AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shankar Ashwath Profile: ಚಾಮಯ್ಯ ಮೇಸ್ಟ್ರ ಮಗ ಶಂಕರ್ ಅಶ್ವಥ್ ಬಿಗ್ ಬಾಸ್ ಮನೆಯ ಹಿರಿಯ ಅಭ್ಯರ್ಥಿ

Bigg Boss Kannada Season 8, Shankar Ashwath Profile: ಸ್ಯಾಂಡಲ್‌ವುಡ್‌ನ ಅನುಭವಿ ಕಲಾವಿದ ಶಂಕರ್‌ ಅಶ್ವತ್ಥ್‌ ಸೋಶಿಯಲ್‌ ಮೀಡಿಯಾ ಮೂಲಕ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತ ಇರುತ್ತಾರೆ. ಅವರು ಈಗ ಬಿಗ್ ಬಾಸ್ ಮನೆಗೆ ಆಗಮಿಸಿದ್ದಾರೆ.

Shankar Ashwath Profile: ಚಾಮಯ್ಯ ಮೇಸ್ಟ್ರ ಮಗ ಶಂಕರ್ ಅಶ್ವಥ್ ಬಿಗ್ ಬಾಸ್ ಮನೆಯ ಹಿರಿಯ ಅಭ್ಯರ್ಥಿ
ಶಂಕರ್ ಅಶ್ವಥ್
TV9 Web
| Edited By: |

Updated on:Apr 06, 2022 | 7:38 PM

Share

Bigg Boss Kannada Season 8 Contestant Dhanushree Profile: ಶಂಕರ್ ಅಶ್ವಥ್ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ಪ್ರಮುಖ ಪೋಷಕ ನಟ. ಇವರು ಕನ್ನಡ ಸಿನಿರಂಗದ ದಿಗ್ಗಜ ನಟ ಅಶ್ವಥ್ ರವರ ಪುತ್ರರು. ಹಲವಾರು ಚಿತ್ರಗಳಲ್ಲಿ ತಮ್ಮ ಪ್ರಬುದ್ಧ ನಟನೆಯಿಂದ ಅಭಿನಯ ಪ್ರೌಢಿಮೆ ಮೆರೆದಿದ್ದಾರೆ. ಶಂಕರ್ ಅಶ್ವಥ್ ಬಿಗ್ ಬಾಸ್ ಕನ್ನಡ ಸೀಸನ್ 8ರ 3ನೇ ಅಭ್ಯರ್ಥಿಯಾಗಿ ಮನೆಗೆ ಪ್ರವೇಶಿಸಿದ್ದಾರೆ. 

ಸ್ಯಾಂಡಲ್‌ವುಡ್‌ನ ಅನುಭವಿ ಕಲಾವಿದ ಶಂಕರ್‌ ಅಶ್ವತ್ಥ್‌ ಸೋಶಿಯಲ್‌ ಮೀಡಿಯಾ ಮೂಲಕ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತ ಇರುತ್ತಾರೆ. ನಿಮಗೆ ಗೊತ್ತಿರಬಹುದು 80-90 ರ ದಶಕದಲ್ಲಿ ಸಿನಿಮಾರಂಗವನ್ನು ಆಳಿದ ಹಿರಿಯ ಕಲಾವಿದರ ಬಹುತೇಕ ಮಕ್ಕಳುಗಳು ತಮ್ಮ ತಂದೆಯಂತೆ ಚಿತ್ರರಂಗದಲ್ಲಿ ನೆಲೆಯೂರಲಿಲ್ಲ.. ಅಭಿನಯ ಎಂಬುದು ತಮ್ಮ ರಕ್ತದಲ್ಲೇ ಬಂದಿದ್ದರೂ ನಟನಾ ಕೌಶಲ್ಯತೆಗಳನ್ನು ಹೊಂದಿದ್ದರು ನಿರ್ದೇಶಕ ಮತ್ತು ನಿರ್ಮಾಪಕರು ಅವಕಾಶಗಳನ್ನು ನೀಡುತ್ತಿರಲಿಲ್ಲ.

ಈ ಸಾಲಿನಲ್ಲಿ ಚಾಮಯ್ಯ ಮೇಷ್ಟ್ರು ಅವರ ಪುತ್ರ ಶಂಕರ್ ಅಶ್ವತ್ಥ್ ಅವರು ಸಹ ಒಬ್ಬರು. ಅವರ ಸದ್ಯದ ಪರಿಸ್ಥತಿ ಕೇಳಿದರೆ ಕರುಣಾಜನಕವೆನಿಸುತ್ತದೆ. ಹೌದು ಹಿರಿಯ ಕಲಾವಿದ ಅಶ್ವಥ್ ಅವರ ಪುತ್ರ ಶಂಕರ್ ಅಶ್ವಥ್ ಅವರು ಸಿನಿಮಾಗಳಲ್ಲಿ ನಟಿಸಲು ಅವಕಾಶವಿಲ್ಲದೆ ಊಬರ್ ಕ್ಯಾಬ್ ಡ್ರೈವಿಂಗ್ ಮಾಡುತ್ತಿರುವುದು ಬೇಸರದ ಸಂಗತಿ. ಈ ವಿಚಾರವನ್ನು ತಿಳಿದ ಕನ್ನಡದ ಡಿ ಬಾಸ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಚಿತ್ರ ಯಜಮಾನದಲ್ಲಿ ಅಭಿನಯಿಸಲು ಅವಕಾಶ ಮಾಡಿಕೊಟ್ಟಿದ್ದರು.

