Pensioners Paradise ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರು ಗುಣಮುಖರಾಗುತ್ತಿಲ್ಲ ಯಾಕೆ?
ಬೆಂಗಳೂರು: ನಗರದಲ್ಲಿ ಕಳೆದ ಮೂರು ದಿನಗಳಿಂದ ದಾಖಲೆ ಪ್ರಮಾಣದಲ್ಲಿ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಸಿಲಿಕಾನ್ ಸಿಟಿ ಜನ ದೊಡ್ಡ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಕೊರೊನಾ ದೃಢಪಟ್ಟರು ಸೋಂಕಿತರಿಗೆ ಚಿಕಿತ್ಸೆ ನೀಡಲು ಬೆಡ್ಗಳು ಸಿಗುತ್ತಿಲ್ಲ. ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಜೊತೆಗೆ ಆಘಾತವೆಂಬಂತೆ ಬೆಂಗಳೂರು ಹೊರತುಪಡಿಸಿ, ಜಿಲ್ಲಾ ಭಾಗಗಳಲ್ಲಿ ಜನ ಕೊರೊನಾದಿಂದ ಬೇಗನೆ ಚೇತರಿಕೆ ಕಾಣುತ್ತಿದ್ದಾರೆ. ಹಾಗಿದ್ರೆ ರೋಗ ನಿರೋಧಕ ಶಕ್ತಿ ಕಡಿಮೆ ಇರೋರು ಬೇಗ ಗುಣಮುಖರಾಗ್ತಿಲ್ವಾ? ಎಂಬ ಪ್ರಶ್ನೆ ಎದ್ದಿದೆ. ರೋಗಿಗಳು ಬೇಗ ಗುಣಮುಖರಾಗ್ತಿಲ್ಲ ಅನ್ನೋಕ್ಕೆ ಸಿಕ್ತು ಐದು ರೀಸನ್ಸ್ […]
ಬೆಂಗಳೂರು: ನಗರದಲ್ಲಿ ಕಳೆದ ಮೂರು ದಿನಗಳಿಂದ ದಾಖಲೆ ಪ್ರಮಾಣದಲ್ಲಿ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಸಿಲಿಕಾನ್ ಸಿಟಿ ಜನ ದೊಡ್ಡ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಕೊರೊನಾ ದೃಢಪಟ್ಟರು ಸೋಂಕಿತರಿಗೆ ಚಿಕಿತ್ಸೆ ನೀಡಲು ಬೆಡ್ಗಳು ಸಿಗುತ್ತಿಲ್ಲ. ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಜೊತೆಗೆ ಆಘಾತವೆಂಬಂತೆ ಬೆಂಗಳೂರು ಹೊರತುಪಡಿಸಿ, ಜಿಲ್ಲಾ ಭಾಗಗಳಲ್ಲಿ ಜನ ಕೊರೊನಾದಿಂದ ಬೇಗನೆ ಚೇತರಿಕೆ ಕಾಣುತ್ತಿದ್ದಾರೆ. ಹಾಗಿದ್ರೆ ರೋಗ ನಿರೋಧಕ ಶಕ್ತಿ ಕಡಿಮೆ ಇರೋರು ಬೇಗ ಗುಣಮುಖರಾಗ್ತಿಲ್ವಾ? ಎಂಬ ಪ್ರಶ್ನೆ ಎದ್ದಿದೆ.
ರೋಗಿಗಳು ಬೇಗ ಗುಣಮುಖರಾಗ್ತಿಲ್ಲ ಅನ್ನೋಕ್ಕೆ ಸಿಕ್ತು ಐದು ರೀಸನ್ಸ್ ಕಾರಣ: 1 ಗುಣಮುಖರಾಗ್ತಿರುವ ರೋಗಿಯ ಪಕ್ಕದಲ್ಲೇ ಹೊಸ ರೋಗಿಯನ್ನ ಅಡ್ಮಿಟ್ ಮಾಡಲಾಗ್ತಿದೆ. ವಾರವಿಡೀ ಒಂದೇ ಬೆಡ್ ಶೀಟ್ ತಲೆದಿಂಬು ಕೊಡ್ತಿದ್ದಾರಂತೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಗುಣಮುಖರಾಗ್ತಿದ್ದ ರೋಗಿಯ ಪಕ್ಕಾ ಹೊಸ ರೋಗಿ ಅಡ್ಮಿಟ್ ಮಾಡ್ತಿರೋದ್ರಿಂದ ಹಳೆ ಸೋಂಕಿತರು ಬೇಗ ಗುಣಮುಖರಾಗ್ತಿಲ್ಲ ಅನ್ನೋ ಆರೋಪ ಕೇಳಿ ಬಂದಿದೆ.
