‘ಥಟ್​ ಅಂತ’ ಕೊರೊನಾ ಲಸಿಕೆ ಹಾಕಿಸಿಕೊಂಡು, ಧೈರ್ಯ ತುಂಬಿದ ಡಾ. ಸೋಮೇಶ್ವರ ನಾರಪ್ಪ!

ಚಂದನ ವಾಹಿನಿಯಲ್ಲಿ ಬರುವ ಥಟ್​ ಅಂತ ಹೇಳಿ ಕಾರ್ಯಕ್ರಮ ನಡೆಸಿಕೊಡುವ ಡಾ. ಸೋಮೇಶ್ವರ ನಾರಪ್ಪ ಅವರು ಕೊರೊನಾ ಲಸಿಕೆ ತೆಗೆದುಕೊಂಡಿದ್ದು, ಇದರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.

  • TV9 Web Team
  • Published On - 14:34 PM, 18 Jan 2021
‘ಥಟ್​ ಅಂತ’ ಕೊರೊನಾ ಲಸಿಕೆ ಹಾಕಿಸಿಕೊಂಡು, ಧೈರ್ಯ ತುಂಬಿದ ಡಾ. ಸೋಮೇಶ್ವರ ನಾರಪ್ಪ!
ಲಸಿಕೆ ಪಡೆದ ಸೋಮೇಶ್ವರ ನಾರಪ್ಪ

ಬೆಂಗಳೂರು: ಕೊರೊನಾ ವೈರಸ್​ ಮಟ್ಟ ಹಾಕಲು ಲಸಿಕೆ ಕಂಡು ಹಿಡಿಯಲಾಗಿದೆ. ಅಗತ್ಯ ಸೇವೆ ಒದಗಿಸುವವರಿಗೆ ಈಗ ಕೊರೊನಾ ಲಸಿಕೆ ನೀಡಲಾಗುತ್ತಿದೆ. ಆದರೆ, ಕೆಲವರಿಗೆ ಈ ಔಷಧ ಅಡ್ಡಪರಿಣಾಮ ಬೀರಿದೆ. ಇದರಿಂದ ಅನೇಕರು ಔಷಧ ಪಡೆದುಕೊಳ್ಳಲು ಹಿಂದೇಟು ಹಾಕಿದ್ದರು. ಈ ಬೆನ್ನಲ್ಲೇ ಅನೇಕರು ಯಾವುದೇ ಅಂಜಿಕೆ ಇಲ್ಲದೆ ಔಷಧ ತೆಗೆದುಕೊಳ್ಳಿ ಎಂದು ಧೈರ್ಯ ತುಂಬಿದ್ದಾರೆ.

ಚಂದನ ವಾಹಿನಿಯಲ್ಲಿ ಬರುವ ಥಟ್​ ಅಂತ ಹೇಳಿ ಕಾರ್ಯಕ್ರಮ ನಡೆಸಿಕೊಡುವ ಡಾ. ಸೋಮೇಶ್ವರ ನಾರಪ್ಪ ಅವರು ಕೊರೊನಾ ಲಸಿಕೆ ತೆಗೆದುಕೊಂಡಿದ್ದು, ಇದರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ಧೈರ್ಯದಿಂದ ಕೊರೊನಾ ಲಸಿಕೆ ಪಡೆದುಕೊಳ್ಳಿ ಎಂದೂ ಕಿವಿಮಾತು ಹೇಳಿದ್ದಾರೆ.

ಇಂದು ಬೆಳಿಗ್ಗೆ 9.50ಕ್ಕೆ, ಹೆಬ್ಬಾಳದ ಕೊಲಂಬಿಯ ಏಷ್ಯಾ ಆಸ್ಪತ್ರೆಯಲ್ಲಿ ಕೋವಿಶೀಲ್ಡ್ ಮೊದಲ ಡೋಸ್ ಪಡೆದೆ. ಆರಾಮವಾಗಿದ್ದೇನೆ. ನೀವೂ ಧೈರ್ಯವಾಗಿ ಹಾಕಿಸಿಕೊಳ್ಳಿ ಎಂದು ಫೇಸ್​ಬುಕ್​ನಲ್ಲಿ ಸ್ವತಃ ವೈದ್ಯರೂ ಆದ  ಸೋಮೇಶ್ವರ ನಾರಪ್ಪ ಬರೆದುಕೊಂಡಿದ್ದಾರೆ.

ಶನಿವಾರದದಿಂದ ಕೊರೊನಾ ಔಷಧ ನೀಡುವ ಕಾರ್ಯ ಆರಂಭವಾಗಿದೆ. ಭಾರತದಲ್ಲಿ ಅನೇಕರು ಕೊರೊನಾ ಔಷಧ ಪಡೆದುಕೊಂಡಿದ್ದು, ಕೆಲವರಲ್ಲಿ ಅಲರ್ಜಿ ಸಮಸ್ಯೆ ಕಾಣಿಸಿಕೊಂಡಿದೆ. ಈ ವರೆಗೆ ಮೂವರ ಸ್ಥಿತಿ ಗಂಭೀರವಾಗಿದೆ.

ದೆಹಲಿ: ಕೊರೊನಾ ಲಸಿಕೆ ಪಡೆದ 51 ಜನರಿಗೆ ಅಲರ್ಜಿ, ಓರ್ವನ ಸ್ಥಿತಿ ಗಂಭೀರ