ಶಂಕರ್ ಅಶ್ವಥ್ ಬಿಗ್ ಬಾಸ್ ವೇದಿಕೆಗೆ ಆಗಮಿಸಿ ಮಾತನಾಡಿದರು. ತಂದೆ ಕೆ.ಎಸ್. ಅಶ್ವಥ್​ ಆಸ್ಪತ್ರೆಯಲ್ಲಿದ್ದಾಗ ಯಾವುದೇ ಸಹಾಯ ಬೇಕಿದ್ದರೂ ಕೇಳಿ ಎಂದು ಸುದೀಪ್ ಹೇಳಿದ್ದ ಮಾತುಗಳನ್ನು ಸ್ಮರಿಸಿಕೊಂಡರು. ಕಷ್ಟ ಕಾಲದಲ್ಲಿ, 60 ವರ್ಷ ದಾಟಿದ್ಧಾಗ ಏನೂ ಮಾಡದೆ ಕುಳಿತುಕೊಳ್ಳುವ ಬದಲು ಏನಾದರೂ ಕೆಲಸ ಮಾಡುವುದು ಒಳ್ಳೆಯದು ಎಂದು ತಿಳಿದೆ. ಕ್ಯಾಬ್ ಓಡಿಸಲು ಆರಂಭಿಸಿದೆ ಎಂದು ಹೇಳಿದರು.

ಬಿಗ್​ ಬಾಸ್​ ವೀಕ್ಷಣೆ ಮಾಡೋದು ಎಲ್ಲಿ? ಭಾನುವಾರ ಸಂಜೆ 6 ಗಂಟೆಗೆ ಬಿಗ್​ ಬಾಸ್​ 8ಕ್ಕೆ ಅದ್ದೂರಿಯಾಗಿ ಚಾಲನೆ ಸಿಕ್ಕಿದೆ. ಕಿಚ್ಚ ಸುದೀಪ್​ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಪ್ರತಿ ದಿನ ರಾತ್ರಿ 9:30ರಿಂದ ಬಿಗ್​ ಬಾಸ್​ ಕಾರ್ಯಕ್ರಮ ಪ್ರಸಾರವಾಗಲಿದೆ. ಬಿಗ್​ ಬಾಸ್​ ಎಲ್ಲಿ ವೀಕ್ಷಣೆ ಮಾಡಬೇಕು ಎನ್ನುವುದು ಅನೇಕರ ಪ್ರಶ್ನೆ.  ಕಲರ್ಸ್​ ಕನ್ನಡ ವಾಹಿನಿಯಲ್ಲಿ ಬಿಗ್​ ಬಾಸ್​ 8 ಪ್ರಸಾರವಾಗುತ್ತದೆ. ಆನ್​ಲೈನ್​ನಲ್ಲಿ ಬಿಗ್​ ಬಾಸ್​ ನೋಡಬೇಕು ಎಂದಾದರೆ ನೀವು ವೂಟ್​ ಆ್ಯಪ್​ ಡೌನ್​ಲೋಡ್​ ಮಾಡಿಕೊಳ್ಳಬೇಕು. ಜಿಯೋ ಟಿವಿಯಲ್ಲಿ ಕೂಡ ನೀವು ಬಿಗ್​ ಬಾಸ್​ ವೀಕ್ಷಣೆ ಮಾಡಬಹುದಾಗಿದೆ. ಜಿಯೋ ಟಿವಿಗೆ ತೆರಳಿ ಕಲರ್ಸ್​ ಕನ್ನಡ ಎಂದು ಸರ್ಚ್​ ಮಾಡಿದರೆ ಕಲರ್ಸ್​ ಕನ್ನಡ ವಾಹಿನಿ ಸಿಗಲಿದೆ. ಅದರಲ್ಲಿ ನೀವು ಬಿಗ್​ ಬಾಸ್​ ವೀಕ್ಷಿಸಬಹುದು.

ಇದನ್ನೂ ಓದಿ: Bigg Boss Kannada 8 Launch LIVE Updates: ಎರಡನೇ ಅಭ್ಯರ್ಥಿಯಾಗಿ ಶುಭಾ ಪೂಂಜಾ ಬಿಗ್​ ಬಾಸ್ ಮನೆಗೆ ಎಂಟ್ರಿ

Shubha Poonja Profile: ಮಾದಕ ನಟಿ ಶುಭಾ ಪೂಂಜಾ ಬಿಗ್ ಬಾಸ್ ಮನೆಗೆ ಎಂಟ್ರಿ!

