ಬಹುಪ್ರತಿಭಾನ್ವಿತ ನಿರ್ಮಲಾ ಚೆನಪ್ಪ ಅವರು ಬಿಗ್ ಬಾಸ್ ಕನ್ನಡ ಸೀಸನ್ 8 ರ ಸ್ಪರ್ಧಿಗಳಲ್ಲಿ ಒಬ್ಬರಾಗಿ ಭಾಗವಹಿಸುತ್ತಿದ್ದಾರೆ. ಅವರು 2012 ರಲ್ಲಿ ತಲ್ಲಣ ಚಿತ್ರಕ್ಕಾಗಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಮೂಲತಃ ಮಧ್ಯಮ ವರ್ಗದಿಂದ ಬಂದಿರುವ ಚೆನ್ನಪ್ಪ ತಮ್ಮ ಪಧವಿ ಶಿಕ್ಷಣವನ್ನು ಮುಗಿಸಿದ್ದಾರೆ. ಕನ್ನಡ ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ತಮ್ಮ ನೆಲೆಕಂಡುಕೊಂಡಿರುವ ಈ ನಟಿ, ಕನ್ನಡದ ಖ್ಯಾತ ಬರಹಗಾರ ಪೂರ್ಣ ಚಂದ್ರ ತೇಜಸ್ವಿಯವರ ಕಿರಗೂರಿನ ಗೈಯಾಳಿಗಳು ಕಾದಂಬರಿ ಆಧಾರಿತ ಚಿತ್ರಕ್ಕೆ ಡಬ್ಬಿಂಗ್ ಕಲಾವಿದೆಯಾಗಿ ಸಹ ಕೆಲಸ ಮಾಡಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 8ರ 17ನೇ ಅಭ್ಯರ್ಥಿಯಾಗಿ ನಿರ್ಮಲಾ ಮನೆಗೆ ಆಗಮಿಸಿದ್ದಾರೆ.
ಈಕೆ ಟಿವಿ ಕಾರ್ಯಕ್ರಮಗಳನ್ನು ನಿರ್ದೇಶಿಸುವುದರ ಜೊತೆಗೆ, ಅವರು ಅದ್ಭುತ ಡಬ್ಬಿಂಗ್ ಕಲಾವಿದೆ ಮತ್ತು ನಟಿ ಕೂಡ ಆಗಿದ್ದಾರೆ. 2012 ರಲ್ಲಿ ಅವರು ಅತ್ಯುತ್ತಮ ನಟನೆಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 2013 ರಲ್ಲಿ ಅವರು ತಲ್ಲಣ ಚಿತ್ರದಲ್ಲಿ ನಟಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ 2016 ರಲ್ಲಿ ಅವರು ಜಿಗರ್ತಂಡಾ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನು ಕಾರ್ತಿಕ್ ಸುಬ್ಬರಾಜ್ ಬರೆದು, ಶಿವ ಗಣೇಶ್ ನಿರ್ದೇಶಿಸಿದ್ದು, ಕಿಚ್ಚಾ ಕ್ರಿಯೇಷನ್ಸ್ ಮತ್ತು ಎಸ್‌ಆರ್‌ವಿ ಪ್ರೊಡಕ್ಷನ್ಸ್ ನಿರ್ಮಿಸಿದೆ.
ಬಿಗ್ ಬಾಸ್ ವೀಕ್ಷಣೆ ಮಾಡೋದು ಎಲ್ಲಿ?
ಭಾನುವಾರ ಸಂಜೆ 6 ಗಂಟೆಗೆ ಬಿಗ್ ಬಾಸ್ 8ಕ್ಕೆ ಅದ್ದೂರಿಯಾಗಿ ಚಾಲನೆ ಸಿಕ್ಕಿದೆ. ಕಿಚ್ಚ ಸುದೀಪ್ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಪ್ರತಿ ದಿನ ರಾತ್ರಿ 9:30ರಿಂದ ಬಿಗ್ ಬಾಸ್ ಕಾರ್ಯಕ್ರಮ ಪ್ರಸಾರವಾಗಲಿದೆ. ಬಿಗ್ ಬಾಸ್ ಎಲ್ಲಿ ವೀಕ್ಷಣೆ ಮಾಡಬೇಕು ಎನ್ನುವುದು ಅನೇಕರ ಪ್ರಶ್ನೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್ ಬಾಸ್ 8 ಪ್ರಸಾರವಾಗುತ್ತದೆ. ಆನ್ಲೈನ್ನಲ್ಲಿ ಬಿಗ್ ಬಾಸ್ ನೋಡಬೇಕು ಎಂದಾದರೆ ನೀವು ವೂಟ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬೇಕು. ಜಿಯೋ ಟಿವಿಯಲ್ಲಿ ಕೂಡ ನೀವು ಬಿಗ್ ಬಾಸ್ ವೀಕ್ಷಣೆ ಮಾಡಬಹುದಾಗಿದೆ. ಜಿಯೋ ಟಿವಿಗೆ ತೆರಳಿ ಕಲರ್ಸ್ ಕನ್ನಡ ಎಂದು ಸರ್ಚ್ ಮಾಡಿದರೆ ಕಲರ್ಸ್ ಕನ್ನಡ ವಾಹಿನಿ ಸಿಗಲಿದೆ. ಅದರಲ್ಲಿ ನೀವು ಬಿಗ್ ಬಾಸ್ ವೀಕ್ಷಿಸಬಹುದು.
ಇದನ್ನೂ ಓದಿ: Bigg Boss Kannada 8 Launch LIVE Updates: ಮೂರನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆ ಪ್ರವೇಶಿಸಿದ ಶಂಕರ್ ಅಶ್ವತ್ಥ್
Shankar Ashwath Profile: ಚಾಮಯ್ಯ ಮೇಸ್ಟ್ರ ಮಗ ಶಂಕರ್ ಅಶ್ವಥ್ ಬಿಗ್ ಬಾಸ್ ಮನೆಯ ಹಿರಿಯ ಅಭ್ಯರ್ಥಿ
Published On - 10:52 pm, Sun, 28 February 21