ಡೊನಾಲ್ಡ್​ ಟ್ರಂಪ್​ ಹಾಗೂ ಮಸ್ಕ್​ರಿಂದ​ ಸಹಾಯ ಕೇಳಿದ್ದ ಬೆಂಗಳೂರು ಟೆಕ್ಕಿ

ಉತ್ತರ ಪ್ರದೇಶ ಮೂಲದ ಟೆಕ್ಕಿ ಅತುಲ್ ಸುಭಾಷ್​ ಎಂಬುವವರು ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. 24 ಪುಟಗಳ ಡೆತ್​ ನೋಟ್ ಒಂದು ವಿಡಿಯೋವನ್ನು ಮಾಡಿಟ್ಟು ಸಾವನ್ನಪ್ಪಿದ್ದಾರೆ. ಅವರ ಡೆತ್​ನೋಟ್​ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಹಾಗೂ ಎಲಾನ್ ಮಸ್ಕ್​ ಬಳಿ ಸಹಾಯ ಕೇಳಿದ್ದಾರೆ.

ಡೊನಾಲ್ಡ್​ ಟ್ರಂಪ್​ ಹಾಗೂ ಮಸ್ಕ್​ರಿಂದ​ ಸಹಾಯ ಕೇಳಿದ್ದ ಬೆಂಗಳೂರು ಟೆಕ್ಕಿ
ಟೆಕ್ಕಿ
Follow us
ನಯನಾ ರಾಜೀವ್
|

Updated on: Dec 11, 2024 | 10:43 AM

ಪತ್ನಿಯ ಕಿರುಕುಳದಿಂದ ಬೇಸತ್ತು  ಉತ್ತರ ಪ್ರದೇಶ ಮೂಲದ ಟೆಕ್ಕಿ ಅತುಲ್ ಸುಭಾಷ್​ ಎಂಬುವವರು ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. 24 ಪುಟಗಳ ಡೆತ್​ ನೋಟ್ ಒಂದು ವಿಡಿಯೋವನ್ನು ಮಾಡಿಟ್ಟು ಸಾವನ್ನಪ್ಪಿದ್ದಾರೆ. ಅವರ ಡೆತ್​ನೋಟ್​ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಹಾಗೂ ಎಲಾನ್ ಮಸ್ಕ್​ ಬಳಿ ಸಹಾಯ ಕೇಳಿದ್ದಾರೆ.

ತನ್ನ ಪತ್ನಿ ನಿಖಿತಾ ಹಾಗೂ ಆಕೆಯ ಕುಟುಂಬದವರು ಚಿತ್ರಹಿಂಸೆ ನೀಡುತ್ತಿದ್ದರು, ನನ್ನದೇನೂ ತಪ್ಪಿಲ್ಲದಿದ್ದರೂ ತನ್ನ ಮೇಲೆ 9 ಪ್ರಕರಣಗಳನ್ನು ದಾಖಲಿಸಿದ್ದರು. ಆರು ಪ್ರಕರಣಗಳು ಕೆಳ ನ್ಯಾಯಾಲಯದಲ್ಲಿದ್ದರೆ ಮೂರು ಪ್ರಕರಣಗಳು ಹೈಕೋರ್ಟ್​ನಲ್ಲಿವೆ. ಒಂದು ಬಾರಿ ಒಂದು ಪ್ರಕರಣವನ್ನು ವಾಪಸ್ ಪಡೆದಿದ್ದಳು ಆದರೆ ಕೊನೆಗೆ ಅದರ ಬದಲು ಮತ್ತೊಂದು ಪ್ರಕರಣವನ್ನು ದಾಖಲಿಸಿದ್ದಳು ಎನ್ನುವ ವಿಚಾರವನ್ನು ಅವರು ಬರೆದಿದ್ದಾರೆ.

ಇರುವುದು ಬೆಂಗಳೂರಿನಲ್ಲಿ ಆದರೆ 9 ಪ್ರಕರಣಗಳ ವಿಚಾರಣೆಗಾಗಿ ಪದೇ ಪದೇ ಉತ್ತರ ಪ್ರದೇಶಕ್ಕೆ ಹೋಗಬೇಕಿತ್ತು, ಜತೆಗೆ ಹಣದ ಬೇಡಿಕೆಯನ್ನು ಪೂರೈಸಿ ನನಗೆ ಸಾಕಾಗಿದೆ. ನಾನು ದುಡಿದಿರುವುದೆಲ್ಲಾ ಹಣವನ್ನು ಶತ್ರುಗಳನ್ನು ಸಾಕಲು ಕೊಡಬೇಕಾಗುತ್ತಿತ್ತು, ಅದರಿಂದ ಶತ್ರುಗಳು ಬಲವಾಗುತ್ತಾ ಹೋಗುತ್ತಿದ್ದಾರೆ ಎಂದು ಬರೆದಿದ್ದಾರೆ.