Published On - 7:01 pm, Sun, 28 February 21

Follow Us
ಪೆಟ್ರೋಲ್, ಡಿಸೇಲ್ ಏರಿಕೆ ಭೀತಿ! ಪೆಟ್ರೋಲ್ ಬಂಕ್​ಗಳಿಗೆ ಮುಗಿಬಿದ್ದ ಜನ
ಪೆಟ್ರೋಲ್, ಡಿಸೇಲ್ ಏರಿಕೆ ಭೀತಿ! ಪೆಟ್ರೋಲ್ ಬಂಕ್​ಗಳಿಗೆ ಮುಗಿಬಿದ್ದ ಜನ
ರೋಚಕ ಪಂದ್ಯದಲ್ಲಿ 2 ರನ್​ಗಳ ಜಯ ಸಾಧಿಸಿ ಫೈನಲ್​ಗೇರಿದ ಹೈದರಾಬಾದ್
ರೋಚಕ ಪಂದ್ಯದಲ್ಲಿ 2 ರನ್​ಗಳ ಜಯ ಸಾಧಿಸಿ ಫೈನಲ್​ಗೇರಿದ ಹೈದರಾಬಾದ್
ಅಳಿಯನ ಮನೆಗೇ ಕನ್ನ ಹಾಕಿ ಸಿಕ್ಕಿಬಿದ್ದ ಅತ್ತೆ: ಕದ್ದ ಬಂಗಾರ ಎಷ್ಟು ಗೊತ್ತಾ?
ಅಳಿಯನ ಮನೆಗೇ ಕನ್ನ ಹಾಕಿ ಸಿಕ್ಕಿಬಿದ್ದ ಅತ್ತೆ: ಕದ್ದ ಬಂಗಾರ ಎಷ್ಟು ಗೊತ್ತಾ?
ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿತ: ಇಬ್ಬರು ಅಧಿಕಾರಿಗಳ ತಲೆಂಡ
ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿತ: ಇಬ್ಬರು ಅಧಿಕಾರಿಗಳ ತಲೆಂಡ
ಪಶ್ಚಿಮ ಬಂಗಾಳದ 15 ಬೂತ್​ಗಳಲ್ಲಿ ಮರು ಮತದಾನ: ಮತದಾರರ ಜೋಶ್​​ ನೋಡಿ
ಪಶ್ಚಿಮ ಬಂಗಾಳದ 15 ಬೂತ್​ಗಳಲ್ಲಿ ಮರು ಮತದಾನ: ಮತದಾರರ ಜೋಶ್​​ ನೋಡಿ
ಮರುಎಣಿಕೆಗೂ ಮೊದಲೇ ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಬಾಕ್ಸ್​ ಸೀಲ್​​ ಓಪನ್​?
ಮರುಎಣಿಕೆಗೂ ಮೊದಲೇ ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಬಾಕ್ಸ್​ ಸೀಲ್​​ ಓಪನ್​?
ಛಾಯಾ ಸಿಂಗ್ ಹುಡುಗನಾಗಿ, ರಾಜೇಶ್ ಹುಡುಗಿಯಾಗಿ ಬದಲಾದ್ರೆ ಹೇಗಿರ್ತಾರೆ?
ಛಾಯಾ ಸಿಂಗ್ ಹುಡುಗನಾಗಿ, ರಾಜೇಶ್ ಹುಡುಗಿಯಾಗಿ ಬದಲಾದ್ರೆ ಹೇಗಿರ್ತಾರೆ?
ಫಲ ಸಿಗಬೇಕು ಎಂದರೆ ನೀವು ಯಾವ ದಿನ ಉಪವಾಸ ಮಾಡಬೇಕು ಗೊತ್ತಾ?
ಫಲ ಸಿಗಬೇಕು ಎಂದರೆ ನೀವು ಯಾವ ದಿನ ಉಪವಾಸ ಮಾಡಬೇಕು ಗೊತ್ತಾ?
ಇಂದು ಈ ರಾಶಿಯವರು ಅನ್ಯರ ಮಾತಿಗೆ ಹೆಚ್ಚು ಒತ್ತು ಕೊಡಬೇಡಿ
ಇಂದು ಈ ರಾಶಿಯವರು ಅನ್ಯರ ಮಾತಿಗೆ ಹೆಚ್ಚು ಒತ್ತು ಕೊಡಬೇಡಿ
ಶೀಘ್ರವೇ ದರ ಏರಿಕೆ ಶಾಕ್​​?: ಪೆಟ್ರೋಲ್​​ ರೇಟ್​​ 5 ರೂ. ಏರಿಕೆ ಸಾಧ್ಯತೆ
ಶೀಘ್ರವೇ ದರ ಏರಿಕೆ ಶಾಕ್​​?: ಪೆಟ್ರೋಲ್​​ ರೇಟ್​​ 5 ರೂ. ಏರಿಕೆ ಸಾಧ್ಯತೆ