AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀಲಿ ಚಿತ್ರತಾರೆಗೆ ಹಣ ಪ್ರಕರಣದಲ್ಲಿ ಡೊನಾಲ್ಡ್​ ಟ್ರಂಪ್​ ಅಪರಾಧಿ; ಯಾವುದೇ ಶಿಕ್ಷೆ ನೀಡದ ಕೋರ್ಟ್

ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ನೀಲಿ ಚಿತ್ರತಾರೆ ಸ್ಟಾರ್ಮಿ ಡೇನಿಯಲ್ಸ್​ಗೆ ಹಣ ನೀಡಿದ ಪ್ರಕರಣದಲ್ಲಿ ಅಪರಾಧಿ ಎಂದು ಕೋರ್ಟ್ ಹೇಳಿದೆ. ಆದರೆ, ಅವರು ಅಮೆರಿಕದ ಚುನಾಯಿತ ಅಧ್ಯಕ್ಷರಾಗಿರುವ ಹಿನ್ನೆಲೆಯಲ್ಲಿ ಯಾವುದೇ ಶಿಕ್ಷೆಯನ್ನು ವಿಧಿಸಲು ನ್ಯಾಯಾಧೀಶರು ನಿರಾಕರಿಸಿದ್ದಾರೆ. ಈ ಮೂಲದ ಡೊನಾಲ್ಡ್ ಟ್ರಂಪ್ ಅವರು ಕ್ರಿಮಿನಲ್ ಅಪರಾಧಕ್ಕಾಗಿ ದೋಷಿಯೆಂದು ಘೋಷಿತರಾದ ಅಮೆರಿಕದ ಮೊದಲ ಅಧ್ಯಕ್ಷರಾಗಿದ್ದಾರೆ.

ನೀಲಿ ಚಿತ್ರತಾರೆಗೆ ಹಣ ಪ್ರಕರಣದಲ್ಲಿ ಡೊನಾಲ್ಡ್​ ಟ್ರಂಪ್​ ಅಪರಾಧಿ; ಯಾವುದೇ ಶಿಕ್ಷೆ ನೀಡದ ಕೋರ್ಟ್
Donald Trump
ಸುಷ್ಮಾ ಚಕ್ರೆ
|

Updated on: Jan 10, 2025 | 10:32 PM

Share

ನ್ಯೂಯಾರ್ಕ್: ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ಡೊನಾಲ್ಡ್ ಟ್ರಂಪ್ ಅವರ ಮೇಲಿನ ನೀಲಿಚಿತ್ರ ತಾರೆ ಸ್ಟಾರ್ಮಿ ಡೇನಿಯಲ್ಸ್​ ಅವರಿಗೆ ಹಣ ನೀಡಿದ ಪ್ರಕರಣದಲ್ಲಿ ಇಂದು ದೋಷಿಯೆಂದು ಘೋಷಿತರಾಗಿದ್ದಾರೆ. ಆದರೆ, ಅವರನ್ನು ಕೋರ್ಟ್ ಯಾವುದೇ ಷರತ್ತುಗಳಿಲ್ಲದೆ ಬಿಡುಗಡೆ ಮಾಡಲಾಗಿದೆ. ಜನವರಿ 20ರಂದು ಎರಡನೇ ಬಾರಿಗೆ ಅಮೆರಿಕದ ಅಧ್ಯಕ್ಷರಾಗಿ ಶ್ವೇತಭವನಕ್ಕೆ ಪ್ರವೇಶಿಸಲು ಸಿದ್ಧರಾಗುತ್ತಿರುವ ಅವರಿಗೆ ಯಾವುದೇ ಜೈಲು ಶಿಕ್ಷೆ ಅಥವಾ ಪ್ರೊಬೇಷನ್ ಇರುವುದಿಲ್ಲ ಎಂದು ಕೋರ್ಟ್ ಹೇಳಿದೆ. ಹೀಗಾಗಿ, ತಮ್ಮ ಅಧಿಕಾರದ ಕಾರಣಕ್ಕಾಗಿ ಡೊನಾಲ್ಡ್​ ಟ್ರಂಪ್ ಶಿಕ್ಷೆಯಿಂದ ಬಚಾವಾಗಿದ್ದಾರೆ.