ಕಾರಣ: 2 SARI ಹಾಗೂ ILI ಕೇಸ್ಗಳಿಗೆ ತುಂಬಾ ದಿನಗಳ ಚಿಕಿತ್ಸೆಯ ಅವಶ್ಯಕತೆ ಇದೆ. SARI ಕೇಸ್ಗಳಿಗೆ ಉಸಿರಾಟದ ತೊಂದರೆ ಹೆಚ್ಚಾಗಿ ಕಾಡ್ತಿದ್ದು, ಅಂಥಹವರಿಗೆ ಆಕ್ಸಿಜನ್ ಅನಿವಾರ್ಯವಾಗಿರುತ್ತೆ. ಇಂಥಹ ಕೇಸ್ಗಳು ಗುಣಮುಖರಾಗಲು ಕನಿಷ್ಠ 10 ರಿಂದ 14 ದಿನಗಳು ಬೇಕೆಬೇಕು. ಇನ್ನು ILI ಕೇಸ್ಗಳು ತೀವ್ರ ಜ್ವರದಿಂದ ಬಳಲುತ್ತಿರುತ್ತಾರೆ. ಅಂಥಹವರಿಗೂ 10 ಕ್ಕೂ ಹೆಚ್ಚು ದಿನಗಳ ಚಿಕಿತ್ಸೆ ಅವಶ್ಯಕತೆ ಇದೆ. ಹೀಗಾಗಿಯೇ ಇಂಥಹ ರೋಗಿಗಳು ಬೇಗ ಗುಣಮುಖರಾಗಿ ಡಿಸ್ಚಾರ್ಜ್ ಆಗುವುದು ತಡವಾಗ್ತಿದೆ. ಬೆಂಗಳೂರಿನಲ್ಲಿ ಇಂಥಹ ಕೇಸ್ಗಳೇ ಹೆಚ್ಚಿದ್ದು ಬೇಗ ಗುಣಮುಖರಾಗೋಕೆ ತಡವಾಗ್ತಿದೆ.
ಕಾರಣ: 3 ಬೆಂಗಳೂರಿನಲ್ಲಿ ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ಹೆಚ್ಚಾಗಿ ಕೊರೊನಾಗೆ ತುತ್ತಾಗ್ತಿದ್ದಾರೆ. ಅದರಲ್ಲೂ ಬಿಪಿ, ಶುಗರ್, ಕ್ಯಾನ್ಸರ್, ಲಿವರ್, ಕಿಡ್ನಿ ಪ್ರಾಬ್ಲಂ ಇರುವವರು ಹೆಚ್ಚು. ಇಂತವರಿಗೆ ಮೊದಲಿಗೆ ಬಿಪಿ, ಶುಗರ್ ಹತೋಟಿಗೆ ತಂದು ಕೊರೊನಾಗೆ ಚಿಕಿತ್ಸೆ ಮಾಡಬೇಕಾಗುತ್ತೆ. ಹೀಗಾಗಿಯೇ ಇಂಥಹ ರೋಗಿಗಳು ಕೂಡ ಬೇಗ ಗುಣಮುಖರಾಗ್ತಿಲ್ಲ.
ಕಾರಣ: 4 ಬೆಂಗಳೂರಿನಲ್ಲಿ ಬಹುತೇಕ ಮಂದಿ ಶ್ವಾಸಕೋಶ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಬೆಂಗಳೂರಿನ ಮಾಲಿನ್ಯ ಪ್ರಮಾಣದಿಂದ ಶೇಖಡಾ 48 ಪರ್ಸೆಂಟ್ ಮಂದಿ ಅಲರ್ಜಿ ಅಸ್ತಮಾದಿಂದ ಬಳಲುತ್ತಿದ್ದಾರೆ. ಇಂತವರಲ್ಲಿ ಕೊರೊನಾ ಕಾಣಿಸಿಕೊಂಡ್ರೆ ಬೇಗ ಗುಣಮುಖರಾಗೋದು ಕಷ್ಟ. ಮಾಲಿನ್ಯ ಪ್ರಮಾಣದಿಂದ ಅಲರ್ಜಿ ಅಸ್ತಮಾ ರೋಗಿಗಳು ಹೆಚ್ಚಾಗಿದ್ದು ಈ ತಿಂಗಳ ಅಂತ್ಯಕ್ಕೆ ಇಂಥಹವರು ಕೊರೊನಾಗೆ ಹೆಚ್ಚು ತುತ್ತಾಗೋ ಭೀತಿ ಶುರುವಾಗಿದೆ.
ಕಾರಣ: 5 ವಯಸ್ಸಾದವರೇ ಬೆಂಗಳೂರಿನಲ್ಲಿ ಹೆಚ್ಚು ಕೊರೊನಾಗೆ ತುತ್ತಾಗ್ತಿದ್ದಾರೆ. ಏಕೆಂದರೆ ಅವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತೆ. ಅವರು ಚಿಕಿತ್ಸೆಗೆ ಬೇಗ ಸ್ಪಂದಿಸೋದು ಕಷ್ಟ. ಹೀಗಾಗಿ ರೋಗ ನಿರೋಧಕ ಶಕ್ತಿ ಕಡಿಮೆ ಇರೋರು ಬೇಗ ಗುಣಮುಖರಾಗ್ತಿಲ್ಲ. ಹಳೆ ಸೋಂಕಿತರು ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೇಗ ಗುಣಮುಖರಾಗುತ್ತಿಲ್ಲ. ಹೀಗಾಗಿ ಹೊಸ ಸೋಂಕಿತರಿಗೆ ಬೆಡ್ ಸಿಗೋದು ಕಷ್ಟವಾಗುತ್ತಿದೆ.