ದಕ್ಷಿಣ ಕಾಶಿ ನಂಜನಗೂಡು ದೇಗುಲದ ಕಾಣಿಕೆ ಎಣಿಕೆ ಕಾರ್ಯ ಮುಕ್ತಾಯ.. 1 ತಿಂಗಳಿನಲ್ಲಿ ಸಂಗ್ರಹವಾದ ಮೊತ್ತ ಎಷ್ಟು ಗೊತ್ತಾ?

ಕೇವಲ ಒಂದು ತಿಂಗಳಲ್ಲಿ ಒಂದು ಕೋಟಿಗೂ ಅಧಿಕ ಹಣ ನಂಜುಂಡೇಶ್ವರ ದೇವಾಲಯದ ಹುಂಡಿಯಲ್ಲಿ ಸಂಗ್ರಹವಾಗಿದ್ದು 70 ಗ್ರಾಂ ಚಿನ್ನ, 3 ಕೆಜಿ 50 ಗ್ರಾಂನಷ್ಟು ಬೆಳ್ಳಿ ಸಂಗ್ರಹವಾಗಿದೆ. ಜೊತೆಗೆ 13 ನಿಷೇಧಿತ ನೋಟುಗಳು, 2 ವಿದೇಶಿ ಕರೆನ್ಸಿ ಪತ್ತೆಯಾಗಿವೆ.

ದಕ್ಷಿಣ ಕಾಶಿ ನಂಜನಗೂಡು ದೇಗುಲದ ಕಾಣಿಕೆ ಎಣಿಕೆ ಕಾರ್ಯ ಮುಕ್ತಾಯ.. 1 ತಿಂಗಳಿನಲ್ಲಿ ಸಂಗ್ರಹವಾದ ಮೊತ್ತ ಎಷ್ಟು ಗೊತ್ತಾ?
ನಂಜನಗೂಡಿನ ನಂಜುಂಡೇಶ್ವರ ದೇವಾಲಯದ ಹುಂಡಿಯಲ್ಲಿ ಸಂಗ್ರಹವಾಗಿದ್ದ ಕಾಣಿಕೆ
ಆಯೇಷಾ ಬಾನು Edited By: ಸಾಧು ಶ್ರೀನಾಥ್​

Updated on: Jan 30, 2021 | 10:07 AM

ಮೈಸೂರು: ದಕ್ಷಿಣ ಕಾಶಿ ನಂಜನಗೂಡಿನ ನಂಜುಂಡೇಶ್ವರ ದೇವಾಲಯದ ಹುಂಡಿಗಳ ಕಾಣಿಕೆ ಎಣಿಕೆ ಕಾರ್ಯ ಪೂರ್ಣಗೊಂಡಿದೆ. ದೇವಾಲಯದ ಹುಂಡಿಯಲ್ಲಿ 1 ಕೋಟಿ 1 ಲಕ್ಷ 71 ಸಾವಿರದ 910 ರೂಪಾಯಿ ಕಾಣಿಕೆ ಹಣ ಸಂಗ್ರಹವಾಗಿದೆ.

ಕೇವಲ ಒಂದು ತಿಂಗಳಲ್ಲಿ ಒಂದು ಕೋಟಿಗೂ ಅಧಿಕ ಹಣ ನಂಜುಂಡೇಶ್ವರ ದೇವಾಲಯದ ಹುಂಡಿಯಲ್ಲಿ ಸಂಗ್ರಹವಾಗಿದ್ದು 70 ಗ್ರಾಂ ಚಿನ್ನ, 3 ಕೆಜಿ 50 ಗ್ರಾಂನಷ್ಟು ಬೆಳ್ಳಿ ಸಂಗ್ರಹವಾಗಿದೆ. ಜೊತೆಗೆ 13 ನಿಷೇಧಿತ ನೋಟುಗಳು, 2 ವಿದೇಶಿ ಕರೆನ್ಸಿ ಪತ್ತೆಯಾಗಿವೆ.

ಮುಂದುವರಿದ ನಿಷೇಧಿತ ನೋಟುಗಳ ಕಾರುಬಾರು
7,500 ರೂ ಮೌಲ್ಯದ ನಿಷೇಧಿತ ನೋಟುಗಳು ಪತ್ತೆಯಾಗಿದ್ದು ಅದರಲ್ಲಿ 1,000 ರೂ ಮೌಲ್ಯದ 2 ನೋಟುಗಳು ಹಾಗೂ 500 ರೂ ಮೌಲ್ಯದ 11 ನಿಷೇಧಿತ ನೋಟುಗಳು ಪತ್ತೆಯಾಗಿವೆ. ಜೊತೆಗೆ 2 ವಿದೇಶಿ ಕರೆನ್ಸಿಗಳು ಪತ್ತೆಯಾಗಿವೆ. ದೇವಾಲಯದ 20 ಕ್ಕೂ ಹೆಚ್ಚು ಹುಂಡಿಗಳ ಕಾಣಿಕೆ ಎಣಿಕೆ ಕಾರ್ಯ ಮುಗಿದಿದ್ದು ಸುಮಾರು 50 ಕ್ಕೂ ಹೆಚ್ಚು ಸಿಬ್ಬಂದಿಗಳು ಈ ಕಾರ್ಯದಲ್ಲಿ ಭಾಗಿಯಾಗಿದ್ದರು. ಕೊರೊನಾ ಅಟ್ಟಹಾಸ ಕಡಿಮೆಯಾಗಿದ್ದು ಈಗ ಭಕ್ತರ ಸಂಖ್ಯೆ ಹೆಚ್ಚಾಗಿದೆ.

ಚಾಮುಂಡೇಶ್ವರಿ ದೇಗುಲದ ಹುಂಡಿಯಲ್ಲಿ ಬ್ಯಾನ್ಡ್​​ ನೋಟುಗಳು ಪತ್ತೆ..

ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Loading...
Unable to load recommendations.
Follow Us