ಜನವರಿ 20ರಂದು ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿರುವ ಡೊನಾಲ್ಡ್​ ಟ್ರಂಪ್ ಕುರಿತಾಗಿ ಇಂದು ಹೊರಬೀಳುವ ತೀರ್ಪು ಬಹಳ ಮಹತ್ವ ಪಡೆದಿತ್ತು. ಅಧ್ಯಕ್ಷರಾಗಿ ಆಯ್ಕೆಯಾಗಿರುವುದರಿಂದ ಟ್ರಂಪ್​ಗೆ ಜೈಲು ಶಿಕ್ಷೆ ಅಥವಾ ದಂಡ ವಿಧಿಸುವ ಸಾಧ್ಯತೆಗಳು ಕಡಿಮೆಯಿದ್ದವು. ನಿರೀಕ್ಷೆಯಂತೆ ಇದೀಗ ಟ್ರಂಪ್​ಗೆ ಯಾವುದೇ ಶಿಕ್ಷೆ ವಿಧಿಸದೆ ಕೋರ್ಟ್ ತೀರ್ಪು ನೀಡಿದೆ.

ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ವಿರುದ್ಧ ನೀಲಿಚಿತ್ರ ತಾರೆಯರಿಂದ ‘ಹ್ಯಾಂಡ್ಸ್ ಆಫ್ ಮೈ ಪೋರ್ನ್’ ಅಭಿಯಾನ ಆರಂಭ

ಅಮೆರಿಕದ ಇತಿಹಾಸದಲ್ಲಿ ಇದುವರೆಗೂ ಈ ರೀತಿ ಮಾಜಿ ಅಧ್ಯಕ್ಷ ಅಥವಾ ಹಾಲಿ ಅಧ್ಯಕ್ಷರೊಬ್ಬರು ಕ್ರಿಮಿನಲ್ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಅಥವಾ ಅಪರಾಧಿಯೆಂದು ಘೋಷಿತರಾದ ಉದಾಹರಣೆಗಳಿಲ್ಲ.

2016ರ ಅಧ್ಯಕ್ಷೀಯ ಚುನಾವಣೆಗೂ ಮುಂಚಿತವಾಗಿ ನೀಲಿಚಿತ್ರ ತಾರೆ ಸ್ಟಾರ್ಮಿ ಡೇನಿಯಲ್ಸ್‌ಗೆ 1,30,000 ಡಾಲರ್ ಹಣವನ್ನು ರಹಸ್ಯವಾಗಿ ನೀಡಿದ್ದನ್ನು ಮುಚ್ಚಿಡಲು ವ್ಯವಹಾರಿಕ ದಾಖಲೆಗಳಲ್ಲಿ ಫೌಲ್​ ಪ್ಲೇ 34 ಗಂಭೀರ ಅಪರಾಧಗಳಲ್ಲಿ ಟ್ರಂಪ್​ ಅವರನ್ನು ದೋಷಿ ಎಂದು ಘೋಷಿಸಲಾಗಿತ್ತು. 2016ರ ಚುನಾವಣಾ ಪ್ರಚಾರದ ಅಂತಿಮ ದಿನಗಳಲ್ಲಿ ಟ್ರಂಪ್ ಅವರೊಂದಿಗಿನ ಲೈಂಗಿಕ ಸಂಬಂಧದ ಬಗ್ಗೆ ಎಲ್ಲೂ ಮಾತನಾಡದಿರಲು ನೀಲಿ ಚಿತ್ರ ತಾರೆಗೆ ಹಣ ನೀಡಲಾಗಿತ್ತು. ಮಾಡಿದ 34 ಅಪರಾಧ ಎಣಿಕೆಗಳ ಮೇಲೆ ಟ್ರಂಪ್ ಅವರನ್ನು ಕಳೆದ ಮೇ 30ರಂದು ಶಿಕ್ಷೆಗೆ ಗುರಿಪಡಿಸಲಾಯಿತು. ಶಿಕ್ಷೆಯ ಸಮಯದಲ್ಲಿ ದೈಹಿಕವಾಗಿ ಹಾಜರಾಗದ ಟ್ರಂಪ್ ದಕ್ಷಿಣ ಫ್ಲೋರಿಡಾದಿಂದ ವೀಡಿಯೊ ಕಾನ್ಫರೆನ್ಸ್​ ಮೂಲಕ ಕಾಣಿಸಿಕೊಂಡಿದ್ದರು.

