ಸರ್ಕಾರದ ಆತುರದ ನಿರ್ಧಾರಕ್ಕೆ ಬೆಂ.ವಿ.ವಿ. ವಿದ್ಯಾರ್ಥಿನಿಯರು ಕಂಗಾಲು! ಏನಾಯ್ತು?
ಬೆಂಗಳೂರು: ಸರ್ಕಾರದ ಆತುರದ ನಿರ್ಧಾರಕ್ಕೆ ಬೆಂಗಳೂರು ಯೂನಿವರ್ಸಿಟಿ ವಿದ್ಯಾರ್ಥಿನಿಯರು ಕಂಗಾಲಾಗಿದ್ದಾರೆ. ಕೊರೊನಾ ಬಗ್ಗೆ ಮುಂಜಾಗ್ರತೆ ವಹಿಸದೇ ಈಗ ಇದ್ದಕ್ಕಿದ್ದಂತೆ ಹಾಸ್ಟೆಲ್ ಖಾಲಿ ಮಾಡುವಂತೆ ಸೂಚನೆ ನೀಡಲಾಗಿದೆ. ಬೆಂಗಳೂರು ವಿವಿ ವಿದ್ಯಾರ್ಥಿನಿಯರ ಹಾಸ್ಟೆಲ್ನ್ನ ಖಾಲಿ ಮಾಡಿ ಕೊವಿಡ್ ಆಸ್ಪತ್ರೆ ಮಾಡೋಕೆ ಸರ್ಕಾರ ಮುಂದಾಗಿದೆ. ಹೀಗಾಗಿ ಹಾಸ್ಟೆಲ್ ಖಾಲಿ ಮಾಡುವಂತೆ ವಿದ್ಯಾರ್ಥಿನಿಯರಿಗೆ ಸೂಚನೆ ನೀಡಲಾಗಿದೆ. ಆದ್ರೆ 550 ವಿದ್ಯಾರ್ಥಿನಿಯರ ಲಗೇಜ್, ಲ್ಯಾಪ್ ಟಾಪ್, ಮಾರ್ಕ್ಸ್ ಕಾರ್ಡ್ ಸೇರಿದಂತೆ ಹಲವು ವಸ್ತುಗಳು ವಸತಿ ನಿಲಯದಲ್ಲಿವೆ. ಈಗ ಎಲ್ಲರೂ ಊರಿನಲ್ಲಿದ್ದಾರೆ. ಅವುಗಳನ್ನ ತೆಗದುಕೊಂಡು […]
ಬೆಂಗಳೂರು: ಸರ್ಕಾರದ ಆತುರದ ನಿರ್ಧಾರಕ್ಕೆ ಬೆಂಗಳೂರು ಯೂನಿವರ್ಸಿಟಿ ವಿದ್ಯಾರ್ಥಿನಿಯರು ಕಂಗಾಲಾಗಿದ್ದಾರೆ. ಕೊರೊನಾ ಬಗ್ಗೆ ಮುಂಜಾಗ್ರತೆ ವಹಿಸದೇ ಈಗ ಇದ್ದಕ್ಕಿದ್ದಂತೆ ಹಾಸ್ಟೆಲ್ ಖಾಲಿ ಮಾಡುವಂತೆ ಸೂಚನೆ ನೀಡಲಾಗಿದೆ.
ಬೆಂಗಳೂರು ವಿವಿ ವಿದ್ಯಾರ್ಥಿನಿಯರ ಹಾಸ್ಟೆಲ್ನ್ನ ಖಾಲಿ ಮಾಡಿ ಕೊವಿಡ್ ಆಸ್ಪತ್ರೆ ಮಾಡೋಕೆ ಸರ್ಕಾರ ಮುಂದಾಗಿದೆ. ಹೀಗಾಗಿ ಹಾಸ್ಟೆಲ್ ಖಾಲಿ ಮಾಡುವಂತೆ ವಿದ್ಯಾರ್ಥಿನಿಯರಿಗೆ ಸೂಚನೆ ನೀಡಲಾಗಿದೆ. ಆದ್ರೆ 550 ವಿದ್ಯಾರ್ಥಿನಿಯರ ಲಗೇಜ್, ಲ್ಯಾಪ್ ಟಾಪ್, ಮಾರ್ಕ್ಸ್ ಕಾರ್ಡ್ ಸೇರಿದಂತೆ ಹಲವು ವಸ್ತುಗಳು ವಸತಿ ನಿಲಯದಲ್ಲಿವೆ.
ಈಗ ಎಲ್ಲರೂ ಊರಿನಲ್ಲಿದ್ದಾರೆ. ಅವುಗಳನ್ನ ತೆಗದುಕೊಂಡು ಹೋಗೋದು ಹೇಗೆ? ಹೀಗಾಗಿ ವಿದ್ಯಾರ್ಥಿನಿಯರು ಹಾಗೂ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರಕ್ಕೆ ಬೇರೆ ಸ್ಥಳ ಸಿಗ್ತಿಲ್ವಾ. ಇಷ್ಟೊಂದು ಅನಿವಾರ್ಯತೆ ಇದೆಯಾ ಅಂತ ಆಕ್ರೋಶ ಹೊರಹಾಕಿದ್ದಾರೆ.
ಜ್ಞಾನ ಭಾರತಿ ಆವರಣದಲ್ಲಿರೋ ಎಸ್.ಸಿ/ಸ್.ಟಿ ಹಾಸ್ಟೆಲ್ ಖಾಲಿ ಮಾಡಿಸಲಾಗುತ್ತಿದೆ. ಸದ್ಯ ಹಾಸ್ಟೆಲ್ನಲ್ಲಿ ಉಳಿದುಕೊಂಡಿರುವ ವಿದ್ಯಾರ್ಥಿನಿಯರು ಇದ್ದಕ್ಕಿದ್ದಂತೆ ಖಾಲಿ ಮಾಡಿ ಎಲ್ಲಿಗೆ ಹೋಗಬೇಕು ಅನ್ನೋ ಆತಂಕದಲ್ಲಿದ್ದಾರೆ.