ಮತ್ತಷ್ಟು ಓದಿ: ಹೆಂಡತಿ ಕಾಟದಿಂದ ಬೆಂಗಳೂರಿನ ಇಂಜಿನಿಯರ್ ಆತ್ಮಹತ್ಯೆ; ಟ್ವಿಟ್ಟರ್​ನಲ್ಲಿ ಟ್ರೆಂಡ್ ಆಯ್ತು ಮೆನ್​ಟೂ ಹ್ಯಾಶ್​ಟ್ಯಾಗ್

ಭಾರತದಲ್ಲಿ ನರಮೇಧ ನಡೆಯುತ್ತಿದೆ, ಕೋಟಿಗಟ್ಟಲೆ ಜನರನ್ನು ರಕ್ಷಿಸಿ ವಾಕ್ ಸ್ವಾತಂತ್ರ್ಯವನ್ನು ಮರುಸ್ಥಾಪಿಸಿ ಎಂದು ಟ್ರಂಪ್ ಹಾಗೂ ಎಲಾನ್ ಮಸ್ಕ್​ಗೆ ಮನವಿ ಮಾಡಿದ್ದಾರೆ.

90 ನಿಮಿಷಗಳ ವಿಡಿಯೋವನ್ನು ಬಿಡುಗಡೆ ಮಾಡಲಾಗಿದೆ. ಸುಭಾಷ್ ಡೆಪ್ಯೂಟಿ ಜನರಲ್ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಟೆಕ್ಕಿ ಅವರು ತನ್ನ ಸಹೋದ್ಯೋಗಿಗಳು ಹಾಗೂ ಹಲವರಿಗೆ ಇ-ಮೇಲ್ ಹಾಗೂ ವಾಟ್ಸ್​ಆ್ಯಪ್ ವಿಡಿಯೋವನ್ನು ಕಳುಹಿಸಿದ್ದಾರೆ.

ಶವ ನೋಡುವುದೂ ಬೇಡ

ತನ್ನ ಮಗನನ್ನು ಪೋಷಕರಿಗೆ ಒಪ್ಪಿಸಲು ಕೇಳಿಕೊಂಡಿದ್ದು, ಯಾವುದೇ ಕಾರಣಕ್ಕೂ ತನ್ನ ಪತ್ನಿ ಹಾಗೂ ಆಕೆಯ ಮನೆಯವರು ತನ್ನ ಶವವನ್ನೂ ನೋಡಬಾರದು ಎಂದು ಬರೆದಿದ್ದಾರೆ.

ಗಿಫ್ಟ್​ ಬಾಕ್ಸ್​

ಗಿಫ್ಟ್ ಬಾಕ್ಸ್ಅನ್ನು ಮನೆಯಲ್ಲಿಟ್ಟು, ತನ್ನ ನಾಲ್ಕು ವರ್ಷದ ಪುತ್ರನಿಗೆ ತಲುಪಿಸುವಂತೆ ಉಲ್ಲೇಖಿಸಿದ್ದರು. ನಂತರ ‘JUSTICE IS DUE’ ಎಂಬ ಬರಹವಿರುವ ಪೋಸ್ಟರ್, ಹಾಗೂ ಪೂರ್ಣಗೊಳಿಸಿರುವ ತನ್ನ ಕೆಲಸಗಳ ಪಟ್ಟಿಯನ್ನ ಗೋಡೆಗೆ ಅಂಟಿಸಿ ಅತುಲ್​ ಸುಭಾಷ್​ ತನ್ನ ಬದುಕಿಗೆ ಕೊನೆಹಾಡಿದ್ದರು.

ನ್ಯಾಯ ಸಿಗುವವರೆಗೂ ಚಿತಾಭಸ್ಮ ನೀರಿನಲ್ಲಿ ಬಿಡಬೇಡಿ ತನಗೆ ನ್ಯಾಯ ಸಿಗುವವರೆಗೂ ಅವರ ಚಿತಾಭಸ್ಮವನ್ನು ನೀರಿನಲ್ಲಿ ಬಿಡುವುದು ಬೇಡ ಎಂದು ಸುಭಾಷ್ ಬರೆದಿದ್ದರು. ನ್ಯಾಯ ಕೊಡಲು ಸಾಧ್ಯವಾಗದಿದ್ದರೆ ನನ್ನ ಚಿತಾಭಸ್ಮವನ್ನು ನ್ಯಾಯಾಲಯದ ಮುಂದೆ ಚರಂಡಿಗೆ ಎಸೆಯಬೇಕು, ಈ ದೇಶದಲ್ಲಿ ಮನುಷ್ಯನ ಜೀವನವು ಗಟಾರವಾಗಿದೆ ಎಂದು ನೋವು ತೋಡಿಕೊಂಡಿದ್ದರು.