ಟ್ರಂಪ್ ಅವರ ಮುಂಬರುವ ಅಧ್ಯಕ್ಷ ಸ್ಥಾನವನ್ನು ಗಣನೆಗೆ ತೆಗೆದುಕೊಂಡು ಅವರಿಗೆ ಶಿಕ್ಷೆಯನ್ನು ವಿಧಿಸದಿರುವ ಸಾಧ್ಯತೆಯಿದೆ ಎಂದು ಮರ್ಚನ್ ಮೊದಲೇ ಹೇಳಿದ್ದರು. ಪ್ರಾಸಿಕ್ಯೂಷನ್ ಮತ್ತು ಟ್ರಂಪ್ ಅವರ ರಕ್ಷಣಾ ತಂಡ ಎರಡೂ ಅದನ್ನೇ ಶಿಫಾರಸು ಮಾಡಿದ್ದವು.

ಇದನ್ನೂ ಓದಿ: ಡೊನಾಲ್ಡ್​ ಟ್ರಂಪ್​ ಹಾಗೂ ಮಸ್ಕ್​ರಿಂದ​ ಸಹಾಯ ಕೇಳಿದ್ದ ಉತ್ತರ ಪ್ರದೇಶ ಮೂಲದ ಟೆಕ್ಕಿ ಅತುಲ್ ಸುಭಾಷ್

ಈ ನಿರ್ಧಾರವು ತೀವ್ರ ಚರ್ಚೆಗೆ ನಾಂದಿ ಹಾಡಿದೆ. ವಿಮರ್ಶಕರು ಇದು ಹೊಣೆಗಾರಿಕೆಯನ್ನು ದುರ್ಬಲಗೊಳಿಸುತ್ತದೆ ಎಂದು ಹೇಳಿದರೆ, ಬೆಂಬಲಿಗರು ಇದನ್ನು ಕಾನೂನು ಅಡೆತಡೆಗಳ ಹೊರತಾಗಿಯೂ ಮುನ್ನಡೆಸುವ ಟ್ರಂಪ್ ಅವರ ಸಾಮರ್ಥ್ಯದ ಸಂಕೇತವೆಂದು ಸಂಭ್ರಮಿಸಿದ್ದಾರೆ. ಟ್ರಂಪ್ ಶ್ವೇತಭವನಕ್ಕೆ ಮರಳಲು ಸಿದ್ಧರಾಗುತ್ತಿದ್ದಂತೆ ಅವರ ಶಿಕ್ಷೆ ಮತ್ತು ವಿಚಾರಣೆಯ ಪರಿಣಾಮಗಳು ರಾಜಕೀಯವಾಗಿ ಮತ್ತು ಕಾನೂನುಬದ್ಧವಾಗಿ ವಿವಾದಾತ್ಮಕವಾಗಿ ಉಳಿಯುವ ಸಾಧ್ಯತೆಯಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಜೈಲಿನಲ್ಲಿ ಇರುವ ಕೈದಿಗೆ ಹಾಡುವ ಅವಕಾಶ ನೀಡಿದ ಕೆ. ಕಲ್ಯಾಣ್
ಜೈಲಿನಲ್ಲಿ ಇರುವ ಕೈದಿಗೆ ಹಾಡುವ ಅವಕಾಶ ನೀಡಿದ ಕೆ. ಕಲ್ಯಾಣ್
ಮಚ್ಚಿನೊಂದಿಗೆ ಆರೋಪಿ ನ್ಯಾಯಾಲಯ ಪ್ರವೇಶಿಸಿದ್ದು ಪೊಲೀಸರ ಕರ್ತವ್ಯಲೋಪ
ಮಚ್ಚಿನೊಂದಿಗೆ ಆರೋಪಿ ನ್ಯಾಯಾಲಯ ಪ್ರವೇಶಿಸಿದ್ದು ಪೊಲೀಸರ ಕರ್ತವ್ಯಲೋಪ
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬಲಿಪಡೆದ ಬಿಎಂಟಿಸಿ ಬಸ್
ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬಲಿಪಡೆದ ಬಿಎಂಟಿಸಿ ಬಸ್