅದಿತಿ, ‘ಮನಸ್ಸು ಬೆಳ್ಳಗಿದೆ’ ಎಂದರು. ಇದರಿಂದ ಹನುಮಂತ ನಾಚಿ ನೀರಾದರು. ಈ ವಾರ ರಿಲೀಸ್ ಆದ ಹಾರರ್ ಸಿನಿಮಾ ‘ಛೂ ಮಂತರ್’ ಪ್ರಚಾರಕ್ಕಾಗಿ ಶರಣ್ ಹಾಗೂ ಅದಿತಿ ಬಿಗ್ ಬಾಸ್​ಗೆ ಬಂದಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