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Video: ಗುರುಗ್ರಾಮದ ಕ್ಲಬ್ ಹೊರಗೆ ಅವಳಿ ಬಾಂಬ್ ಸ್ಪೋಟ
Video: ಗುರುಗ್ರಾಮದ ಕ್ಲಬ್ ಹೊರಗೆ ಅವಳಿ ಬಾಂಬ್ ಸ್ಪೋಟ
‘ಮೋಕ್ಷಿತಾ ಹೇಳಿದ್ದು ಸರಿ’; ಮಂಜು ಜೊತೆಗಿನ ಗೆಳೆತನ ಕಟ್ ಮಾಡಿದ ಗೌತಮಿ
‘ಮೋಕ್ಷಿತಾ ಹೇಳಿದ್ದು ಸರಿ’; ಮಂಜು ಜೊತೆಗಿನ ಗೆಳೆತನ ಕಟ್ ಮಾಡಿದ ಗೌತಮಿ
Daily Devotional: ಹನುಮ ಜಯಂತಿ ಆಚರಣೆಯ ಹಿಂದಿನ ಮಹತ್ವ ತಿಳಿಯಿರಿ
Daily Devotional: ಹನುಮ ಜಯಂತಿ ಆಚರಣೆಯ ಹಿಂದಿನ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯ ಮಹಿಳೆಯರಿಗೆ ಇಂದು ಉದ್ಯೋಗ ಯೋಗವಿದೆ
Daily Horoscope: ಈ ರಾಶಿಯ ಮಹಿಳೆಯರಿಗೆ ಇಂದು ಉದ್ಯೋಗ ಯೋಗವಿದೆ
ಚೆನ್ನೈ- ಬೆಂಗಳೂರು ಹೆದ್ದಾರಿಯಲ್ಲಿ ಟ್ರಕ್ ಡಿಕ್ಕಿಯಾಗಿ ಪಲ್ಟಿ ಹೊಡೆದ ಬಸ್
ಚೆನ್ನೈ- ಬೆಂಗಳೂರು ಹೆದ್ದಾರಿಯಲ್ಲಿ ಟ್ರಕ್ ಡಿಕ್ಕಿಯಾಗಿ ಪಲ್ಟಿ ಹೊಡೆದ ಬಸ್
ದೆಹಲಿ ಆಟೋ ಚಾಲಕರ ಮನೆಯಲ್ಲಿ ಊಟ ಮಾಡಿದ ಅರವಿಂದ್ ಕೇಜ್ರಿವಾಲ್ ದಂಪತಿ
ದೆಹಲಿ ಆಟೋ ಚಾಲಕರ ಮನೆಯಲ್ಲಿ ಊಟ ಮಾಡಿದ ಅರವಿಂದ್ ಕೇಜ್ರಿವಾಲ್ ದಂಪತಿ
ಎಡಿಜಿಪಿ, ಪೊಲೀಸ್ ಕಮೀಶನರ್​ರನ್ನು ಕೂಡಲೇ ಸಸ್ಪೆಂಡ್ ಮಾಡಬೇಕು: ಸ್ವಾಮೀಜಿ
ಎಡಿಜಿಪಿ, ಪೊಲೀಸ್ ಕಮೀಶನರ್​ರನ್ನು ಕೂಡಲೇ ಸಸ್ಪೆಂಡ್ ಮಾಡಬೇಕು: ಸ್ವಾಮೀಜಿ
ಸಿದ್ದರಾಮಯ್ಯ ಸರ್ಕಾರಕ್ಕೆ ಧಿಕ್ಕಾರ ಎಂದು ಕೂಗಿದ ಪ್ರತಿಭಟನೆಕಾರರು
ಸಿದ್ದರಾಮಯ್ಯ ಸರ್ಕಾರಕ್ಕೆ ಧಿಕ್ಕಾರ ಎಂದು ಕೂಗಿದ ಪ್ರತಿಭಟನೆಕಾರರು
ನನಗೆ ಏಟು ಬಿದಿದ್ದರೆ ಇಡೀ ರಾಜ್ಯಕ್ಕೆ ಬೆಂಕಿ ಬೀಳುತಿತ್ತು: ಸ್ಚಾಮೀಜಿ
ನನಗೆ ಏಟು ಬಿದಿದ್ದರೆ ಇಡೀ ರಾಜ್ಯಕ್ಕೆ ಬೆಂಕಿ ಬೀಳುತಿತ್ತು: ಸ್ಚಾಮೀಜಿ
ಮನವಿ ಸ್ವೀಕರಿಸಲು ಸಿಎಂ ಸಿದ್ದರಾಮಯ್ಯ ಬರಲಿಲ್ಲ ಎಂದ ಪ್ರತಿಭಟನಾಕಾರರು
ಮನವಿ ಸ್ವೀಕರಿಸಲು ಸಿಎಂ ಸಿದ್ದರಾಮಯ್ಯ ಬರಲಿಲ್ಲ ಎಂದ ಪ್ರತಿಭಟನಾಕಾರರು